ಬಸವಕೇಂದ್ರದಲ್ಲಿ ಶಿವಶರಣೆ ಅಕ್ಕಮಹಾದೇವಿಯ ಜಯಂತಿ
ಕಳಸಾಪೂರ 10: ಗದಗ ತಾಲೂಕ ಕಳಸಾಪೂರ ಗ್ರಾಮದ ಬಸವಕೇಂದ್ರದಲ್ಲಿ ಮೊದಲಿಗೆ ಸಾಮೂಹಿಕ ಪ್ರಾರ್ಥನೆಯನ್ನು ಮಲ್ಲಿಕಾರ್ಜುನ ಗ. ಖಂಡಮ್ಮನವರ ನೆರವೇರಿಸಿಕೊಟ್ಟರು. ನಂತರ ವಚನಗೋಷ್ಠಿ ಹಾಗೂ ವಚನ ಅನುಭವಗೋಷ್ಠಿ ಜರುಗಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ ಶಿವಶರಣೆ ಅಕ್ಕಮಹಾದೇಯ ಸಾಧನೆ ಮತ್ತು ಅನುಭವ ಮಂಟಪದಲ್ಲಿ ನಡೆದ ಪರೀಕ್ಷೆ ಸಂದರ್ಭದಲ್ಲಿ ಮನ ಶುದ್ಧವಾಗಬೇಕಾದರೆ ತನುಗುಣದ ವಿವರಣೆ ತಿಳಿಯಬೇಕು, ಇಂದ್ರಿಯಗಳು ಶುದ್ಧವಾಗಬೇಕಾದರೆ ಮನಗುಣದ ವಿವರಣೆ ತಿಳಿಯಬೇಕು. ಪರಿಶುದ್ಧ ತನುಮನ ಇಂದ್ರಿಯಗಳು ಕಾವಲಾಗಿ ಲಿಂಗಕ್ಕೆ ತಿಳಿಯಲ್ಪಡದಿದ್ದರೆ ಆ ಮಲ್ಲಿಕಾರ್ಜುನ ಲಿಂಗವನ್ನು ಕೇಳಿಕೊಳ್ಳಲಾಗದು ತಾಯಿ ! ಎಂದು ಪ್ರಭುದೇವರು ಗಹನ ಸಮಸ್ಯೆಗಳೊಡಗೂಡಿದ ಮಾತುಗಳನ್ನಾಡಿದರು.
ಶಿವಶರಣರ ಪ್ರಸಾದದಿಂದ ಎನ್ನದೇಹ ಶುದ್ದವಾಗಿದೆ, ಶಿವಶರಣರ ಸ್ಮರಣೆಯಿಂದ ನನ್ನ ಭಾವ ಶುದ್ಧವಾಗಿದೆ. ಶಿವಶರಣರ ಹೊಗಳಿಕೆಯನ್ನಾಲಿಸಿ ನನ್ನ ಕಣ್ಣುಗಳು ಶುದ್ಧವಾದವು. ಇಲ್ಲಿಯ ಸರ್ವ ಮಹಾನುಭಾವರನ್ನು ಕಂಡು ಎನ್ನ ನೇತ್ರಗಲು ಪವಿತ್ರವಾದವು. ಚೆನ್ನಮಲ್ಲಿಕಾರ್ಜುನನ ಕೃಪೆಯಿಂದ ಎನ್ನ ಸಂಸಾರ ದೂರವಾಯ್ತು. ಬಸವಣ್ಣನ ಕೃಪೆಯಿಂದ ಪ್ರಭುದೇವರ ದರ್ಶನವಾಯ್ತು, ಚನ್ನಬಸವಣ್ಣನನ ಕೃಪೆಯಿಂದ ಎನ್ನ ಹರಣ ಬಯಲಾಗಲು ಸುಗಮವಾಯಿತು. ಚೆನ್ನಮಲ್ಲಿಕಾರ್ಜುನನಲ್ಲಿ ಐಕ್ಯವಾಗುವ ಮುನ್ನ ನಿಮ್ಮ ಕೊನೆಯ ದರ್ಶನದ ಫಲವು ಲಭಿಸಿತು. ಪ್ರಭುದೇವಾ ! ಇನ್ನು ಆಶೆ-ಆಕಾಂಕ್ಷೆಗಳೇಕೆ? ಎಂದು ಅಕ್ಕಮಹಾದೇವಿಯು ಆಧ್ಯಾತ್ಮಿಕ ಸೊಲ್ಲುಗಳನ್ನು ಸುರಿದಳು.
ಅಂಗದ ಭಂಗವ ಲಿಂಗ ಮುಖದಿಂದ ಗೆಲಿದೆ, ಮನದ ಭಂಗವ ಅರಿವಿನ
ಮುಖದಿಂದ ಗೆಲಿದೆ, ಜೀವನ ಭಂಗವ ಶಿವಾನುಭದಿಂದ ಗೆಲಿದೆ, ಕರಣದ
ಕತ್ತಲೆಯ ಬೆಳಗನುಟ್ಟು ಗೆಲಿದೆ, ಜವ್ವನದ ಹೊರಮಿಂಚಿನಲ್ಲಿ ಕಣ್ಣಿಗೆ ತೋರುವ ಕಾಮನ ಸುಟ್ಟು ರುಹಿದ ಭಸ್ಮವ ನೋಡಯ್ಯ ಚನ್ನಮಲ್ಲಿಕಾಜರ್ುನಯ್ಯ ಕಾಮನ ಕೊಂದು ಮನಸಿನಾಗುಳುಹಿದರೆ ಮನಸಿಜನ ಹಣೆಯ ಬರಹ ತೊಡೆದೆ ಎಂದು ಅಕ್ಕಮಹಾದೇವಿಯ ವೀರವೈರಾಗ್ಯದ ನುಡಿಗಳಾಗಿವೆ.
ಮುಂದುವರೆದ ಮಾತನಾಡಿದ ಮಲ್ಲಿಕಾರ್ಜುನ ಖಂಡಮ್ಮನವರ ಎಲ್ಲರೂ ಶಿವಶರಣರ, ಶಿವಶರಣೆಯರ ವಚನ ತತ್ವ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋದರೆ ಮೂಢನಂಬಿಕೆ, ಕಂದಾಚಾರ, ಜಾತಿಭೇದ ಎಲ್ಲವೂ ನಶಿಸಿ ಹೋಗುತ್ತದೆ. ಎಲ್ಲರೂ ವಿಶ್ವ ಮಾನವರಾಗಿ ಬಾಳೋಣ ಎಂದು ಕಳಸಾಪೂರ ಗ್ರಾಮದ ಬಸವಕೇಂದ್ರದ ಕಾರ್ಯಾಧ್ಯಕ್ಷರು, ಕನ್ನಡ ಅಭಿಮಾನಿ ಸಮಾಜಸೇವಕ ಮಲ್ಲಿಕಾಜರ್ುನ ಗ. ಖಂಡಮ್ಮನವರ ಇವರು ಜನತೆಗೆ ಕರೆ ಕೊಟ್ಟಿರುತ್ತಾರೆ.
ಕಾರ್ಯಕ್ರಮ ನಿರೂಪಣೆಯನ್ನು ಗುರುರಾಜ ಹ. ಹಾದಿಮನಿ ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟರು. ಕೊನೆಗೆ ವಚನ ಮಂಗಲಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತೆಂದು ಮಹಾದೇವಪ್ಪ ರಾ. ಅಣ್ಣಿಗೇರಿ ಇವರು ತಿಳಿಸಿರುತ್ತಾರೆ