ಶಿರೂರು ಗುಡ್ಡ ಕುಸಿತ ಪ್ರಕರಣ: ಗಂಗಾವಳಿ ಪ್ರದೇಶದಲ್ಲಿ ದೊರೆತದ್ದುಮಾನವರ ಮೂಳೆ

Shiruru hill collapse case: Human bone found in Gangavali area

ಶಿರೂರು ಗುಡ್ಡ ಕುಸಿತ ಪ್ರಕರಣ: ಗಂಗಾವಳಿ ಪ್ರದೇಶದಲ್ಲಿ ದೊರೆತದ್ದುಮಾನವರ ಮೂಳೆ 

ಕಾರವಾರ 23  :ಶಿರೂರು ಗುಡ್ಡ ಕುಸಿತ ದುರಂತದ ಗಂಗಾವಳಿ ಪ್ರದೇಶದಲ್ಲಿ ದೊರೆತದ್ದುಮಾನವರ ಮೂಳೆ ಎಂದು ಡಿಎನ್ ಎ ವರದಿ ಹೇಳಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿಯಾದ ಪತ್ರಕರ್ತರ ಜೊತೆ ಮಾತನಾಡಿದ ಅವರುಗಂಗಾವಳಿ ನದಿಯಲ್ಲಿ ಕಾಣೆಯಾದ ಇಬ್ಬರ ಹುಡುಕಾಟದ ವೇಳೆ ಸಿಕ್ಕ ಮೂಳೆಗಳು ಮಾನವರ ಮೂಳೆ ಎಂದಷ್ಟೇ ವರದಿಯಲ್ಲಿ ಹೇಳಲಾಗಿದೆ. ನಿರ್ದಿಷ್ಟವಾಗಿ ಅದು ಕಾಣೆಯಾದ ಜಗನ್ನಾಥ ನಾಯ್ಕ ಮತ್ತು ಲೋಕೇಶ್ ನಾಯ್ಕರದು ಎಂದು ಗುರುತಿಸಲು ಸಾಧ್ಯವಾಗಿಲ್ಲ. ಹಾಗೆ ಪತ್ತೆ ಹಚ್ಚಲು ಬೇಕಾದ ಅಂಶಗಳು ಸಿಕ್ಕ ಎಲುಬಿನಲ್ಲಿ ಇರಲಿಲ್ಲ ಎಂದು ಡಿಎ??? ಪರೀಕ್ಷೆ ಮಾಡಿದವರು ಆರು ತಿಂಗಳ ನಂತರ ಹೇಳಿದ್ದಾರೆ .ಪ್ರಕೃತಿ ವಿಕೋಪದಲ್ಲಿ ಮಡಿದವರ ಶವ ಸಿಕ್ಕ ನಂತರ ಪರಿಹಾರ ನೀಡಬೇಕೆಂದು ಕೇಂದ್ರ ಸರ್ಕಾರಸ ಕಾನೂನು ಇದೆ. ಆದರೂ ಜಗನ್ನಾಥ ನಾಯ್ಕ, ಲೋಕೇಶ್ ನಾಯ್ಕ ವಿಷಯದಲ್ಲಿ ರಾಜ್ಯ ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿ ತಲಾ 5 ಲಕ್ಷ ಪರಿಹಾರವನ್ನು ಅವರ ಕುಟುಂಬಕ್ಕೆ ಈಗಾಗಲೇ ವಿತರಿಸಲಾಗಿದೆ. ಡಿಎನ್‌ಎ ವರದಿ ಈಗ ಬಂದಿದೆ. ಇದರಿಂದ ಜಗನ್ನಾಥ ನಾಯ್ಕ, ಲೋಕೇಶ್ ನಾಯ್ಕ ಮೃತಪಟ್ಟಿದ್ದಾರೆಂದು ಪೊಲೀಸರು ವರದಿ ನೀಡಲು ಅನುಕೂಲವಾಗಿದೆ. ನಂತರ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಜಗನ್ನಾಥ ನಾಯ್ಕ, ಲೋಕೇಶ್ ನಾಯ್ಕ ಶಿರೂರು ಮಣ್ಣು ಕುಸಿತ ಪ್ರಕರಣದಲ್ಲಿ ಮೃತಪಟ್ಟ ಬಗ್ಗೆ ಅಧಿಕೃತವಾಗಿ ದಾಖಲಾಗಲಿದೆ ಎಂದರು.ಗಂಗಾವಳಿ ನದಿಯಲ್ಲಿ ಬಿದ್ದ ಮಣ್ಣಿನ ದಿನ್ನೆ ತೆರವು ಮಾಡಲು ಉನ್ನತ ಮಟ್ಟದ ಚರ್ಚೆತಲಯಾಗಿದೆ. ಈ ಬಗ್ಗೆ ಸದ್ಯದಲ್ಲೇ ಒಂದು ಪರಿಹಾರ ಕಾರ್ಯದ ಬಗ್ಗೆ ಅಂತಿಮ ನಿರ್ಣಯವಾಗಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಗಳಲ್ಲಿ ಅಪಾಯಕಾರಿ ವಲಯ ಗುರುತಿಸಲಾಗಿದೆ. ಇದರ ತಡೆಗೆ ಕ್ರಮಗಳು ಆರಂಭವಾಗಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು .