ಶಿವಾಜಿ ಮಹಾರಾಜರು ಸರ್ವಧರ್ಮವನ್ನೂ ಏಕರೂಪದಲ್ಲಿ ನೋಡಿದ ವ್ಯಕ್ತಿತ್ವ

ಹಾವೇರಿ.19 :ಶಿವಾಜಿ ಮಹಾರಾಜರು ಕೇವಲ ಮರಾಠಾ ಸಮುದಾಯಕ್ಕೆ ಸೀಮಿತರಲ್ಲ. ಅವರೂ ಸರ್ವಧರ್ಮವನ್ನೂ ಏಕರೂಪದಲ್ಲಿಯೇ ನೋಡಿದ್ದಾರೆ. ಜಾತ್ಯಾತೀತ ಹಾಗೂ ಧರ್ಮಾ ತೀತ ವ್ಯಕ್ತಿತ್ವ ಅವರದ್ದಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಅವರ ದೇಶಭಕ್ತಿ, ಜೀವನ ಮೌಲ್ಯಗಳು ಆದರ್ಶವಾಗಿವೆ ಎಂದು ಉಪನ್ಯಾಸಕಿ ರಾಜಶ್ರೀ ಸಜ್ಜೇಶ್ವರ ಅವರು ಹೇಳಿದರು.

    ನಗರದ ಮರಾಠಾ ಸಮುದಾಯ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಜರುಗಿದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.

     ಶಿವಾಜಿ ಬಾಲ್ಯದಲ್ಲಿಯೇ ದೇಶಭಕ್ತಿಯ ಕಿಚ್ಚನ್ನು ಹೊಂದಿದ್ದರು. ಶಿವಾಜಿ ಭಾರತದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಶಿವಾಜಿ ಅವರು ತನ್ನ ಸ್ವಾರ್ಥಕ್ಕಾಗಿ ಸಾಮ್ರಾಜ್ಯವನ್ನು ವಿಸ್ತರಿಸದೇ ದೇಶವನ್ನು ಒಗ್ಗೂಡಿಸುವುದಕ್ಕಾಗಿ ಸಾಮ್ರಾಜ್ಯ ವಿಸ್ತಿರಿಸಿ ವಿಜಯಸಾಧಿಸಿದ್ದಾರೆ. ಶಿವಾಜಿ ಮಹಾರಾಜರ ಮೂಲ ಕನರ್ಾಟಕವಾಗಿದೆ. ಅವರು ಕನ್ನಡದವರಾಗಿದ್ದು, ವಿಜಯನಗರ ಸಾಮ್ರಾಜ್ಯದಿಂದ ಸ್ಪೂತರ್ಿ ಹಾಗೂ ಪ್ರೋತ್ಸಾಹ ಪಡೆದಿದ್ದಾರೆ ಎಂದು ಅಭಿಪ್ರಾಯಿಸಿದರು.  

ಇಂದಿನ ಮಕ್ಕಳು ಇತಿಹಾಸವನ್ನು ಪರೀಕ್ಷೆಗೆ ಮಾತ್ರ ಸೀಮಿತಪಡಿಸುತ್ತಿದ್ದಾರೆ. ಕೇವಲ ಪರೀಕ್ಷೆ ಬರೆದು ಅಂಕಗಳಿಸಿ ಮರೆತು ಬೀಡುತ್ತಾರೆ. ನಮ್ಮ ಇತಿಹಾಸ, ಸಂಸ್ಕೃತಿ ಅಂಕಗಳಿಸುವಿಕೆ ಮಾತ್ರ ಸೀಮಿತವಾಗದೇ ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಪ್ರತಿಮಗುವಿನಲ್ಲಿಯೂ ಶಿವಾಜಿಯ ಆಶಯ, ಆದರ್ಶಗಳನ್ನು ತುಂಬಿಸಬೇಕು. ಪಾಲಕರು ಮಕ್ಕಳಿಗೆ ಇತಿಹಾಸದಲ್ಲಿರುವ ಒಳ್ಳೆಯ ಅಂಶಗಳು, ರಾಜರ ಸಾಧನೆ, ದೇಶಭಕ್ತಿ, ಸಂಸ್ಕೃತಿ, ಸಂಪ್ರದಾಯಗಳ ಮಹತ್ವವನ್ನು ತಿಳಿಸಬೇಕು ಎಂದು ಹೇಳಿದರು

    ಇಂದಿನ ಯುವಜನಾಂಗ ಅದ್ಧೂರಿ ಮೆರವಣಿಗೆ ಮಾಡಿ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿ ಮನರಂಜನೆ ಪಡೆದುಕೊಳ್ಳುವುದು ಆಚರಣೆಯಲ್ಲ, ಬದಲಾಗಿ ಎಲ್ಲರೂ ಛತ್ರಪತಿ ಶಿವಾಜಿ ಅವರ ಜೀವನದ ಮೌಲ್ಯ, ನೈತಿಕ ಅಂಶಗಳನ್ನು ಪಾಲಿಸಬೇಕು ಎಂದು ಹೇಳಿದರು.

    ತಾಲೂಕು ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಕಮಲವ್ವ ಪಾಟೀಲ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅಧ್ಯಕ್ಷತೆ ವಹಿಸಿದ್ದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೆಶಕಿ ಶಶಿಕಲಾ ಹುಡೇದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

     ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ ಸಂಗೂರು, ನಗರಸಭೆ ಸದಸ್ಯೆ ಚನ್ನಮ್ಮಾ ಬ್ಯಾಡಗಿ, ಉಪತಹಶೀಲ್ದಾರ ಪಿ.ಎಸ್. ಕುಂಬಾರ್ ಹಾಗೂ ಇತರರು ಉಪಸ್ಥಿತರಿದ್ದರು.