ಸ್ವಾಭಿಮಾನದ ಸಂಕೇತವಾಗಿ ತಲೆ ಎತ್ತಲಿದೆ ಶ್ರೀ ನಾಗದೇವರ ಮಂದಿರ: ಕೃಷ್ಣಗೌಡ್ರು ಪಾಟೀಲ್
Shri Nagadeva Temple will rise as a symbol of self-respect: Krishnagoudru Patil
ಗದಗ 26: "ಸಮಾಜದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸವಿತಾ ಸಮಾಜ ಸುಧಾರಣಾ ಸಂಘದ 25 ವರ್ಷಗಳ ಕನಸಿನ ನಾಗದೇವರ ಮಂದಿರವು ಕೇವಲ ಕಟ್ಟಡವಾಗದೆ, ಇಡೀ ಸಮಾಜದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿ," ಎಂದು ಸಚಿವರ ಸುಪುತ್ರ ಹಾಗೂ ಯುವ ಕಾಂಗ್ರೆಸ್ ನಾಯಕ ಕೃಷ್ಣಗೌಡ್ರು ಪಾಟೀಲ್ ಆಶಯ ವ್ಯಕ್ತಪಡಿಸಿದರು.
ಗದಗ ನಗರದ ಗಂಗಿಮಡಿ ನಗರದಲ್ಲಿ ಮಂಗಳವಾರ ಸವಿತಾ ಸಮಾಜ ಸುಧಾರಣಾ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ನಾಗದೇವರ ದೇವಸ್ಥಾನ ನಿರ್ಮಾಣಕ್ಕೆ ಸಚಿವರ ವತಿಯಿಂದ ಬಿಡುಗಡೆಯಾದ 10 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಅಡಿಗಲ್ಲು ಹಾಕಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
*ಸಮಾಜದ ಸ್ವಾಭಿಮಾನಕ್ಕೆ ಕೈಜೋಡಿಸಿ:* "ದೇವಸ್ಥಾನವೆಂಬುದು ಕೇವಲ ಧಾರ್ಮಿಕ ಕೇಂದ್ರವಲ್ಲ, ಅದು ಸವಿತಾ ಸಮಾಜದ ಸ್ವಾಭಿಮಾನದ ಸಂಕೇತ. ಪ್ರತಿಯೊಬ್ಬ ಸಮಾಜದ ಬಾಂಧವನು ’ನನ್ನ ದೇವಸ್ಥಾನಕ್ಕೆ ನನ್ನಿಂದಲೂ ಅಳಿಲು ಸೇವೆ ಇರಲಿ’ ಎಂಬ ದಾಸೋಹ ಭಾವದಿಂದ ಮುಂದೆ ಬರಬೇಕು. ಯುವಶಕ್ತಿಯು ಈ ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತಾಗ ಮಾತ್ರ 25 ವರ್ಷಗಳ ಹಿರಿಯರ ಕನಸು ಭವ್ಯವಾಗಿ ನನಸಾಗಲು ಸಾಧ್ಯ. ಸವಿತಾ ಸಮಾಜದ ದಕ್ಷ ಹಾಗೂ ಪ್ರಾಮಾಣಿಕ ನಾಯಕತ್ವವನ್ನು ಬೆಂಬಲಿಸಿ, ರಾಜಕಾರಣ ರಹಿತವಾಗಿ ಒಗ್ಗಟ್ಟಿನ ಸಂದೇಶ ರವಾನಿಸುವುದು ಇಂದಿನ ತುರ್ತು ಅಗತ್ಯ. ಸಮಾಜದ ಪರವಾಗಿ ಮನವಿ ಮಾಡಿದ ಕೃಷ್ಣಾ ಎಚ್ ಹಡಪದ ಅವರ ಬೇಡಿಕೆಯಂತೆ ಹೆಚ್ಚುವರಿ ಅನುದಾನ ನೀಡಲು ನಾನು ಸದಾ ಸಿದ್ಧನಿದ್ದೇನೆ," ಎಂದು ಅವರು ಘೋಷಿಸಿದರು.
*ಸಮಾಜದ ನಡೆ-ನುಡಿಯ ಬಗ್ಗೆ ಕೃಷ್ಣಾ ಹಡಪದ ಮನವಿ:* ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿ, "ಸಮಾಜದ ಹಿರಿಯರು ಕಂಡಿದ್ದ ಕಾಲು ಶತಮಾನದ ಕನಸಿಗೆ ಇಂದು ನಮ್ಮ ನೆಚ್ಚಿನ ಯುವ ನಾಯಕರಾದ ಕೃಷ್ಣಗೌಡ್ರು ಪಾಟೀಲರಿಂದ ಚಾಲನೆ ದೊರೆತಿದೆ. ಇದು ಕೇವಲ ದೇವಸ್ಥಾನವಲ್ಲ, ನಮ್ಮ ಸಂಘಟನೆಯ ಶಕ್ತಿ. ಯುವಕರು ದಿನಕ್ಕೆ ಕನಿಷ್ಠ 1. ಒಂದು ಗಂಟೆಗಳ ಕಾಲ ಶ್ರಮದಾನ ಮಾಡುವ ಮೂಲಕ ಈ ದೇವಸ್ಥಾನವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಕಲ್ಪ ಮಾಡಬೇಕು," ಎಂದು ಕೈಮುಗಿದು ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ್ ಕೋಟೆಕಲ್ಲ ಅವರು ಸಂಘದ ಬಲವರ್ಧನೆಗೆ ಎಲ್ಲರ ಸಹಕಾರ ಕೋರಿದರು.
ಗದಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಿದ್ದು ಪಾಟೀಲರು ಮಾತನಾಡಿ, ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಇಂತಹ ಕಾರ್ಯಗಳು ಪೂರಕ ಎಂದರು. ಕಾಂಗ್ರೆಸ್ ಯುವ ನಾಯಕರುಗಳಾದ ರವಿಕುಮಾರ್ ರೆಡ್ಡಿ ಹಾಗೂ ಅಶೋಕ್ ಮಂದಾಲಿ. ನಗರಸಭೆಯ ಸ್ಥಳೀಯ ಸದಸ್ಯರಾದ ರವಿ ಕಮ್ತರ. ಅವರು ಸಮಾಜದ ಒಗ್ಗಟ್ಟು ಮತ್ತು ಯುವಕರ ಜವಾಬ್ದಾರಿಯ ಬಗ್ಗೆ ಕ್ರಾಂತಿಕಾರಿ ವಿಚಾರಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಹಿರಿಯರಾದ ಎಸ್.ಎನ್. ಬಳ್ಳಾರಿ ಗುರುಗಳು ಮತ್ತು ಮಾರ್ತಂಡಪ್ಪ ಹಾದಿಮನಿ ಅವರು ಆಶೀರ್ವಚನ ನೀಡಿದರು. ಸಾಮಾಜಿಕ ಕಾರ್ಯಕರ್ತರಾದ ಕುಮಾರ ಮಾರನಬಸರಿ. ಅಬ್ದುಲಮುನಾಫ್ ಮುಲ್ಲಾ. ಸಂತ ಸೇನಾ ಮಹಾರಾಜ್ ನಾಭಿಕ ಮರಾಠ ಕ್ಷೌರಿಕ ಸಮಾಜದ ಅಧ್ಯಕ್ಷರಾದ ವಿಕಾಸ್, ಕ್ಷೀರಸಾಗರ್. ಸವಿತಾ ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪೂರ. ಪರಶುರಾಮ (ಬಜ್ಜು) ರಾಂಪೂರ. ಜಂಬಣ್ಣ ಕಡಮೂರ. ಪಂಪಣ್ಣ ರಾಯಚೂರ. ರಾಜು ಗೋಡರ ವೆಂಕಟೇಶ ರಾಂಪೂರ. ವೇದಿಕೆ ಮೇಲೆ ಹಾಸಿನರಾಗಿದ್ದರು. ಸಂಘದ ಕಾರ್ಯದರ್ಶಿ ರವಿಕುಮಾರ್ ಹಡಪದ ನಿರೂಪಿಸಿದರು. ಗೌರವ ಅಧ್ಯಕ್ಷರಾದ ಕೃಷ್ಣಾ ಬಾಯಲಗುಡ್ಡ. ಸ್ವಾಗತಿಸಿದರು ಹಿರಿಯರಾದ ಆಂಜನೇಯ ಆದೋನಿ ವಂದನಾರೆ್ಣಗೈದರು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜ ಸುಧಾರಣಾ ಸಂಘದ ನೂರಾರು ಯುವಕರು, ಹಿರಿಯರು ಮತ್ತು ಗಂಗಿಮಡಿ ನಗರದ ಗುರು ಹಿರಿಯರು ಪಾಲ್ಗೊಂಡು ದೇವಸ್ಥಾನ ನಿರ್ಮಾಣಕ್ಕೆ ತಮ್ಮ ಪೂರ್ಣ ಬೆಂಬಲ ಘೋಷಿಸಿದರು. ಕೃಷ್ಣಾ ಎಚ್ ಹಡಪದ 9845650612
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 