ವಿಜಯಪುರ 28: ತಿಕೋಟಾ ಪಟ್ಟಣದ ರವಿ ಸೋನಾರ ಇವರ ಮಗಳಾದ ಶ್ರೇಯಾ ಸೋನಾರ ಇವರು ನೃತ್ಯ ಕ್ಷೇತ್ರದಲ್ಲಿ ಮಾಡಿದ ಅಮೋಘ ಸಾಧನೆಗೆ ಧಾರವಾಡ ಜಿಲ್ಲೆಯ ಶಿರಸಂಗಿ ಕಾಳಿಕಾ ದೇವಸ್ಥಾನ ಪ್ರತಿಷ್ಠಾನ ಇವರು ಕೊಡಮಾಡುವ ನೃತ್ಯ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶ್ರೇಯಾ ಸೋನಾರ ಇವರು ಸ್ವಯಂಬೂ ನೃತ್ಯ ಅಕ್ಯಾಡೆಮಿ, ವಿಜಯಪುರ ಮುಖಾಂತರ ರಾಜ್ಯದ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ನೃತ್ಯ ಸಾಧನೆಯನ್ನು ತೋರಿದ್ದಾರೆ. ವಿಶ್ವ ನೃತ್ಯ ದಿನದ ಆಚರಣೆಯ ಪ್ರಯುಕ್ತ ನೃತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಗಿಣಿಸಿ, ಈ ನೃತ್ಯ ಕಲಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ,
ಇವರ ಈ ಸಾಧನೆಗೆ ತಿಕೋಟಾ ಪಟ್ಟಣದ ಪತ್ತಾರ ಮತ್ತು ಸೋನಾರ ಬಂಧು-ಬಳಗದವರು ಹಾಗೂ ಪ್ರೊ. ಎಂ.ಎಸ್.ಖೊದ್ನಾಪೂರ ಇವರು ಅಭಿನಂದಿಸಿದ್ದಾರೆ.