ಶಿರಹಟ್ಟಿ: ಕರೆಂಟಿನ ಕಣ್ಣಾಮುಚ್ಚಾಲೆ: ಅತಂತ್ರ ಸ್ಥಿತಿಯಲ್ಲಿ ಶುದ್ಧ ನೀರಿನ ಘಟಕಗಳು

ಲೋಕದರ್ಶನ ವರದಿ

ಶಿರಹಟ್ಟಿ 17: ನಮ್ಮ ದೇಶದ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳು ಕುಡಿಯುವ ನೀರನ್ನೇ ಹಳ್ಳಿಯಲ್ಲಿನ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನೂ ಕೂಡ ಕುಡಿಯಬೇಕು ಎನ್ನುವ ಮಹಾದಾಸೆಯನ್ನು ಹೊತ್ತಂತಹ ರಾಜ್ಯ ಸರಕಾರದ ಯೋಜನೆಗಳಲ್ಲಿ ಮುಖ್ಯವಾಗಿ ರಾಜ್ಯದ ಪ್ರತೀ ಹಳ್ಳಿಗಳಲ್ಲಿ ಸ್ಥಾಪಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳು.

ಸದ್ಯದ ಪರಿಸ್ಥಿತಿಯಲ್ಲಿ ಜನರು ಫ್ಲೋರೈಡಯುಕ್ತ ನೀರನ್ನು ಕುಡಿದು ಹಲವಾರು ರೋಗ-ರುಜಿನಗಳನ್ನು ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಉತ್ತಮ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆಯಿದ್ದು ಮಾನ್ಯ ಕನರ್ಾಟಕ ಘನ ಸರಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದ ಪ್ರತೀ ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಸಾಕಾರಗೊಳಿಸುತ್ತಿದೆ. ಈ ಶುದ್ಧ ನೀರಿನ ಘಟಕಗಳಾದ ಮೇಲೆ ಜನರ ಆರೋಗ್ಯದಲ್ಲಿ ಬದಲಾವಣೆ ಕಾಣುತ್ತಿದ್ದು ಹಳ್ಳಿಗಳಲ್ಲಿ ವಾಸಿಸುವ ಸಾಮಾನ್ಯ ಜನರಿಗೆ ಈ ಶುದ್ಧ ಕುಡಿಯುವ ನೀರಿನ ಘಟಕಗಳು ವರದಾನವಾಗಿವೆ.

  ಬಿಸಿಲಿನ ಪ್ರಖರತೆಗೆ ಹೈರಾಣಾದ ಜನತೆ: ಅದರಂತೆ ಈ ಸಾಲಿನಲ್ಲಿ ಅಂತೂ ಶಿವರಾತ್ರಿಗೂ ಮೊದಲೇ ಸೂರ್ಯನ ಬಿಸಿಲು ಅತೀ ಆಗುತ್ತಿರುವುದರಿಂದ ಅತೀಯಾದ ಬಾಯಾರಿಕೆ ಆಗುವುದು ಸಹಜ. ಪ್ರತೀ ವ್ಯಕ್ತಿಗನುಗುಣವಾಗಿ ಅವಶ್ಯಕವಾದ ಶುದ್ಧ ನೀರೂ ಸಹ ಸಿಗುತ್ತಿಲ್ಲ. ಬರದ ಛಾಯೆ ಕಾಣುತ್ತಿರುವ ಈ ಸಮಯದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಹೋಗಿದ್ದು ಸಮರ್ಪಕ ಮಳೆಯಾಗದ ಕಾರಣ ಎಲ್ಲ ನದಿ ಮೂಲಗಳೂ ಸಹ ಬತ್ತಿಹೋಗುತ್ತಿದ್ದು ನೀರಿನ ಬರದ ಜೊತೆಗೆ ಭೂಮಿಯೂ ಕೂಡ ಬೆಂಕಿಯಂತೆ ಕಾಯಲಾರಂಭಿಸಿದ್ದು ಯಾರೂ ಕೂಡ ಮನೆಯ ಹೊರಗೆ ಹೋಗತೀರದಂತಾಗಿದೆ. 

ಈ ಹಿಂದೆ ಪಟ್ಟಣ ಪಂಚಾಯತಿ ಕಾಂಪ್ಲೆಸ್ಗಳಲ್ಲಿ ಎರಡು ಶುದ್ಧ ನೀರಿನ ಘಟಕಗಳು ಇದ್ದವು. ಅವುಗಳನ್ನು ಖಾಸಗಿಯಾಗಿ ಇಬ್ಬರು ಸ್ಥಳೀಯ ವ್ಯಕ್ತಿಗಳಿಗೆ ನೀಡಿದ್ದರು. ಆ ಎರಡು ಘಟಕಗಳನ್ನು ಬಂದಮಾಡಿದ್ದರಿಂದ ಇಲ್ಲಿಯ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುವಂತ ವಾತಾವರಣ ನಿಮರ್ಾಣವಾಗಿದೆ.

ಇದ್ದೂ ಇಲ್ಲದಂತಾಗಿರುವ ಶುದ್ಧ ನೀರಿನ ಘಟಕಗಳು: ನಮ್ಮ ಶಿರಹಟ್ಟಿ ನಗರದ ಜನತೆಗೆ ಅನುಗುಣದಂತೆ ಪಟ್ಟಣದಲ್ಲಿ ಕನಿಷ್ಠ 2 ಶುದ್ಧ ನೀರಿನ ಘಟಕಗಳ ಅವಶ್ಯಕತೆಯಿದ್ದು. ಪಟ್ಟಣದ ಹೃದಯ ಭಾಗದಲ್ಲಿ ಯಾವುದೇ ಶುದ್ಧ ನೀರಿನ ಘಟಕವಿಲ್ಲದ ಕಾರಣ ಶಿರಹಟ್ಟಿ ಪಟ್ಟಣ ಪಂಚಾಯತದಿಂದ ಜಗದ್ಗುರು ಫಕ್ಕೀರೇಶ್ವರ ಮಠದ ಪಕ್ಕದಲ್ಲಿ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಿ ಸುಮಾರು ದಿನಗಳು ಕಳೆದರೂ ಇನ್ನು ಪ್ರಾರಂಭದ ಭಾಗ್ಯ ಒದಗಿ ಬಂದಿಲ್ಲ. ಅದನ್ನು ಬಿಟ್ಟರೆ ಜನತೆ ಹರಿಪೂರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶುದ್ಧ ನೀರಿನ ಘಟಕಕ್ಕೆ ಹೋಗಿ ಇಲ್ಲವೇ ಪಕ್ಕದ ಸೊರಟೂರು ಗ್ರಾಮಕ್ಕೆ ಹೋಗಿ ತಾಸುಗಟ್ಟಲೇ ಸರದಿಯಲ್ಲಿ ನಿಂತುಕೊಂಡು ಶುದ್ಧ ನೀರು ತರುವ ಪರಿಸ್ಥಿತಿ ಒದಗಿದೆ.

ಹೆಸ್ಕಾಂ ಕಣ್ಣಾಮುಚ್ಚಾಲೆ:  ಜೊತೆಗಂತೂ ಹೆಸ್ಕಾಂನ ನಿರ್ಲಕ್ಷವೋ ತಾಂತ್ರಿಕ ತೊಂದರೆಯೋ, ಬರಗಾಲದ ಮುನ್ಸೂಚನೆಯೋ ಗೊತ್ತಿಲ್ಲ ಒಂದು ದಿನಕ್ಕೆ ಹಲವಾರು ಬಾರಿ ವಿದ್ಯುತ್ ವ್ಯತ್ಯಯವಾಗುತ್ತಿದೆ. ಹಗಲು ರಾತ್ರಿ ಕರೆಂಟ್ ಇಲ್ಲಾಂದ್ರೆ ಜೀವಾನೇ ಹೋದಂಗೆ ಆಗುವ ಈ ಸಮಯದಲ್ಲಿ ಎಲ್ಲರಿಗೂ ಕರೆಂಟ ಬೇಕೇ ಬೇಕು. ಈ ಕರೆಂಟು ಹಗಲೆಲ್ಲಾ ಕೈಕೊಡುವುದರಿಂದ ಜನಸಾಮಾನ್ಯರಿಗಲ್ಲದೇ ಈ ಶುದ್ಧ ನೀರಿನ ಘಟಕಗಳಿಗೂ ಸಹ ವಿದ್ಯುತ್ನ ಸರಬರಾಜು ಇಲ್ಲದೇ ಸಾಕಷ್ಟು ನೀರಿನ ಸಂಗ್ರಹವಾಗದ ಕಾರಣ ಜನಸಾಮಾನ್ಯರು ಈ ಶುದ್ಧ ಕುಡಿಯುವ ನೀರು ಸಿಗದೇ ಬೇರೆ ಯಾವುದೋ ನಲ್ಲಿಯ ನೀರನ್ನೋ ಇಲ್ಲವೇ ಫಕ್ಕೀರೇಶ್ವರ ಮಠದ ಬಾಯಿಯ ನೀರನ್ನೋ ತಂದು ಕುಡಿಯುವ ವ್ಯವಸ್ಥೆಯನ್ನು ಮಾಡಿಕೊಳ್ಳುವ ಪರಿಸ್ಥಿತಿಯಂತೂ ಸವರ್ೇ ಸಾಮಾನ್ಯವಾಗಿದೆ. ಈ ರೀತಿ ಪದೇ ಪದೇ ಶುದ್ಧ ಕುಡಿಯುವ ನೀರು ಹಾಗೂ ಬೇರೆ ನೀರನ್ನು ಕುಡಿದು ಜನ ಸಾಮಾನ್ಯರ ಆರೋಗ್ಯ ಕೆಡದಿದ್ದರೆ ಸಾಕು ಎನ್ನುತ್ತಾರೆ ಈ ಪಟ್ಟಣದ ಜನತೆ.