ಲೋಕದರ್ಶನ ವರದಿ
ಬೈಲಹೊಂಗಲ 31: ಸುಕ್ಷೇತ್ರ ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿಯವರ 80ನೇ ಜಯಂತ್ಯೋತ್ಸವ, ವಿಶ್ವಶಾಂತಿಗಾಗಿ 50ನೇ ಅಖಿಲ ಭಾರತ ವೇದಾಂತ ಪರಿಷತ್ತ, ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಗಳ ರಜತ, ಶಿವಯೋಗೀಶ್ವರರ ಮಹಾರಥೋತ್ಸವ ಶುಕ್ರವಾರ ಲಕ್ಷಾಂತರ ಸದ್ಭಕ್ತರ ಜಯಘೋಷಗಳ ಮಧ್ಯೆ ಸಂಭ್ರಮ, ಸಡಗರದಿಂದ ಅದ್ದೂರಿಯಾಗಿ ಜರುಗಿತು.
ಭಕ್ತರು ಚಿನಿಕೋಲ ಆಟವಾಡುತ್ತ ಬೃಹತ್ ಹೂವಿನ ಮಾಲೆಗಳನ್ನು ಮೆರವಣಿಗೆ ಮೂಲಕ ತೆರಳಿ ರಥಕ್ಕೆ ಅಪರ್ಿಸಿದರು. ಡಾ.ಶಿವಾನಂದ ಭಾರತಿ ಶ್ರೀಗಳು ಹಾಗೂ ವಿವಿಧ ಮಠಾಧೀಶರು ರಜತ ರಥಕ್ಕೆ, ಮಹಾರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಹರಹರ ಮಹಾದೇವ, ಶಿವಾನಂಧ ಭಾರತಿ ಸ್ವಾಮಿ ಮಹಾರಾಜ ಕಿ ಜೈ, ಗುರು ಸಿದ್ದಾರೂಡ ಮಹಾರಾಜಕೀ ಜೈ, ರೇವಣಸಿದ್ದೇಶ್ವರ ಕಿ ಜೈ, ಸಕಲ ಸಾಧು ಸಂತ ಮಹಾರಾಜ ಕೀ ಜೈ ಎಂದು ಜಯಘೋಷ ಮುಗಿಲು ಮುಟ್ಟುವಂತಿತ್ತು. ಭಕ್ತರು ರಥಕ್ಕೆ ಹೂ, ಹಣ್ಣು, ಕಾಯಿ, ಕಾರಿಕ, ನೈವೆದ್ಯ ಅಪರ್ಿಸಿ ಭಕ್ತಿಭಾವ ಮೆರೆದರು. ರಥಗಳನ್ನು ವಿವಿದ ಹೂಮಾಲೆಗಳಿಂದ, ಬಣ್ಣಬಣ್ಣ ಕಾಗದಗಳಿಂದ ಅಲಂಕರಿಸಲಾಗಿತ್ತು. ಎರಡು ರಥಗಳಲ್ಲಿ ಡಾ.ಶಿವಾನಂದ ಭಾರತಿ ಶ್ರೀಗಳು ಆಸೀನರಾಗಿ ಭಕ್ತರನ್ನು ಹರಿಸಿದರು. ದರ್ಶನ ಭಾಗ್ಯ ಪಡೆದು ಭಕ್ತರು ಪುನೀತರಾದರು.
ರಾಜರಾಜೇಶ್ವರಿಮಠದ ದಿವ್ಯಚೈತನ್ಯಜೀ ಮಹಾರಾಜ, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮಿಜಿ, ವಿಜಯಪುರದ ಅಭಿನವ ಶಿವಪುತ್ರ ಸ್ವಾಮಿಜಿ, ಹುಬ್ಬಳ್ಳಿಯ ಚಿದ್ರೂಪಾನಂದ ಸ್ವಾಮಿಜಿ, ರಾಮಾನಂಧ ಭಾರತಿ ಸ್ವಾಮಿಜಿ, ಹರಳಕಟ್ಟಿ ನಿಜಗುಣ ಸ್ವಾಮಿಜಿ, ಬೀದರ ಗಣಪತಿ ಮಹಾರಾಜರು, ಖುರ್ದಕಂಚನಹಳ್ಳಿ ಸುಬ್ರಹ್ಮಣ್ಯ ಸ್ವಾಮಿಜಿ, ಆಂದ್ರಪ್ರದೇಶದ ಪರಿಪೂಣರ್ಾನಂದ ಸ್ವಾಮಿಜಿ, ಪ್ರಣವಾನಂದ ಸ್ವಾಮಿಜಿ, ಮಲ್ಲಾಪುರದ ಗಾಳೇಶ್ವರಮಠದ ಚಿದಾನಂದ ಸ್ವಾಮಿಜಿ, ಪಿ.ಜಿ.ಹುಣಶ್ಯಾಳ ನಿಜಗುಣ ದೇವರು, ಹಡಗಿನಾಳದ ಮಲ್ಲೇಶ್ವರ ಶರಣರು, ಸಂಸ್ಥೆ ಚೇರಮನ್ ಡಿ.ಬಿ.ಮಲ್ಲೂರ, ಮಾಜಿ ಚೇರಮನ್ ಎಂ.ಎಸ್.ರಾಹುತನವರ, ಕಾರ್ಯದಶರ್ಿ ಎಸ್.ಎನ್.ಕೊಳ್ಳಿ, ರಾಜ್ಯ, ಹೊರ ರಾಜ್ಯಗಳ ಅನೇಕ ಮಹಾತ್ಮರು, ಭಕ್ತರು ಇದ್ದರು. ರಾಜ್ಯ ಹಾಗೂ ನೆರೆ ರಾಜ್ಯಗಳ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.