ಶಿವರಾತ್ರಿ ಪ್ರಯುಕ್ತ ಶಿವಲಿಂಗ ಮೂರ್ತಿ ಮೆರವಣಿಗೆ

Shivlinga idol procession on the occasion of Shivratri

ಶಿವರಾತ್ರಿ ಪ್ರಯುಕ್ತ ಶಿವಲಿಂಗ ಮೂರ್ತಿ ಮೆರವಣಿಗೆ

ಯರಗಟ್ಟಿ, 04 : ಶಿವರಾತ್ರಿ ಪ್ರಯುಕ್ತ ಶಿವಲಿಂಗ ಮೂರ್ತಿ ಮೆರವಣಿಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪಟ್ಟಣದಲ್ಲಿ ಭಾನುವಾರ ಸಡಗರದಿಂದ ಜರುಗಿತು. ಪಟ್ಟಣದಲ್ಲಿ ಬೆಳಿಗ್ಗೆ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ವಿವಿಧ ಶಾಲೆ ಮಕ್ಕಳು ಶಿವ, ಪಾರ್ವತಿ, ಗಣೇಶ, ನಂದಿ ಮತ್ತಿತರ ವೇಷಭೂಷಣ ಧರಿಸಿ ಗಮನ ಸೆಳೆದರು ಮಹಿಳೆಯರು, ಮಕ್ಕಳು ಹಣ್ಣು, ಕಾಯಿ, ಹೂವು ಅರ​‍್ಿಸಿ ಭಕ್ತಿ ಸಲ್ಲಿಸಿದರು. ಈಶ್ವರಿ ವಿಶ್ವವಿದ್ಯಾಲಯದ ಜಯಶ್ರೀ ಬಿ. ಕೆ. ಅಕ್ಕನವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮ ಉದ್ದೇಶಿಸಿ ನಿಲಯ ಪಾಲಕರಾದ ಆಶಾ ಪರೀಟ ಮಾತನಾಡಿ ವರ್ಷಕ್ಕೊಮ್ಮೆ ಬರುವ ಶಿವರಾತ್ರಿ ಹಬ್ಬ ಮಾನಸಿಕ ಹಾಗೂ ದೈಹಿಕ ಸದೃಡತೆಗೆ ಶಕ್ತಿ ತುಂಬುವ ಹಬ್ಬವಾಗಿದೆ. ಈ ಹಬ್ಬದಲ್ಲಿ ಶಿವನಿಗಾಗಿ ಇಡೀ ದಿನ ಉಪವಾಸ ಇರುವುದು ದೈಹಿಕ ಆರೋಗ್ಯ ವೃದ್ಧಿಯಾಗಲು ಸಹಕಾರಿಯಾಗುತ್ತದೆಯಲ್ಲದೇ, ಜಾಗರಣೆ ರೂಪದಲ್ಲಿ ಶಿವನನ್ನು ಸ್ಮರಿಸುವುದು ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ ಎಂದು ಹೇಳಿದರು.ಈ ವೇಳೆ ಗ್ರಾ. ಪಂ. ಅಧ್ಯಕ್ಷ ಲಕ್ಕಪ್ಪ ಸನ್ನಿಂಗನವರ, ಜೆ. ರತ್ನಾಕರ ಶೆಟ್ಟಿ, ಎಚ್‌. ಎಸ್‌. ಗಂಗರಡ್ಡಿ, ರಾಜೇಂದ್ರ ವಾಲಿ, ಬಾಸ್ಕರ ಹಿರೇಮತ್ರಿ, ಡಾ. ವಿಶ್ವನಾಥ ತಾವಂಶಿ, ಎಲ್‌. ಎಂ. ಕುಮಕಾಗೋಳ, ಎಸ್‌. ಆರ್‌. ತೋಟಗಿ ಸೇರಿದಂತೆ ಅನೇಕರು ಇದ್ದರು.