ಶಿರನ್ನ ವೈಭವ ವಿಶೇಷ* ಉತ್ತರ ಕರ್ನಾಟಕದ ಕವನಕ್ಕೆ ಉತ್ತರ ಕನ್ನಡದ ಗಾಯನ
ರನ್ನ ಬೆಳಗಲಿ: ಇಲ್ಲಿನ ಶಿಕ್ಷಕ ಸಾಹಿತಿಗಳು, ಎಮ್ಮಾರ್ಕೆ ಕಾವ್ಯ ನಾಮಾಂಕಿತರಾದ ಮಹಾಂತೇಶ ಆರ್.ಕುಂಬಾರ ಅವರು ರನ್ನನ ಸಾಹಿತ್ಯಾರಾಧಕರೂ, ರನ್ನ ಜನಿಸಿದ ಮಣ್ಣಿನ ಘಮಲು ಘ್ರಾಣಿಸಿದವರಾಗಿ ತಮ್ಮನ್ನು ತಾವು ರನ್ನನ ಸಾಹಿತ್ಯೋಪಾಸನೆಗೆ ತೊಡಗಿಸಿಕೊಂಡಿದ್ದು, ಪ್ರಸ್ತುತ ಫೆಬ್ರುವರಿ 22, 23 ಮತ್ತು 24ರಂದು ರನ್ನ ಬೆಳಗಲಿ-ಮುಧೋಳದಲ್ಲಿ ನಡೆಯಲಿರುವ ರನ್ನ ವೈಭವದ ನಿಮಿತ್ತ ಅದೇ ರನ್ನ ವೈಭವ ಶೀರ್ಷಿಕೆಯಡಿ ಕವನವನ್ನು ಬರೆದಿದ್ದು, ಈ ಕವನವು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕೂಜಳ್ಳಿಯ ಶಿಕ್ಷಕ ಅರುಣ ಭಟ್ ಅವರ ಗಾಯನದಲ್ಲಿ ಮೂಡಿ ಬಂದು ರನ್ನ ವೈಭವಕ್ಕೆ ಮೆರುಗನ್ನು ತಂದಿದೆ. ಉತ್ತರ ಕರ್ನಾಟಕದ ಕವನ ಮತ್ತು ಉತ್ತರ ಕನ್ನಡದ ಗಾಯನ ಇವೆರಡರ ಸಮ್ಮಿಲನವನ್ನು ಎಲ್ಲ ಕನ್ನಡ ಮನಸುಗಳು, ಸಾಹಿತ್ಯಾಸಕ್ತರು ಮೆಚ್ಚಿ ಒ(ಅ)ಪ್ಪಿಕೊಂಡಿರುತ್ತಾರೆ. ಇದಲ್ಲದೆ ಎಮ್ಮಾರ್ಕೆಯವರು ರನ್ನನ ಜೀವನ, ಸಾಹಿತ್ಯ ಮತ್ತು ಗದಾಯುದ್ಧದ ಗತವೈಭವ ಸಾರುವ ಹಲವು ಕವನಗಳು, ರನ್ನನ್ ಪದ ಎಂಬ ತಲೆಬರಹದಡಿ ಚೌಪದಿಗಳನ್ನು ಬರೆದಿರುತ್ತಾರೆ.