ಶೂ ಎಸೆತ ಯತ್ನ ಪ್ರಕರಣ : ಕಠಿಣ ಕ್ರಮಕ್ಕೆ ಆಗ್ರಹ
Shoe throwing attempt case: Demand for strict action
ಶೂ ಎಸೆತ ಯತ್ನ ಪ್ರಕರಣ : ಕಠಿಣ ಕ್ರಮಕ್ಕೆ ಆಗ್ರಹ
ಲೋಕದರ್ಶನ ವರದಿ
ಹೂವಿನಹಡಗಲಿ 09 : ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶಬಿ.ಆರ್.ಗವಾಯಿ ಅವರತ್ತ ನ್ಯಾಯಾಲಯದಲ್ಲೇ ಶೂ ಎಸೆಯುವ ಯತ್ನಿಸಿದ ವಕೀಲ ಕಿಶೋರ್ ಎಂಬಾತನನ್ನು ಬಂಧಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಗುರುವಾರ ಸಂವಿಧಾನ ರಕ್ಷಣೆಗಾಗಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಮತ್ತು ಭಾರತ ಕಮ್ಯುನಿಸ್ಟ್ ಪಕ್ಷ ಸಿಪಿಐ ತಾಲೂಕು ವೇದಿಕೆ ವತಿಯಿಂದ ಶಾಸ್ತ್ರೀಯ ವೃತ್ತ ಬಳಿ ಪ್ರತಿಭಟನೆ ನಡೆಸಲಾಯಿತು.ಇದೇ ವೇಳೆ ಅ.ಭಾ.ದ.ಹ.ಆಂದೋಲನ ರಾಜ್ಯ ಉಪಾಧ್ಯಕ್ಷ ಹಲಗಿ ಸುರೇಶ , ಸಿಪಿಐ ತಾಲೂಕು ಕಾರ್ಯದರ್ಶಿ ಬಸವರಾಜ ಸಂಶಿ , ದಲಿತ ಸೇವಾ ಅದ್ಯಕ್ಷ ಸಿ.ದುರುಗೇಶ ಮಾತನಾಡಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ನ್ಯಾಯಾಲಯಕ್ಕೆ ಉನ್ನತ ಸ್ಥಾನ, ಗೌರವ ಎಲ್ಲವೂ ಇದೆ. ಇಂತಹ ಉನ್ನತ ಸ್ಥಾನದಲ್ಲಿನ ವ್ಯಕ್ತಿಗಳನ್ನೇ ಅವಮಾನಿಸುವಂತ ಹಂತ ತಲುಪಿರುವ ಬಲಪಂಥೀಯ ಕೋಮುವಾದಿಗಳು ದೇಶಕ್ಕೆ ಕಂಟಕವಾಗಲಿದ್ದಾರೆ. ನ್ಯಾಯಾಧೀಶರತ್ತ ಶೂ ಎಸೆಯಲು ಮುಂದಾದ ವಕೀಲ ಕಿಶೋರ್ ಎಂಬುವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳದೆ ಹೋದರೆ ನ್ಯಾಯಾಲಯಗಳ ಗೌರವ ಕುಂದಲಿದೆ ಎಂದರು.ಇಂತಹ ಘಟನೆ ಮರುಕಳಸದಂತೆ ಎಚ್ಚರ ವಹಿಸಬೇಕು. ನ್ಯಾಯಾಧೀಶರತ್ತ ಶೂ ಎಸೆಯಲು ಯತ್ನಿಸಿರುವ ಪ್ರಕರಣ ಅತ್ಯಂತ ಗಂಭೀರವಾದ ಸಂಗತಿಯಾಗಿದೆ. ಈ ಮತೀಯ ಕೋಮುವಾದ ಈಗಲೇ ಅಂತ್ಯವಾಗುವಂತೆ ನ್ಯಾಯಾಲಯ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಂತರ ಕಠಿಣ ಕ್ರಮಕ್ಕೆ ತಹಶಿಲ್ದಾರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಅಂಬೇಡ್ಕರ ಸೇನಾ ಸಮಿತಿ ಅಧ್ಯಕ್ಷ ಎ.ಭರಮಪ್ಪ.ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಬಿ.ಆನಂದ.ಎಸ್.ಡಿ.ಪಿ.ಐ.ಪಕ್ಷದ.ಎ.ದೇವರಾಜ್.ದಡರ್.ಟಿ.ದೇವೇಂದ್ರ್ಪ.ಇತರರು ಭಾಗವಹಿಸಿದ್ದರು
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 