ರಾಮತೀರ್ಥ ನಗರದ ಶಿವಾಲಯ 19ನೇ ವರ್ಷದ ಜಾತ್ರಾ ಮಹೋತ್ಸವ

Shivalaya of Ramtheertha Nagar 19th year Jatra Mahotsav

ಬೆಳಗಾವಿ 05: ರಾಮತೀರ್ಥ ನಗರದಲ್ಲಿ ಶಿವಾಲಯ ಮಂದಿರದ 19ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಮಾಜಿ ಶಾಸಕರಾದ ಅನಿಲ ಬೆನಕೆ ಪಾಲ್ಗೊಂಡು ಪೂಜೆಸಲ್ಲಿಸಿ ಆಶೀರ್ವಾದ ಪಡೆದರು.  

ಈ ಸಂದರ್ಭದಲಿ ್ಲಹುಕ್ಕೇರಿ ಹಿರೇಮಠ ಬೆಳಗಾವಿ ಶಾಖಾಮಠದ ಪ.ಪೂ.ಶ್ರೀ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜೀ, ಶಂಕರಗೌಡಾ ಪಾಟೀಲ, (ಮಾಜಿ ವಿಶೇಷ ಪ್ರತಿನಿಧಿಗಳು, ದೆಹಲಿ, ಕರ್ನಾಟಕಸರಕಾರ.), ಮಹಾಂತೇಶ ಕಿವಡಸಣ್ಣವರ (ಸಂಸ್ಥಾಪಕ ಅಧ್ಯಕ್ಷರು, ಸಮರ್ಥನಂ ಅಂಗವಿಕಲ ಸಂಸ್ಥೆ, ಬೆಂಗಳೂರು.) ಎಸ್‌. ಎಸ್‌.ಕಿವಡಸಣ್ಣವರ (ಅಧ್ಯಕ್ಷರು, ರಾಮತೀರ್ಥ ನಗರ ರಹವಾಸಿಗಳ ಸಂಘ ಹಾಗೂ ಶಿವಾಲಯ ಟ್ರಸ್ಟ್‌ ಕಮೀಟಿ, ಬೆಳಗಾವಿ.), ರಾಮತೀರ್ಥ ನಗರ ರಹವಾಸಿಗಳ ಸಂಘ, ಶಿವಾಲಯ ಟ್ರಸ್ಟ ಕಮಿಟಿ, ಹಾಗೂ ರಾಮತೀರ್ಥ ನಗರ ಯುವಕ ಮಂಡಳ, ಸಮಸ್ತ ರಾಮತೀರ್ಥ ನಗರ ರಹವಾಸಿಗಳು, ಗುರು ಹಿರಿಯರು ಉಪಸ್ಥಿತರಿದ್ದರು.