ಶ್ರೀ ಲಕ್ಷ್ಮೀದೇವಿ ಪಾದಗಟ್ಟಿಯ ಕಾತರ್ಿಕೋತ್ಸವ

ಲೋಕದರ್ಶನ ವರದಿ

ಗೋಕಾಕ 21: ಧಾಮರ್ಿಕ ಆಚರಣೆಗಳಿಂದ ಮಾನಸಿಕ ನೆಮ್ಮದಿಯೊಂದಿಗೆ ದೇವರ ಅನುಗ್ರಹಕ್ಕೂ ನಾವು ಪಾತ್ರರಾಗುತ್ತೇವೆ ಎಂದು ಮಯೂರ ಆಂಗ್ಲ ಮಾಧ್ಯಮ ಶಾಲೆಯ ಚೇರಮನ್ ಲಖನ ಜಾರಕಿಹೊಳಿ ಹೇಳಿದರು.

ಶುಕ್ರವಾರ ಸಂಜೆ ಇಲ್ಲಿಯ ಶ್ರೀ ಲಕ್ಷ್ಮೀದೇವಿ ಪಾದಗಟ್ಟಿಯ ಕಾತರ್ಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ದೇಶ ಆಧ್ಯಾತ್ಮಿಕ ದೇಶವಾಗಿದ್ದು, ಧಾಮರ್ಿಕ ಆಚರಣೆಯಿಂದಲೇ ಸುಖ-ಶಾಂತಿಯೊಂದಿಗೆ ಸಮೃದ್ಧವಾಗಿದೆ. ಧಾಮರ್ಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಪರಸ್ಪರರಲ್ಲಿ ಪ್ರೀತಿ-ವಿಶ್ವಾಸ ಹೆಚ್ಚಾಗುವುದು. ನಾವೆಲ್ಲ ಸಂಘಟಿತರಾಗಿ ಇನ್ನೂ ಹೆಚ್ಚಿನ ಧಾಮರ್ಿಕ ಕಾರ್ಯಗಳಲ್ಲಿ ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ತಿಳಿಸಿದರು.

ಕಾತರ್ಿಕೋತ್ಸವದ ನಿಮಿತ್ಯ ಶ್ರೀ ಲಕ್ಷ್ಮೀದೇವಿಗೆ ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಸುಮಂಗಲೆಯರೊಂದಿಗೆ ಆರತಿ ಹಾಗೂ ಕುಂಭಮೇಳದೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಯಿತು. ಅಮ್ಮಾಜಿ ನೃತ್ಯ ಶಾಲೆಯ ಹಾಗೂ ಝೆನ್-ಪಾಕರ್್ ಬ್ರಡ್ರ್ಸ್ ಪ್ಲೇ ನರ್ಸರಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀದೇವಿ ಪಾದಗಟ್ಟಿ ಸೇವಾ ಸಮಿತಿಯ ಅಧ್ಯಕ್ಷ ದೊಡ್ಡಪ್ಪ ರಾವುತ, ಡಾ. ಸಿದ್ದಣ್ಣ ಕಮತ, ಡಾ. ಉದಯ ಆಜರಿ, ಆರ್.ಬಿ.ಬೋರಗಲ್, ಎಸ್.ಜಿ. ಗಾಡವಿ ಸೂರಜ ಪಾಟೀಲ, ಉಮೇಶ ಅರಳಿಕಟ್ಟಿ, ವಿ.ಜಿ.ಮಿಜರ್ಿ, ಮಹಾದೇವ ಕೌಜಲಗಿ, ಮಹಿಳಾ ಮಂಡಳದ ಜಯಾ ಕಮತ, ಸರಿತಾ ಹೂಲಿ, ಸವಿತಾ ಕಲಬುಗರ್ಿ, ರಾಜೇಶ್ವರಿ ಕಲಬುಗರ್ಿ, ಜಯಶ್ರೀ ಗೊಬ್ಬಣ್ಣವರ ಸೇರಿದಂತೆ ಅನೇಕರು ಇದ್ದರು.