ಲೋಕದರ್ಶನ ವರದಿ
ಗೋಕಾಕ 02: ದಿ. ಕಲಾಶ್ರೀ ನಿಂಗಯ್ಯಾಸ್ವಾಮಿ ಪೂಜಾರಿ ಯವರ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಇತ್ತಿಚೇಗೆ ತಮಿಳುನಾಡಿನ ಇಂಡಿಯನ್ ವಚರ್ೂವಲ್ ಯೂನಿಸರ್ಿಸಿಟಿ ಚೆನೈ ಅವರು ಧಾಮರ್ಿಕ ಮತ್ತು ಸಾಮಾಜಿಕ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದ್ದ ಜಿಲ್ಲೆಯ ಪ್ರತಿಷ್ಠಿತ ಮಠವಾಗಿರುವ ಭಾಗೋಜಿಕೊಪ್ಪ ಹಿರೇಮಠದ ಶಿವಲಿಂಗೇಶ್ವರ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಇಂದು ನೈತಿಕ ಮೌಲ್ಯಗಳನ್ನು ಜನರಿಗೆ ಬೋಧಿಸಿ ತನ್ಮೂಲಕ ಸುಸಂಸ್ಕೃತ ಸಾಮಾಜಿಕ ಬದುಕಿಗೆ ದಾರಿ ತೋರಿಸುತ್ತಿರುವ ಮಠಾಧೀಶರು ಮತ್ತು ಸ್ವಾಮಿಜೀಗಳು ಸಾಮಾಜಿಕ ಪರಿವರ್ತನೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು, ಭಾಗೋಜಿಕೊಪ್ಪದ ಶಿವಲಿಂಗೇಶ್ವರ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಧಾಮರ್ಿಕ, ಸಾಮಾಜಿಕ ಸೇವೆಯೊಂದಿಗೆ ಈ ನಾಡಿನ ಜನಸಮುಧಾಯದ ಬೇಕು ಬೇಡಿಕೆಗಳಿಗೆ ಸ್ಪಂಧಿಸುತ್ತ ಸಾಮಾಜಿ ಹೋರಾಟಗಳಲ್ಲಿಯೂ ಸಹ ಭಾಗವಹಿಸಿ ಈ ಭಾಗದ ಜನರ ಭಾವನೆಗಳಿಗೆ ಸ್ಪಂಧಿಸುತ್ತಿರುವದು ಅಭಿನಂದನೀಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮಿಗಳು, ಹಣಶ್ಯಾಳದ ಪಿ.ಜಿ.ಯ ನಿಜಗುಣ ದೇವರು, ಬೆಂಡವಾಡದ ಗುರುಸಿದ್ದಸ್ವಾಮಿಗಳು, ಜಂಗಟಿಹಾಳದ ಚಂದ್ರಶೇಖರ ಮಹಾರಾಜರು, ಬಳೋಬಾಳದ ಸಂಗನಬಸವ ಸ್ವಾಮಿಗಳು, ಧೂಪದಾಳ ಮಾತೋಶ್ರೀ ನೀಲಾಂಬಿಕಾದೇವಿ, ಸಂಕ್ರಟ್ಟಿಯ ಶಂಕರಾನಂದ ಶರಣರು, ಹಳಿಂಗಳಿಯ ಮಹಾವೀರ ಶರಣರು, 'ಜ್ಞಾನ ಮಂದಿರ' ಆಧ್ಯಾತ್ಮ ಕೇಂಧ್ರದ ಧರ್ಮದಶರ್ಿ ಸುವಣರ್ಾ ಹೊಸಮಠ, ಸಂಗಯ್ಯಾ ಪೂಜಾರಿ, ಗುರುಬಸಯ್ಯ ಕಪರ್ೂರಮಠ ಮುಂತಾದ ಗಣ್ಯರು ಉಪಸ್ಥಿತರಿದ್ದರು.