ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

ಗದಗ 14: ಗದಗ ಜಿಲ್ಲಾಡಳಿತದ  ಮುಖ್ಯ ಸಭಾಂಗಣದಲ್ಲಿ  ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಶಿವಯೋಗಿ ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಮಪರ್ಿಸಿ ಗೌರವವನ್ನು ಸಲ್ಲಿಸುವ ಮೂಲಕ ಶಿವಯೋಗಿ ಸಿದ್ದರಾಮ  ಜಯಂತಿಯನ್ನು ಆಚರಿಸಲಾಯಿತು. 

ಪ್ರಾಧ್ಯಾಪಕರಾದ ಡಾ. ಆರ್.ಎಚ್.ಜಂಗನವಾರಿ ಹಾಗೂ ಕೆ.ಎಚ್.ಬೇಲೂರ ಶಿವಯೋಗಿ ಸಿದ್ದರಾಮರ ಜೀವನ ಮತ್ತು ಸಂದೇಶ ಕುರಿತು ಉಪನ್ಯಾಸ ನೀಡಿ ಶಿವಯೋಗಿ ಸಿದ್ದರಾಮರು ಸಾಕ್ಷಾತ ಶಿವನನ್ನು ಒಳಿಸಿಕೊಂಡು ತಮ್ಮ ಇಡೀ ಜೀವನವನ್ನು ಲೋಕಲ್ಯಾಣಕ್ಕೆ ಮುಡುಪಾಗಿಟ್ಟಂತಹ ಮಹನೀಯರಾಗಿದ್ದರು ಎಂದರು. ಭೋವಿ ವಡ್ಡರ ಸಮಾಜದಲ್ಲಿ ಶೈಕ್ಷಣಿಕ ಹಾಗೂ ಆಥರ್ಿಕವಾಗಿ ಹಿಂದುಳಿದಿದೆ. ಈ ಸಮುದಾಯದ ಮಕ್ಕಳು  ಉತ್ತಮ ಶಿಕ್ಷಣ ಪಡೆಯುವದರ ಮೂಲಕ ಸಮಾಜದ ಉನ್ನತ ಸ್ಥಾನಮಾನ  ಹೊಂದುವಂತಾಗಬೇಕಿದೆ ಎಂದು ನುಡಿದರು. ಶಿವಯೋಗಿ ಸಿದ್ದರಾಮರು ಹೆಣ್ಣಿಗೆ ಗೌರವ ನೀಡಿರುವದನ್ನು ಅವರ ವಚನಗಳ ಮೂಲಕ ತಿಳಿಯಬಹುದಾಗಿದ್ದು ಅವರು ರಚಿಸಿದಂತಹ ವಚನಗಳು ಎಲ್ಲರಿಗೂ ಆದರ್ಶಪ್ರಾಯವಾಗಿದ್ದು ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೂ ತಿಳಿಸುವದರ ಮೂಲಕ ಲೋಕಕಲ್ಯಾಣದ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗಬೇಕಾಗಿದೆ ಎಂದು ನುಡಿದರು.

ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ತಾ.ಪಂ. ಸದಸ್ಯ ವಿದ್ಯಾಧರ ದೊಡ್ಡಮನಿ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ  ಬಿ.ಕಲ್ಲೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಭೋವಿ ವಡ್ಡರ ಸಂಘಧ ಜಿಲ್ಲಾಧ್ಯಕ್ಷ ಉಜ್ಜಪ್ಪ ಸಂದಕದ, ಉಪಾಧ್ಯಕ್ಷ ಚಿಕ್ಕಪ್ಪ ವಡ್ಡಟ್ಟಿ, ಸಮಾಜದ ಗಣ್ಯರುಗಳಾದ ಬಸವರಾಜ ಗದಗಿನ, ಆಂಜನೇಯ ಕಟಗಿ, ನಾಗಶೆಟ್ಟಿ ನಿಡಗುಂದಿ, ವೆಂಕಟೇಶ ನಿಡಗುಂದಿ, ಯಲ್ಲಪ್ಪ ಅಸುಂಡಿ, ಬಸವರಾಜ ಬಳ್ಳಾರಿ, ಈರಪ್ಪ ಪೂಜಾರ, ಸಹದೇವಪ್ಪ ವಡ್ಡರ, ಸಹದೇವಪ್ಪ ಕೋಟಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.