ಶ್ರೀನಗರ: ಪಾಕಿಸ್ತಾನದಲ್ಲಿ ಹಿಂದು ಬಾಲಕೀಯರನ್ನು ಮತಾಂತರಗೊಳಿಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಮಹಬೂಬಾ

ಶ್ರೀನಗರ, ಮಾ.25 : ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಹಿಂದು ಬಾಲಕೀಯರ ಇಸ್ಲಾಂಗೆ ಮತಾಂತರ ಹಾಗೂ ಬಲವಂತದ ಮದುವೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಿಡಿಪಿ ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅಲ್ಲಿನ ಜನರ ಹೊಸ ಪಾಕಿಸ್ತಾನದಲ್ಲಿ ಬಾಲಕೀಯರ ಅಪಹರಣ ಮಾಡಿ ಅಪರಿಚಿತ ವ್ಯಕ್ತಿಗಳ ಜೊತೆ ಮದುವೆ ಮಾಡುವುದು ಅಪರಾಧ. ಅದು ಪಾಕಿಸ್ತಾನವೇ ಆಗಿರಬಹುದು ಅಥವಾ ಭಾರತ. ಅಲ್ಪಸಂಖ್ಯಾತರ ಸುರಕ್ಷೆ ಹಾಗೂ ಅವರ ಗೌರವಯುತ ಜೀವನ ನಿಶ್ಚಿತವಾಗಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಬಾಲಕೀಯರನ್ನು ಅಪಹರಿಸಿ ಅವರ ಬಲವಂತದ ಮದುವೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಅಲ್ಪಸಂಖ್ಯಾತರ ರಕ್ಷಣೆಗೆ ಶಿಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಮಹಬೂಬಾ ಆಗ್ರಹಿಸಿದ್ದಾರೆ.

ಹೋಳಿ ಹಬ್ಬದ ದಿನದಂದು ಸಿಂಧ ಪ್ರಾಂತ್ಯದ ಘೋಟಕಿ ಜಿಲ್ಲೆಯಲ್ಲಿ ಪ್ರಭಾವಶಾಲಿ ಸಂಘಟನೆಯೊಂದು ಇಬ್ಬರು ಅಪ್ರಾಪ್ತ ಹಿಂದು ಬಾಲಕಿಯರನ್ನು ಅಪಹರಿಸಿ ಅವರನ್ನು ಮತಾಂತರಗೊಳಿಸಿ ಅವರ ಬಲವಂತದ ಮದುವೆ ಮಾಡಿತ್ತು