ಲೋಕದರ್ಶನವರದಿ
ರಾಣೇಬೆನ್ನೂರು21: ಇಲ್ಲಿನ ಹಿರೇಮಠದ ಶನೈಶ್ಚರ ಮಂದಿರದ ಆವರಣದಲ್ಲಿ ರಾಜ್ಯದ ಮೊದಲನೆಯದಾಗಿರುವ ಶನೈಶ್ಚರ ಸ್ವಾಮಿಯ 7ನೇ ವಾಷರ್ಿಕೋತ್ಸವ ಮತ್ತು ಲೋಕ ಕಲ್ಯಾಣಾರ್ಥವಾಗಿ ತಿಲಲಕ್ಷದೀಪೋತ್ಸವ, ರೈತ ಚೈತನ್ಯ ಜ್ಯೋತಿಯಾತ್ರೆಯು ನ.23ರಂದು ನಡೆಯಲಿದ್ದು, ತನ್ನಿಮಿತ್ತ ಗುರುವಾರ ಶ್ರೀಗಳು ತಾಲೂಕಿನ ಕುದರಿಹಾಳ ಬಳಿಯಿರುವ ತುಂಗಭದ್ರ ನದಿಯಿಂದ ಪಾದಯಾತ್ರೆಯ ಮೂಲಕ ಕುಂಭದೊಂದಿಗೆ ನೀರು ತರುವ ಕಾರ್ಯಕ್ರಮ ನೆರವೇರಿತು.
ಹಿರೇಮಠ ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಅಂದು ಬೆಳಗಿನ ಜಾವ 5ಗಂಟೆಗೆ ತಾಲೂಕಿನ ತುಂಗಭದ್ರ ನದಿಯಿಂದ ಕುಂಭದಲ್ಲಿ ನೀರನ್ನು ತುಂಬಿಕೊಂಡು, ನೂರಾರು ಮಹಿಳೆಯರ ಕುಂಭೋತ್ಸವ ಹಾಗೂ ಭಕ್ತರ ಸಮೂಹದ ಮೂಲಕ ಶ್ರೀಗಳೇ ಒದ್ದೆ ಬಟ್ಟೆಯೊಂದಿಗೆ ಪಾದಯಾತ್ರೆಯ ಮೂಲಕ ಮಂದಿರದವರೆಗೆ ಹೊತ್ತೊಯ್ದು ಆಗಮಿಸಿದರು.
ಸುಮಾರು 4ಘಂಟೆಗಳ ಕಾಲ ಪಾದಯಾತ್ರೆಯಲ್ಲಿ ಆಗಮಿಸಿ ಶನೈಶ್ಚರ ಸ್ವಾಮಿಗೆ ರುದ್ರಾಭಿಷೇಕ ಮತ್ತಿತರ ಪೂಜೆಗಳನ್ನು ಶ್ರೀಗಳು ನೆರವೇರಿಸಿದರು. ಪಾದಯಾತ್ರೆಯಲ್ಲಿ ನೂರಾರು ಭಕ್ತರು, ಶಾಸ್ತ್ರೀಗಳು, ವಟುಗಳು, ಮಹಿಳೆಯರು ಮತ್ತಿತರರು ಭಾಗವಹಿಸಿದ್ದರು.
7ನೇ ವರ್ಷದ ಈ ತಿಲಲಕ್ಷದಿಪೋತ್ಸವದಲ್ಲಿ 750 ವಿಕಲಚೇತನರಿಗೆ ಸನ್ಮಾನಿಸಿ ಗೌರವಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವರ್ಷದ ವಿಶೇಷ ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ಸಿಗೊಳಿಸಬೇಕೆಂದು ಶ್ರೀಗಳು ವಿನಂತಿಸಿದರು.
ಈಗಾಗಲೇ ನ.16ರಿಂದ ವಿವಿಧ ಕಾರ್ಯಕ್ರಮಗಳು ಆರಂಭಗೊಂಡಿವೆ. ಪ್ರತಿದಿನ ಮುಂಜಾನೆಯಿಂದ ಮಹಾರುದ್ರಯಾಗ, ಅಭಿಷೇಕ, ಹೋಮ, ರುದ್ರಾಭಿಷೇಕ, ಮಂಗಳಾರತಿ, ಶಿವಪಂಚಾಕ್ಷರಿ ಜಪ. ಸಿದ್ದಾಂತ ಶಿಖಾಮಣಿ ಪಾರಾಯಣ, ಕುಂಕುಮಾರ್ಚನೆ, ಪೂಣರ್ಾಹುತಿ, ಪ್ರವಚನ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಪೂಜಾ ಹಾಗೂ ಧಾಮರ್ಿಕ ಕಾರ್ಯಕ್ರಮಗಳು ನಿರಂತರವಾಗಿ ನೆರವೇರುತ್ತಿವೆ. ನ.23ರಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಧರ್ಮ ಸಮಾರಂಭ ಜರುಗಲಿವೆ ಎಂದರು.