ಲೋಕದರ್ಶನವರದಿ
ಹಾವೇರಿ: ನಾವು ಏನು ಬಿತ್ತುತ್ತೇವೆಯೋ ಅದನ್ನೇ ಬೆಳೆಯುತ್ತೇವೆ ಎನ್ನುವಂತೆ, ಇಹದ ಸುಖ ಮತ್ತು ಪರರ ಸುಖಕ್ಕಾಗಿ, ಸೌಹಾರ್ದ ಬದುಕಿಗೆ, ಸಂಸ್ಕಾರ ಸಂವರ್ಧನೆಗೆ ಶ್ರಾವಣ ಮಾಸದ ಪ್ರವಚನವು ನಮ್ಮ ಬದುಕಿಗೆ ಪ್ರೇರಕಶಕ್ತಿಯಾಗುತ್ತದೆ ಎಂದು ನಗರದ ಹುಕ್ಕೇರಿಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಗದುಗಿನ ಪುಟ್ಟರಾಜ ಗವಾಯಿ ವಿರಚಿತ ಶಿವಬಸವೇಶ್ವರ ಪುರಾಣ ಪ್ರವಚನದ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಕರಜಗಿಯ ಗೌರಿಮಠದ ಶಿವಯೋಗಿ ಶಿವಾಚಾರ್ಯ ಶ್ರೀ ಮಾತನಾಡಿದರು.
ಇಂದು ಯುವ ಜನಾಂಗವು ಮಾದಕ ವಸ್ತುಗಳ ದಾಸರಾಗುತ್ತಿದ್ದು, ಮಹಾತ್ಮರ, ತಪಸ್ವಿಗಳ, ಆದರ್ಶ ಪುರುಷರ ಜೀವನ ಚರಿತ್ರೆಗಳ ಶ್ರವಣದಿಂದ ಅವರಲ್ಲಿ ಉತ್ತಮ ಸಂಸ್ಕಾರಗಳು ರೂಢಿಯಾಗುತ್ತವೆ.
ಆ ಮೂಲಕ ಸುಂದರ ಸಮಾಜ ನಿಮರ್ಾಣವಾಗುವುದಕ್ಕೆ ಸಹಾಯಕವಾಗುತ್ತದೆ. ಧಾಮರ್ಿಕತೆಯಿಂದ ಸಾಮಾಜಿಕತ್ವ ಸಾಧ್ಯವಾಗುತ್ತದೆ ಎಂದು ಹೇಳಿದರು.
ಆಧ್ಯಾತ್ಮಿಕ ಇತಿಹಾಸದಲ್ಲಿ ತಪಸ್ಸು, ವಿನಯ, ಕಲ್ಯಾಣ ಗುಣಗಳು ತ್ರೀವೇಣಿ ಸಂಗಮಗಳು.
ಇಂಥ ಸಾಧನೆ ಮಾಡಿದವರು ಹಲವರು. ಅಂಥಹ ಮಹಾನ ಚೇತನಗಳ ಜೀವನ ಚರಿತ್ರೆಯ ಅವಲೋಕನ ಕತ್ತಲು ಕವಿದ ನಮ್ಮ ಬೆಳಕಿಗೆ ದಾರಿದೀಪವಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಹುಕ್ಕೇರಿಮಠ ಸದಾಶಿವ ಶ್ರೀ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾಪೀಠದ ಚೇರಮನ್ ಎಸ್.ಎಸ್.ಮುಷ್ಠಿ, ವೀರಣ್ಣ ವಳಸಂಗದ, ಶಿವಯೋಗೆಪ್ಪ ಅರಣಿ, ಎಸ.ಎಮ್.ಹಾಲಯ್ಯನವರಮಠ, ಶಿವಬಸಪ್ಪ ಹುರಳಿಕುಪ್ಪಿ, ಶಿವಯೋಗಿ ವಾಲಿಶೆಟ್ಟರ, ಎಂ.ಸಿ.ಮಳಿಮಠ, ತಮ್ಮಣ್ಣ ಮುದ್ದಿ, ಜೆ.ಬಿ.ಸಾವಿರಮಠ. ಚನ್ನಪ್ಪ ಹಳಕೊಪ್ಪ, ಪ್ರಕಾಶ ಜೈನ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಆಕಾಶವಾಣಿ ಕಲಾವಿದ ಎಸ್.ಬಿ.ತಳವಾರ ಪ್ರಾಥರ್ಿಸಿದರು. ಬಿ.ಬಸವರಾಜ ಸ್ವಾಗತಿಸಿದರು. ಎಸ್.ವಿ.ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೆ.ಆರ್. ನಾಶೀಪುರ ವಂದಿಸಿದರು.