ಫೆ.21ಕ್ಕೆ ಶುಬ್ ಮಂಗಲ್ ಜ್ಯಾದಾ ಸಾವಧಾನ್ ಚಿತ್ರ ಬಿಡುಗಡೆ

 ಮುಂಬೈ ನ 18 :     ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರ ಶುಬ್ ಮಂಗಲ್ ಜ್ಯಾದಾ ಸಾವ್ ಧಾನ್  ಚಿತ್ರ 2029ರ ಫೆಬ್ರವರಿ 21ಕ್ಕೆ ಬಿಡುಗಡೆಯಾಗಲಿದೆ.      ಖುರಾನಾ ಅವರ  ಶುಭ್ ಮಂಗಲ್ ಸಾವಧಾನ್ ಚಿತ್ರದ ಅವತರಣಿಕೆ ಇದಾಗಿದ್ದು, ಚಿತ್ರದ ಹೊಸ ಪೋಸ್ಟರ್ ಕೂಡ ಬಿಡುಗಡೆಗೊಂಡಿದೆ. ಇದರೊಂದಿಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.      ಪೋಸ್ಟರ್ ನಲ್ಲಿ ಆಯುಷ್ಮಾನ್ ಖುರಾನಾ ಓಡುತ್ತಿರುವ ದೃಶ್ಯವಿದ್ದು, ಅವರ ಹಿಂದೆ ಹಲವು ಜನರು ಓಡುತ್ತಿದ್ದಾರೆ.ಇದು ಯಾವುದೋ ವಿವಾಹ ಮಂಟಪದಿಂದ ಓಡುತ್ತಿರುವ ದೃಶ್ಯದಂತಿದೆ.     ಚಿತ್ರದಲ್ಲಿ ಖುರಾನಾ ಜೊತೆಗೆ ಜಿತೇಂದ್ರ ಕುಮಾರ್ ಇರಲಿದ್ದು, ಚಿತ್ರದ ಕತೆಯನ್ನು ಅಕ್ಷಯ್ ಕುಮಾರ್ ನಿರೂಪಿಸಲಿದ್ದಾರೆ. ಚಿತ್ರಕತೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹಿತೇಶ್ ಕೇವಲಿಯಾ ಹೊತ್ತುಕೊಂಡಿದ್ದಾರೆ.