89ನೇ ಶಿವರಾತ್ರಿ ಮಹೋತ್ಸವ ಅಂಗವಾಗಿ ಶಿವರಾತ್ರಿ ಆಧ್ಯಾತ್ಮಿಕ ರಹಸ್ಯ ಕಾರ್ಯಕ್ರಮ
ರಾಯಬಾಗ 27 : ಶಿವನಾಮ ಸ್ಮರಣೆ ಮಾಡಿದರೆ ನಮ್ಮ ಜೀವನ ಸ್ವಾರ್ಥಕವಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಮಹಾಲಿಂಗಪುರ ಸೇವಾಕೇಂದ್ರದ ಸಂಚಾಲಕಿ ಬಿ.ಕೆ ಶಿವಲೀಲಾ ಅಕ್ಕನವರು ಹೇಳಿದರು.ಬುಧವಾರ ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಯಬಾಗ ಕೇಂದ್ರದ ವತಿಯಿಂದ 89ನೇ ಶಿವರಾತ್ರಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶಿವರಾತ್ರಿ ಆಧ್ಯಾತ್ಮಿಕ ರಹಸ್ಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮನ್ನು ನಾವು (ಆತ್ಮವನ್ನು) ಅರಿತುಕೊಳ್ಳುವವರೆಗೆ ಪರಮಾತ್ಮನನ್ನು ಅರಿಯಲು ಸಾಧ್ಯವಿಲ್ಲ. ಆಧ್ಯಾತ್ಮಿಕವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.ಮಾಜಿ ಸಂಸದ ಅಮರಸಿಂಹ ಪಾಟೀಲ, ರಾಯಬಾಗ ಸೇವಾಕೇಂದ್ರದ ಬಿ.ಕೆ ಪುಷ್ಪ ಅಕ್ಕನವರು, ಶಿರಗುಪ್ಪಿ ಸೇವಾಕೇಂದ್ರದ ಬಿ.ಕೆ ನೀತಾ ಅಕ್ಕನವರು, ಸಿಬಿಕೆಎಸ್.ಎಸ್.ಕೆ ನಿರ್ದೇಶಕ ತಾತ್ಯಾಸಾಬ ಕಾಟೆ, ಡಿ.ಎಸ್.ನಾಯಿಕ, ದಶರಥ ಶೆಟ್ಟಿ, ಬಸಯ್ಯ ನಿಶಾನಮಠ, ಹರೀಶ ಕುಲಗುಡೆ, ಎ.ಬಿ.ಮಂಗಸೂಳೆ, ಡಿ.ಎಲ್.ಮೀರ್ಜೆ, ಎಚ್.ಎ.ಭಜಂತ್ರಿ, ಸಂಗಣ್ಣ ದತ್ತವಾಡೆ, ಅಪ್ಪಾಸಾಬ ಮುಗಳಖೋಡ, ಸದಾನಂದ ಹಳಿಂಗಳಿ, ಶಿವಪುತ್ರ ಅಮರಶೆಟ್ಟಿ, ಬಿ.ಎಮ್.ಮಾಳಿ, ಲಗಮಣ್ಣ ಪಾಟೀಲ, ರಾಜಕುಮಾರ ಧುಮಾಳೆ, ಅಜೀತ ನಾಯಿಕ, ಅಮೋಘ ನಾಯಿಕ ,ಮಹೆಶ ಹವಾಲದಾರ , ಸೇರಿ ಅನೇಕ ಭಕ್ತರು ಇದ್ದರು.ಫೋಟೊ: 27 ರಾಯಬಾಗ 1ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಯಬಾಗ ಕೇಂದ್ರದಿಂದ ಹಮ್ಮಿಕೊಂಡಿದ್ದ ಶಿವರಾತ್ರಿ ಆಧ್ಯಾತ್ಮಿಕ ರಹಸ್ಯ ಕಾರ್ಯಕ್ರಮವನ್ನು ಮಾಜಿ ಸಂಸದ ಅಮರಸಿಂಹ ಪಾಟೀಲ ಉದ್ಘಾಟಿಸಿದರು. ಬಿ.ಕೆ. ಶಿವಲೀಲಾ ಅಕ್ಕನವರು, ಬಿ.ಕೆ.ನೀತಾ ಅಕ್ಕನವರು, ಪುಷ್ಪ ಅಕ್ಕನವರು, ತಾತ್ಯಾಸಾಬ ಕಾಟೆ, ಡಿ.ಎಸ್.ನಾಯಿಕ, ದಶರಥ ಶೆಟ್ಟಿ, ಬಸಯ್ಯ ನಿಶಾನಮಠ, ಹರೀಶ ಕುಲಗುಡೆ ಇದ್ದರು.