ಢಾಕಾ, ಅ 26: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನೀತಿ-ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದಡಿ ಬಾಂಗ್ಲಾ ದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರಿಗೆ ಬಿಸಿಬಿ ಶೋಕಾಸ್ ನೋಟಿಸ್ ನೀಡಿದೆ. ಕ್ರಿಕ್ಬಝ್ ಮೂಲಗಳ ಪ್ರಕಾರ ಶಕೀಬ್ ಅಲ್ ಹಸನ್ ಅವರು ಅಕ್ಟೋಬರ್ 23 ರಂದು ಗ್ರಾಮೀಣ್ಫೋನ್ ಸಂಸ್ಥೆಯ ರಾಯಭಾರಿ ಒಪ್ಪಂಧಕ್ಕೆ ಸಹಿ ಮಾಡಿದ್ದರು. ಇವರಿಬ್ಬರ ನಡುವಿನ ಒಪ್ಪಂಧದ ಮುಗಿದ ಮರು ದಿನವೇ ಬಾಂಗ್ಲಾದೇಶ ಕ್ರಿಕೆಟ್ ಆಟಗಾರರು, ಮಂಡಳಿಯು 11 ಅಂಕಗಳನ್ನು ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಿತ್ತು. ನಂತರ, ಮರುದಿನವೇ ಮುಷ್ಕರಕ್ಕೆ ತೆರೆಬಿದ್ದಿತ್ತು. ಶಕೀಬ್ ಅಲ್ ಹಸನ್ ಅವರ ನೇತೃತ್ವದಲ್ಲಿ ನಡೆದಿದ್ದ ಮುಷ್ಕರದಲ್ಲಿ ಬಿಸಿಬಿ ಗುತ್ತಿಗೆ ಹೊಂದಿರುವ ಆಟಗಾರರು ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಆಟಗಾರರೂ ಭಾಗವಹಿಸಿದ್ದರು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿಯಮದ ಪ್ರಕಾರ ರಾಷ್ಟ್ರೀಯ ತಂಡದ ಆಟಗಾರ ಕೇಂದ್ರ ಗುತ್ತಿಗೆ ವ್ಯಾಪ್ತಿಯಲ್ಲಿರುವ ಅವಧಿಯಲ್ಲಿ ಯಾವುದೇ ದೂರವಾಣಿ ಕಂಪನಿಗ ಸೇರ್ಪಡೆಯಾಗುವಂತಿಲ್ಲ. ಶಕೀಬ್ ಅಲ್ ಹಸನ್ ಅವರು ಬಿಸಿಬಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ, ಆಲ್ರೌಂಡರ್ ಗೆ ಬಿಸಿಬಿ ಶೋಕಾಸ್ ನೋಟಿಸ್ ನೀಡಿದೆ. ಭಾರತ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾದೇಶ ತಂಡ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ವಿರುದ್ಧ ಆಡಲಿದೆ. ಹಾಗಾಗಿ, ಅಭಾಸದಲ್ಲಿ ನಿರತವಾಗಿದೆ. ಶುಕ್ರವಾರ ನಡೆದಿದ್ದ ತಂಡದ ಅಭ್ಯಾಸಕ್ಕೆ ಶಕೀಬ್ ಅಲ್ ಹಸನ್ ಗೈರಾಗಿದ್ದರು.