ಶಾರ್ಟ್ಕ್ ಸರ್ಕಿಟ್: ಶಿರಹಟ್ಟಿಯ ಅಂಬಿಕಾ ಸ್ಟೀಲ್ಸ್ನಲ್ಲಿ ಅಗ್ನಿ ಅವಘಡ ಸುಮಾರು 15 ಲಕ್ಷಕ್ಕೂ ಅಧಿಕ ಹಾನಿ

ಲೋಕದರ್ಶನ ವರದಿ

ಶಿರಹಟ್ಟಿ: ಪಟ್ಟಣದ ಮಾಗಡಿ ರಸ್ತೆಯಲ್ಲಿನ ಅಂಬಿಕಾ ಸ್ಟೀಲ್ ಅಂಗಡಿಯಲ್ಲಿ ಶಾರ್ಟ್ಕ್ ಸರ್ಕಿಟ್ ನಿಂದಾಗಿ ಅಗ್ನಿ ಅವಘಡ  ಸಂಭವಿಸಿ ಸುಮಾರು 15 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ.

ಘಟನೆಯ ವಿವರ: ಪಟ್ಟಣದ ಮಾಗಡಿ ರಸ್ತೆಯಲ್ಲಿ ಅಂಬಿಕಾ ಸ್ಟೀಲ್ ಎಂಬ ಹೆಸರಿನಲ್ಲಿ ಅಂಗಡಿಯಲ್ಲಿ ಶಾಟರ್್ ಸಕರ್ಿಟ್ ಸಂಭವಿಸಿ ಅಗ್ನಿ ಅವಘಡ ಗುರುವಾರ ಸಾಯಂಕಾಲ 7 ಗಂಟೆಯ ಸುಮಾರಿಗೆ ಸಂಭವಿಸಿದೆ. ಶಾರ್ಟ ಸಕರ್ಿಟನಿಂದಾಗಿ ಅಂಗಡಿಯಲ್ಲಿದ್ದ ಹಲವಾರು ಮೌಲಾಧಾರಿತ ಸಾಮಗ್ರಿಗಳು ಸುಟ್ಟು ಕರಕಲಾಗಿದೆ. ಅಂಗಡಿಯಲ್ಲಿನ ಕಂಪ್ಯೂಟರ, ಸಿ.ಸಿ.ಕ್ಯಾಮರಾ, ಬೆಲೆಬಾಳುವ ಪೇಂಟಿನ ಡಬ್ಬಿಗಳು, ಹಿತ್ತಾಳೆ ಸಾಮಗ್ರಿಗಳು, ವರ್ಷದ ಕಾಗದ ಪತ್ರಗಳು, ಟಿನ್ನರ ಡಬ್ಬಿಗಳು, ಜೋಲಾಸ್, ಜಾಲರಿಗಳು, ಮುಂತಾದ ಸಾಮಗ್ರಿಗಳು ಸುಟ್ಟು ಕರಲಾಗಿವೆ. ಹಣದ ಪೆಟ್ಟಿಗೆಯಲ್ಲಿನ ಹಣ ಸುಟ್ಟಿವೆ. ಹೀಗೆ ಒಟ್ಟಾರೆ ಸುಮಾರು 15ರಿಂದ 20 ಲಕ್ಷ ಮೌಲ್ಯದಷ್ಟು  ಹಾನಿಯಾಗಿದೆ. 

ಈ ಕುರಿತು ಅಂಗಡಿ ಮ್ಯಾನೇಜರ, ರಮೇಶ ಪಟೇಲ್ ಪತ್ರಿಕೆಯೊಂದಿಗೆ ಮಾತನಾಡಿ, ಸಂಜೆ ಯಾಯಿತು ಇನ್ನೇನು ಅಂಗಡಿ ಬಂದ್ ಮಾಡಬೇಕು ಎನ್ನುವಷ್ಟರಲ್ಲಿ ಏಕಾಏಕಿಯಾಗಿ ಹೊಗೆ ಆರಂಭವಾಯಿತು. ಇದು ಎಲ್ಲಿಂದ  ಆರಂಭವಾಯಿತು ಎಂದು ಹುಡುಕುವಷ್ಟರಲ್ಲಿಯೇ ಬೆಂಕಿಯ ಕೆನ್ನಾಲಿಗೆ ಅಂಗಡಿಯನ್ನು ಆವರಿಸಿತು. ಅಂಗಡಿಯಲ್ಲಿನ ಬೆಳಬಾಳು ವಸ್ತುಗಳು ಹೊರಹಾಕದಷ್ಟು ಅವಕಾಶವನ್ನು ನೀಡದೇ ಹೊಗೆ ಸಂಪೂರ್ಣವಾಗಿ ಆವರಿಸಿದ್ದರಿಂದ ತಕ್ಷಣವೇ ಅಗ್ನಿ ಶಾಮಕ ದಳಕ್ಕೆ ಪೋನ್ ಮೂಲಕ ತಿಳಿಸಿದಾಗ ತಕ್ಷಣವೇ ಕಾಯೋನ್ಮುಖರಾಗಿ ಅಂಗಡಿಯಲ್ಲಿ ಬೆಂಕಿಯನ್ನು ನಂದಿಸಲು ಶ್ರಮಿಸಿದರು.

ಇವರ ಜೊತೆಗೆ ಪೋಲೀಸ್ ಸಿಬ್ಬಂದಿ ಮತ್ತು ಕೆಇಬಿ ಸಿಬ್ಬಂದಿಗಳು ಕೂಡಾ ಬೇಗನೆ ದೌಡಾಯಿಸಿ ವಿದ್ಯುತ ಸಂಪರ್ಕವನ್ನು ಸ್ಥಗಿತಗೊಳಿಸಿದರು. ಇದರಿಂದ ಬಾರೀ ಅನಾಹುತವನ್ನು ತಪ್ಪಿಸಿದರು. ಅಂಗಡಿಯಲ್ಲಿ ಒಟ್ಟು 75 ರಿಂದ 80 ಲಕ್ಷ ಮೌಲ್ಯದ ಸ್ಟೀಲ್ ಮತ್ತು ಇತರೆ ಸಾಮಗ್ರಿಗಳು ಇದ್ದವು ಸುಟ್ಟಿರುವ  ವಸ್ತುಗಳನ್ನು ನೋಡಿದರೆ ಅಂದಾಜು 15-20 ಲಕ್ಷ ಮೌಲ್ಯದ ವಸ್ತುಗಳಯ ಸುಟ್ಟು ಕರಕಲಾಗಿವೆ ಎಂದು ಗೋಗರೆದರು.