ಸಿಪಿಐ ನಾರಾಯಣಗೆ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಕೊಪ್ಪಳ: ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣ ಕಲಾ ಮಂದಿರದಲ್ಲಿ ಇದೇ ದಿ. 20ರ ರವಿವಾರದಂದು ಹೈದರಾಬಾದ್ ಕನರ್ಾಟಕ ನಾಗರಿಕರ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆವತಿಯಿಂದ 6ನೇ ಬಾರಿಗೆ ಜರುಗಿದ ವಿಜಯನಗರದ ಸಾಂಸೃತಿಕ ವೈಭವ ಹಾಗೂ ಬೀಚಿ ಸ್ಮರಣೆ ಕಾರ್ಯಕ್ರಮದಲ್ಲಿ ಕೂಡ ಮಾಡುವ ಶ್ರೀ ಕೃಷ್ಣದೇವರಾಯ ರಾಜ್ಯ ಮಟ್ಟದ ಪ್ರಶಸ್ತಿಯನ್ನು  ಹೊಸಪೇಟೆಯ ಟಿಬಿ.ಡ್ಯಾಂ ಸರ್ಕಲ್ ಪೋಲೀಸ್ ಠಾಣೆಯ ಸಿಪಿಐ ವಿ. ನಾರಾಯಣ ರವರಿಗೆ ಪ್ರದಾನ ಮಾಡಲಾಯಿತು. 

ವಿವಿಧ ಕ್ಷೇತ್ರದಲ್ಲಿ ಸಾದನೆ ಮಾಡಿದ ಸಾಧಕರಿಗೆ ಕೂಡ ಮಾಡಿದ ಕೃಷ್ಣದೇವರಾಯ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಟಿಬಿ.ಡ್ಯಾಂ ಸರ್ಕಲ್ ಪೋಲೀಸ್ ಠಾಣೆಯ ಸಿಪಿಐ ವಿ. ನಾರಾಯಣ ರವರು ಸಲ್ಲಿಸಿದ ಉತ್ತಮ ಪೋಲೀಸ್ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಮಾಡಲಾಯಿತು. ಸಮಾರಂಭದಲ್ಲಿ ಕೌತಾಳಂ ದಗರ್ಾದ ಪೀಠಾಧಿಪತಿ  ಹಜರತ್ ಸಯದ್ ಖಾಜಾಮಹ್ಮದದುಲ್ಹುಸೇನಿ- ಚಿಷ್ತಿ -ಉಲ್ -ಖಾದ್ರಿ- ಖಾದರ ಲಿಂಗಾ ಬಾಬಾ ಸಾಹೇಬ್ ಪೀರ ರವರು ಸಾನಿಧ್ಯ ವಹಿಸಿ ಆಶೀರ್ವದಿಸಿದರು. ಮಾಜಿ ಸಂಸದ ಉಗ್ರಪ್ಪ, ಸಂಘಟಕರಾದ ರಾಮಲಿಂಗಪ್ಪ, ಮಹೇಶಬಾಬು ಸುವರ್ೆ, ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲಗೌಡರ್, ಬೆಂಗಳೂರಿನ ಸಕರ್ಾರಿ ಅಭಿಯೋಜಕ ಬಿಎಸ್ ಪಾಟೀಲ, ಹಿರಿಯ ಪತ್ರಕರ್ತ ಮಲ್ಲಕಾಜರ್ುನ ಬಂಗ್ಲೆ, ಬಳ್ಳಾರಿಯ ಹಿರಿಯ ಪತ್ರಕರ್ತ ಸಿ.ಮಂಜುನಾಥ, ಕೊಪ್ಪಳ ಹಿರಿಯ ಪತ್ರಕರ್ತ ಎಂ.ಸಾದಿಕ್ ಅಲಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಸಿಪಿಐ ವಿ. ನಾರಾಯಣ ರವರಿಗೆ ಶ್ರೀ ಕೃಷ್ಣದೇವರಾಯ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿರುವದಕ್ಕೆ ಪೋಲೀಸ್ ಇಲಾಖೆಯ ಅಧಿಕಾರಿ ಮತ್ತು ಪೋಲೀಸ್ ಪೇದೆಗಳು ಸೇರಿದಂತೆ ಅವರ ಅಭಿಮಾನಿ ಬಳಗ ಹರ್ಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.