ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ

Shri Satyapramod Haridasa Literary Award Ceremony

ಧಾರವಾಡ 22: ಇಂದು ಒತ್ತಡದ ಜೀವನದಲ್ಲಿ ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದೆವೆ. ನಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದರ ಜೊತೆಗೆ ನಮ್ಮ ಭವಿಷ್ಯದ ಮಕ್ಕಳಿಗೆ ಸಮಯ ಪಾಲನೆಯ ಮತ್ತು ಒಳ್ಳೆಯ ಸಂಸ್ಕಾರದ ಅರಿವನ್ನು ಮೂಡಿಸುವಲ್ಲಿ ಪಾಲಕರು ಗಮನಹರಿಸಬೇಕಾದ್ದು ಅತ್ಯಗತ್ಯವಾಗಿದೆ ಎಂದು  ಮನೋ ಆರೋಗ್ಯ ತಜ್ಞರಾದ ಡಾ. ಆನಂದ ಪಾಂಡುರಂಗಿ ಹೇಳಿದರು. 

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಶ್ರೀ ಸತ್ಯ ಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನ, ಧಾರವಾಡಉತ್ತರಾದಿಮಠದತ್ತಿ ಅಂಗವಾಗಿ ಆಯೋಜಿಸಿದ್ದ ‘ಶ್ರೀ ಸತ್ಯ ಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ-2025’ ಪ್ರದಾನ ಸಮಾರಂಭಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.  

ಪತ್ರಿಕೆಯೊನದರ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮೋಹನ ಹೆಗಡೆ ಮಾತನಾಡಿ, ಅಧ್ಯಾತ್ಮಿಕ ಆಚರಣೆ, ಹಿರಿಯರ, ಗುರುಗಳ ಹಾಗೂ ಹರಿದಾಸರು ನೀಡಿದ ತಮ್ಮ ಕೃತಿಗಳಲ್ಲಿಯ ನೀತಿ ಪಾಠವನ್ನು ಎಲ್ಲ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯವಾಗಬೇಕೆಂದರು. ಅಂದಾಗ ಮಾತ್ರಅವರಲ್ಲಿಉತ್ತಮ ಗುಣಗಳು ಬೆಳೆದು ಸಮಾಜದಲ್ಲಿತಮ್ಮನ್ನುತಾವು ಗುರುತಿಸಿಕೊಳ್ಳಲು ಸಹಾಯವಾಗುತ್ತದೆಎಂದರು. ಈ ನಿಟ್ಟಿನಲ್ಲಿಎಸ್‌.ಬಿ. ಗುತ್ತಲ ಅವರು ಸಂಘದಲ್ಲಿ ಉತ್ತರಾದಿ ಮಠ ಹೆಸರಿನಲ್ಲಿ ದತ್ತಿ ಇರಿಸಿ ಈ ದತ್ತಿ ಮೂಲಕ ಸಮಾಜ ಮುಖಿಕಾರ್ಯ ಮಾಡುತ್ತಿರುವುದು ಪ್ರಶಂಸನೀಯ. ಇದಕ್ಕಾಗಿ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು. 

ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಕೆ.ಎಲ್‌. ಪಾಟೀಲ ಮಾತನಾಡಿ, ಸಹಕಾರರತ್ನ ಪ್ರಶಸ್ತಿ ಪಡೆದಿದ್ದಕ್ಕೆ ನನ್ನನ್ನು ಸನ್ಮಾನಿಸಿರುವುದು ಇದು ಸಮಸ್ತ ಧಾರವಾಡಜನತೆಯೇ ಸನ್ಮಾನ ಸ್ವೀಕರಿಸಿದ ನೆಮ್ಮದಿ ದೊರಕಿದೆಎಂದು ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು. 

ಬಹುಮಾನವ ವಿತರಣೆ ಮಾಡಿ ಶ್ರೀಕಾಂತ ಪಾಟೀಲ ಮಾತನಾಡುತ್ತಾ,  ಸಂಯುಕ್ತಕರ್ನಾಟಕ ಪತ್ರಿಕೆ ಸ್ವಾತಂತ್ರ್ಯ ಪೂರ್ವ ಹಾಗೂ ಏಕೀಕರಣಕ್ಕಾಗಿ ವಿಶೇಷ ಕಾರ್ಯ ಮಾಡಿದ್ದರಿಂದ ಮತ್ತು ಜನರ ಜೊತೆಗೆ ಒಂದು ರೀತಿ ಅವಿನಾಭಾವ ಸಂಬಂಧವಿದೆ. ಎಂದರು. 

ಸ್ಪರ್ಧೆಯನ್ನು ಉದ್ಘಾಟಿಸಿ ಕರ್ನಾಟಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ.ಎಚ್‌.ಎ. ಕಟ್ಟಿ ಮಾತನಾಡುತ್ತಾ,  ಸಂಗೀತ ಕೇಳುವುದರಿಂದ ಮತ್ತುಅದರ ಇಂಪಿನಿಂದ ರೋಗಿಗಳು ಗುಣಮುಖರಾಗಿದ್ದನ್ನುಕಾಣಬಹುದು. ಸಂಗೀತಕ್ಕೆಒಂದು ಸತ್ ಪರಂಪರೆಇದೆ. ಸಂಗೀತ ಆಲಿಸುವುದರಿಂದ ಆರೋಗ್ಯ ಸುಧಾರಣೆ ಮತ್ತು ಮನಸ್ಸು ಹಗುರವಾಗುತ್ತದೆ, ಆನಂದವಾಗುತ್ತದೆ. ಜೀವನ ಪಾವನ ಮಾಡಿಕೊಳ್ಳಬೇಕೆಂದರೆ ಸಂಗೀತ ಹಾಡಬೇಕುಇಲ್ಲವೆ ಶಾಂತಚಿತ್ತರಾಗಿ ಕೇಳಬೇಕು.ಬೇರೆ ಬೇರೆ ರಾಗಗಳಿಗೆ ಬೇರೆ ಬೇರೆ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ.ಮನದ ಶಾಂತಿಗಾಗಿ, ಸಕಲ ಆರೋಗ್ಯ ಭಾಗ್ಯಕ್ಕಾಗಿ ನಾವೆಲ್ಲರೂ ಸಂಗೀತವನ್ನು ಆರಾಧಿಸೋಣ ಎಂದರು. 

ಶ್ರೀ ಹರಿದಾಸರು ರಚಿಸಿದ ವಿನಾಯಕನ ಹಾಡುಗಳ ಸ್ಪರ್ಧೆಯಲ್ಲಿ 25 ಕ್ಕೂ ಹೆಚ್ಚು ಭಜನಾ ಮಂಡಳಗಳು ಭಾಗವಹಿಸಿದ್ದವು.ಇದರಲ್ಲಿಧಾರವಾಡದ ವಿಜಯ ವಿಠ್ಠಲ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆದು 2025ರ ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.ತುಂಗಭದ್ರಾ ಮಹಿಳಾ ಮಂಡಳ ದ್ವಿತೀಯ ಸ್ಥಾನ ಹಾಗೂ ತೇಜಸ್ವಿನಿ ಭಜನಾ ಮಂಡಳ ತೃತೀಯ ಸ್ಥಾನ ಪಡೆದರು. ದೇಸಾಯಿಗಲ್ಲಿಯ ಲಕ್ಷ್ಮಿ ವೆಂಕಟೇಶ ಭಜನಾ ಮಂಡಳಿ ಹಾಗೂ ಕಾಮನಕಟ್ಟಿಯರುಕ್ಮಿಣಿ ಪಾಂಡುರಂಗ ಭಜನಾ ಮಂಡಳಿ ಸಮಾಧಾನಕರ ಬಹುಮಾನ ಪಡೆದವು. 

ಭಾಗವಹಿಸಿದ ಎಲ್ಲ ಭಜನಾ ಮಂಡಳಗಳಿಗೆ ಎಸ್‌.ಡಿ.ಎಂ.ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕಿಡಾ. ಕೃತಿಕಾಗುತ್ತಲ ಪ್ರಮಾಣ ಪತ್ರ ಮತ್ತು ಗ್ರಂಥಗಳನ್ನು ವಿತರಣೆ ಮಾಡಿದರು. 

ಎಸ್‌.ಬಿ. ಗುತ್ತಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಮಾಯಾ ಚಿಕ್ಕೇರೂರ ಕಾರ್ಯಕ್ರಮ ನಿರ್ವಹಿಸಿದರು. ಶಂಕರ ಕುಂಬಿ ವಂದಿಸಿದರು. ಸ್ಪರ್ಧೆಯ ನಿರ್ಣಾಯಕರಾಗಿ ಆಕಾಶವಾಣಿ ಕಲಾವಿದ ಡಾ.ಅನೀಲ ಮೇತ್ರಿ ಹಾಗೂ ಹಿರಿಯ ಸಂಗೀತ ಕಲಾವಿದ ವಾದಿರಾಜ ನಿಂಬರಗಿ ಆಗಮಿಸಿದ್ದರು. 

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಗುರು ಹಿರೇಮಠ, ಸತೀಶತುರಮರಿ, ಶಿವಪುತ್ರ ರಾಚಯ್ಯನವರ, ಆರ್‌.ಬಿ. ಗುತ್ತಲ, ಜಿ.ಎನ್‌. ತೊರಗಲ್ಲಮಠ, ಜಿ.ಎಲ್‌. ಪಾಟೀಲ, ಡಿ.ಎಂ.ಸಿಂಧಗಿ, ಶ್ರೀಕಾಂತ ಪಾಟೀಲ ಮುಂತಾದವರು ಇದ್ದರು.