ಲೋಕದರ್ಶನ ವರದಿ
ಕೊಪ್ಪಳ 25: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಜಿಲ್ಲೆಯ ಕುಕನೂರು ತಾಲೂಕಿನ ಐತಿಹಾಸಿಕ ಪ್ರಸಿದ್ಧ ದೇವಾಲಯಗಳ ಚಕ್ರವರ್ತಿ ಎಂದೇ ಖ್ಯಾತಿ ಪಡೆದ ಇಟಗಿ ಮಹದೇವ ದೇವಸ್ಥಾನದ ಆವರಣದಲ್ಲಿ 16ನೇ ಬಾರಿಗೆ ಜರುಗಿದ ಇಟಗಿ ಉತ್ಸವದಲ್ಲಿ ಕೊಪ್ಪಳದ ಹಿರಿಯ ಪತ್ರಕರ್ತ ಶಿವರಾಜ್ ನುಗಡೋಣಿ ಅವರಿಗೆ ರವಿವಾರ ರಾತ್ರಿ ಜರುಗಿದ 2ನೇ ದಿನದ ಸಾಂಸ್ಕೃತಿಕ ಸಮಾರಂಭದಲ್ಲಿ ಚಾಲುಕ್ಯ ವಿಕ್ರಮಾಧಿತ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪತ್ರಕರ್ತ ಶಿವರಾಜ್ ನುಗಡೋಣಿ ಅವರು ಕಳೆದ 2 ದಶಕದಿಂದ ಸಲ್ಲಿಸಿದ ಪತ್ರಿಕೋದ್ಯಮದ ಉತ್ತಮ ಸೇವೆಗಾಗಿ ಈ ಬಾರಿ ಅವರಿಗೆ ಕೊಪ್ಪಳ ಜಿಲ್ಲಾ ನಾಗರೀಕರ ಸಾಂಸ್ಕೃತಿಕ ವೇದಿಕೆ ಕೊಡಮಾಡಿದ ಚಾಲುಕ್ಯ ವಿಕ್ರಮಾಧಿತ್ಯ ಪ್ರಶಸ್ತಿಯನ್ನು ಅವರ ಸೇವೆಗಾಗಿ ಪ್ರಧಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಅನ್ನದಾನೇಶ್ವರ ಮಠದ ಮಹದೇವಯ್ಯ ದೇವರು ದಿವ್ಯ ಸಾನಿಧ್ಯ ವಹಿಸಿದ್ದರು. ಕವಿ ಸಮ್ಮೇಳನದ ಅಧ್ಯಕ್ಷ ಡಾ.ಶಿವರಾಜ ಪಾಟೀಲ್, ರೈತ ಸಮ್ಮೇಳನದ ಅಧ್ಯಕ್ಷ ಎಂ.ಡಿ.ಅಳವಂಡಿ, ಸಾಹಿತಿ ಹನುಮಂತಪ್ಪ ಅಂಡಗಿ, ಬಿ.ಎಂ.ಹಳ್ಳಿ, ಹಿರಿಯ ಪತ್ರಕರ್ತ ಎಂ.ಸಾದಿಕ ಅಲಿ, ಸಮಾಜ ಸೇವಕ ಅನಿಲ್ಕುಮಾರ ಬೇಗಾರ, ಜಾನಪದ ಕಲಾ ಅಕ್ಯಾಡೆಮಿಯ 5 ಜನ ರಾಜ್ಯ ಸದಸ್ಯರು ಸೇರಿದಂತೆ ಕಾರ್ಯಕ್ರಮ ಸಂಘಟಕ ಮಹೇಶಬಾಬು ಸುವರ್ೆ ಪಾಲ್ಗೊಂಡಿದ್ದರು.
ಶಿವರಾಜ ನುಗಡೋಣಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಹಿರಿಯ ಪತ್ರಕರ್ತರಾದ ಎಂ.ಸಾಧಿಕ್ ಅಲಿ, ಜಿ.ಎಸ್.ಗೋನಾಳ, ಸಿದ್ದಪ್ಪ ಹಂಚಿನಾಳ, ಶಿವಕುಮಾರ ಹಿರೇಮಠ, ರವಿಚಂದ್ರ ಬಡಿಗೇರ, ಫಕೀರಪ್ಪ ಗೋಟೂರು ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪತ್ರಕರ್ತರು ಅಭಿನಂದಿಸಿದ್ದಾರೆ.