ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ
Shiva Sharan Hadapada Appanna Jayanti Celebration
ಪಾಲಬಾವಿ, ಜು.29: ಸಮೀಪದ ಕಪ್ಪಲಗುಡ್ಡಿ ಗ್ರಾಮದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ 12ನೇ ಶತಮಾನದ ಮಹಾಮಾನವ, ವಿಶ್ವಗುರು ಬಸವಣ್ಣನವರ ಆಪ್ತರಾದ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಬುಧವಾರ ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಗುರುಮಠದ ಪಂಚಾಕ್ಷರಿ ಹಿರೇಮಠ ವಹಿಸಿದ್ದರು. ಪಿಕೆಪಿಎಸ್ ಸಂಘದ ಅಧ್ಯಕ್ಷ ಶಿವಪ್ಪ ದಡ್ಡಿಮನಿ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟುಗೌಡ ನಾಯಿಕ ಅವರು ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮಪ್ಪ ಮಂಟೂರ, ಪಿಕೆಪಿಎಸ್ ಸಂಘದ ಉಪಾಧ್ಯಕ್ಷ ಮಹಾಲಿಂಗಪ್ಪ ಅಂಗಡಿ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿಯ ಅಧ್ಯಕ್ಷ ಅಡಿವೆಪ್ಪ ಬದ್ರಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆಂಪಣ್ಣ ಕುರನಿಂಗ, ಮಂಜು ಮೇತ್ರಿ, ಬರಮಪ್ಪ ಬಾಗೋಜಿ, ಸಂಗಪ್ಪ ನಾವಿ, ಪಿಕೆಪಿಎಸ್ ಸಂಘದ ಮಾಜಿ ಅಧ್ಯಕ್ಷ ಮಹಾದೇವ ಅಂಗಡಿ, ಮಹಾದೇವ ಸುಬಾಣಿ, ಮಾರುತಿ ನಾವಿ, ಮಹಾದೇವ ನಾಯಿಕ, ಶಿವಪ್ಪ ನಾವಿ, ಶ್ರೀಶೈಲ ಹೊರಟ್ಟಿ, ಬಸಪ್ಪ ನಾವಿ, ಮಹಾದೇವ ಬಳಗಾರ, ಮಹಾದೇವ ನಾವಿ, ಈರ್ಪ ಬಂಗಿ, ಆನಂದ ನಾವಿ, ಬಹುರಾಜ ಮುನ್ಯಾಳ, ಸದಾಶಿವ ನಾವಿ, ಪ್ರಭು ನಾವಿ, ಗಿರಿಮಲ್ಲ ನಾವಿ, ಶ್ರೀಶೈಲ ನಾವಿ, ಮಹಾಲಿಂಗ ನಾವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ದಾಸೋಹ ಭವನದಲ್ಲಿ ಅನ್ನಸಂತರೆ್ಣ ನಡೆಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 