ಬೆಂಗಳೂರು,
ಡಿ.28, ಶಿವಶರಣ ಅಲ್ಲಮಪ್ರಭು ದೇವರ ಪರಿಚಯ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂದು ಜೋಗ ಜಲಪಾತ
ಮಠದ ಡಾ.ವಿಜಯಕುಮಾರ ಸ್ವಾಮಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು, 12 ಶತಮಾನದಲ್ಲಿ ಜನಿಸಿದ್ದ ಅಲ್ಲಮ ಪ್ರಭುಜಗತ್ತು ಕಂಡ ಮಹಾನ್ ತಪಸ್ವಿ, ದಿವ್ಯ ಯೋಗಿ, ಯುಗಾವತಾರಿ,
ಯೋಗದ ಮೂಲಕ ಎಲ್ಲ ಆರೋಗ್ಯದ ಸಮಸ್ಯೆಗಳನ್ನು ಗುಣಪಡಿಸುವ ಚಿಕಿತ್ಸಕರಾಗಿದ್ದರು. ಅವರು ಕನ್ನಡ ಸಾಹಿತ್ಯದಲ್ಲಿ
ವಚನ ಸಾಹಿತ್ಯ ಸ್ಥಾಪಕಾರಾಗಿದ್ದು, ಆಧುನಿಕ ಕವಿಗಳಾದ ಎಂ.ಗೋಪಾಲಕೃಷ್ಣ ಆಡಿಗ, ದ.ರಾಬೇಂದ್ರೆ, ಯು.ಆರ್.ಅನಂತಮೂರ್ತಿ,
ದೇವನೂರು ಮಹಾದೇವ ಮುಂತಾದ ಸಾಹಿತಿಗಳು ಅಲ್ಲಮ ಪ್ರಭುಗಳ ಪ್ರಭಾವಕ್ಕೆ ಒಳಗಾಗಿದ್ದರು ಎಂದರು.ಅಂದು
ಉತ್ತರ ಕರ್ನಾಟಕದ ಕೆಲ ಊರುಗಳಲ್ಲಿ ನಡೆಯುತ್ತಿದ್ದ ಅಲ್ಲಮಪ್ರಭು ಜಾತ್ರೆಯಲ್ಲಿ ಶಿಶುನಾಳ ಶರೀಫರು,
ನಾಗಲಿಂಗ ಅಜ್ಜ, ಕಳಕೋಳದ ಮಡಿವಾಳಪ್ಪ ಮುಂತಾದವರು ಪ್ರಭುಗಳವಚನಗಳನ್ನು ಹಾಡಿಹೊಗಳಿರುವ ದಾಖಲೆಗಳಿದ್ದು,
ಪ್ರಭುಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ಪುರುಷರ ಹೆಸರಿನಲ್ಲಿ ಅಭಿವೃದ್ಧಿ
ಪ್ರಾಧಿಕಾರ ರಚಿಸಬೇಕೆಂದುಸರ್ಕಾರವನ್ನು ಒತ್ತಾಯಿಸಿದರು.