ಜಾನುವಾರಗಳ ಪ್ರದರ್ಶನ ಕಾರ್ಯಕ್ರಮ

ಲೋಕದರ್ಶನ ವರದಿ

ಕಾಗವಾಡ 19: ಐನಾಪೂರ ಶ್ರೀ ಸಿದ್ಧೇಶ್ವರ ದೇವರ 50ನೇ ಸುವರ್ಣ ಜಾತ್ರಾ ಮಹೋತ್ಸವದ ಕೋನೆ ದಿನದಂದು ಜಾತ್ರೆ ನಿಮಿತ್ಯ ಆಗಮಿಸಿದ ಜಾನುವಾರಗಳ ಪ್ರದರ್ಶನ ಕಾರ್ಯಕ್ರಮದೊಂದಿಗೆ ದನಗಳು ಆಯ್ಕೆ ಅಥಣಿ ತಾಲೂಕಾ ಪಶು ನಿರ್ಧೆಶಕ ಅಥಣಿ ತಾಲೂಕಾ ಪಶು ವೈದ್ಯಕೀಯ ನಿರ್ದೇಶಕರಾದ ಭುಜಬಲಿ ಐಗಳಿಇವರ ನೇತೃತ್ವದಲ್ಲಿ ತಂಡದ ವೈದ್ಯರು ಜಾನುವಾರಗಳನ್ನು ಆಯ್ಕೆಮಾಡಿದರು.

ರವಿವಾರ ರಂದು ಬೆಳಿಗ್ಗೆ ಸ್ವ. ಸಿದ್ದಾರಿ ಕುಡವಕ್ಕಲಗಿ ವೇದಿಕೆಯಲ್ಲಿ ಜಾನುವಾರಗಳನ್ನು ಆಯ್ಕೆಮಾಡಲಾಯಿತು. ಹಾಲಲ್ಲಿ ಹೋರಿಗಳ ಆಯ್ಕೆಯಲ್ಲಿ ಪ್ರಥಮ ಬಾಪು ನಿಂಗಪ್ಪಾ ಕಿರಣಗಿ, ದ್ವೀತಿಯ ಅಮೃತ್ ಜ್ಞಾನೋಬಾ ಬಾಬರ್, ತೃತೀಯ ಪರಶುರಾಮ ಹರಿಬಾ ಪಾಟೀಲ. ಎರಡಲ್ಲಿ ಹೋರಿಗಳಲ್ಲಿ ಪ್ರಥಮ ವಿಜಯ ಮಲ್ಲಯ್ಯಾ ಮಠಪತಿ, ದ್ವೀತಿಯ ಮಹಾದೇವ ಸಿದ್ದಪ್ಪಾ ತುಕನ್ನವರ, ತೃತೀಯ ಜಮೀರ್ ಸೈಯದ್ ಇನಾಮದಾರ. ನಾಲ್ಕಲ್ಲಿ ಪ್ರಥಮ ಪರಶುರಾಮ ನಿಂಗಪ್ಪಾ ನರೋಟೆ, ದ್ವೀತಿಯ ಮಾರುತಿ ಪುಂಡ್ಲಿಕ್ ಪಾಟೀಲ, ತೃತೀಯ ಆದೀಲ್ ಅಕ್ಬರ್ ಇಮಾನದಾರ. ಆರಲ್ಲಿ ಪ್ರಥಮ ಬಾಪು ಜ್ಯೋತಿಬಾ ಜಾಧವ, ದ್ವೀತಿಯ ಅಶೋಕ ಶ್ರೀಮಂತ ಮಾಳ್ಯಪ್ಪಗೋಳ.

ಜೋಡೆತ್ತು ಪ್ರಥಮ ಶಿವಾ ಭರಮಪ್ಪಾ ಅಜುರೆ, ದ್ವೀತಿಯ ಸದಾಶಿವ ರಾಮಪ್ಪಾ ತಳವಾರ, ತೃತೀಯ ಬಾಳಕೃಷ್ಣ ಮಾಳಪ್ಪಾ ಪಾಟೀಲ. ಕೋಣ ಎರಡಲ್ಲಿ ಪ್ರಥಮ ಸಿದ್ದೇಶ ಕಾಗಲಿ, ಕೋಣ ನಾಲ್ಕಲ್ಲಿ ವಿಲಾಸ ಗಣಪತಿ ನಾಯಿಕ ಇವರು ಪ್ರಥಮ ಸ್ಥಾನ ಪಡೆದುಕೊಂಡರು. ಇವುಗಳನ್ನು ಆಯ್ಕೆಮಾಡಲು ಡಾ. ಶ್ರೀರಂಗ ಕೋಳಿ, ಡಾ. ಭುಜಬಲಿ ಐಗಳಿ, ಡಾ. ಎಂ.ಎಸ್.ಹುಂಡೆಕರಿ, ಡಾ. ಬಿ.ಎಸ್.ಬಿಸ್ವಾಗರ್, ಡಾ. ಸೌಂದಲಗಿ, ಡಾ. ಅಭಿನಂದ ಪಾಟೀಲ ಇವರು ಶ್ರಮಿಸಿದರು.

ಆಯ್ಕೆಯಾದ ಎಲ್ಲ ಹೋರಿ ಮತ್ತು ಎತ್ತುಗಳ ಮಾಲಿಕರಿಗೆ ಜಾತ್ರಾ ಕಮೀಟಿ ಉಪಾಧ್ಯಕ್ಷ ರಾಜುಗೌಡಾ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಕ್ಷೇತ್ರಪಾಲ ಫೈನಾನ್ಸ್ ನಿದರ್ೇಶಕ ಬಸವರಾಜ ಪಾಟೀಲ, ಪದ್ಮಾವತಿ ಶಿಕ್ಷಣ ಸಂಸ್ಥೆ ನಿರ್ದೇಶಕ ದಶ್ರತ ತೇರದಾಳೆ ಇವರ ಮುಖ್ಯ ಉಪಸ್ಥಿತಿಯಲ್ಲಿ ಜಾತ್ರಾ ಕಮೀಟಿ ಸದಸ್ಯರು ಬಹುಮಾನ ನೀಡಿ ಸನ್ಮಾನಿಸಿದರು.