ಲೋಕದರ್ಶನ ವರದಿ
ಶಿರಹಟ್ಟಿ 21: ಶ್ರೀಲಂಕಾದ ಕೊಲೊಂಬೋದಲ್ಲಿ ವಿಷೇಶಚೇತನರಿಗಾಗಿ ಏರ್ಪಡಿಸಿದ 3ನೇ ಏಷ್ಯನ್ ಟ್ರ್ಯಾಕ್ ಅಂಡ್ ಟ್ರಂಪ್ ಫೆಡರೇಶನ್ ಗೇಮ್ಸ್ 2019ರ ಕಬಡ್ಡಿ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಗದಗ ಜಿಲ್ಲೆ ರೋಣ ತಾಲೂಕು ಕೊತಬಾಳ ಗ್ರಾಮದ ಅಂಗವಿಕಲ ಕ್ರೀಡಾಪಟುಗಳಾದ ರುದ್ರಗೌಡ ತಮ್ಮನಗೌಡ್ರ ಹಾಗೂ ಮೆಣಸಿಗಿ ಗ್ರಾಮದ ಶ್ರೀಕಾಂತ ಮರಿಯಪ್ಪಗೌಡ್ರ ತಂಡದಲ್ಲಿ ಭಾಗವಹಿಸಿ ಭಾರತದ ತಂಡದ ಗೆಲುವಿಗೆ ಕಾರಣರಾಗಿ ಜಿಲ್ಲೆಗೆ ಕೀತರ್ಿ ತಂದಿದ್ದಾರೆ.
ದಿ. 14ರಿಂದ 17ರ ವರೆಗೆ ಕೊಲಂಬೋದಲ್ಲಿ ನಡೆದ ಭಾರತ ಕಬಡ್ಡಿ ತಂಡವು ಲೀಗ್ ಹಂತದ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 25-13 ರ ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿ ಕೊನೆಯದಾಗಿ ಶ್ರೀಲಂಕಾ ತಂಡವನ್ನು ಎದುರಿಸಿ 28-10 ಅಂತರದಲ್ಲಿ ಹೀನಾಯವಾಗಿ ಸೋಲಿಸಿ ಭಾರತದ ಪರವಾಗಿ ವಿಜಯ ಪತಾಕೆ ಹಾರಿಸಿ ಗದಗ ಜಿಲ್ಲೆಗೆ ಪದಕಗಳನ್ನು ತಂದಿದ್ದಾರೆ.
ಭಾರತದ ಪರವಾಗಿ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಕನರ್ಾಟಕದ ಶೇಖರ ಕಾಖಂಡಕಿ, ರುದ್ರಗೌಡ ತಮ್ಮನಗೌಡ್ರ, ಶ್ರೀಕಾಂತ ಮರಿಯಪ್ಪಗೌಡ್ರ, ಪರಮಾನಂದ ತಳವಾಡ, ಸಚಿನ್ ತಾಂಡಲೇಶ್, ಚಿದಾನಂದ ದುರದುಂಡಿ, ಪ್ರವೀಣ ಶೆಟ್ಟಿ, ಟಿ. ಕುಪ್ಪಣ್ಣ, ಬಿ. ರವಿಶಂಕರ್, ಸುರೇಶ ಚನ್ನದಾಸರ, ಗುರುರಾಜ ಅಡವಿಸಿದ್ದೇಶ್ವರ ಭಾಗವಹಿಸಿ ಕನರ್ಾಟಕ್ಕೆ ಕೀತರ್ಿ ತಂದಿದ್ದಾರೆ.
ಈ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟದಲ್ಲಿ ಭಾರತದಿಂದ ಪ್ರತಿನಿಧಿಸಿ ವಿಜಯ ಪತಾಕೆ ಹಾರಿಸಿದ ಕನರ್ಾಟಕ ತಂಡದ ಎಲ್ಲ ವಿಕಲಚೇತನರಿಗೆ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶಿರಹಟ್ಟಿಯ ಗೌರಾವಾಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ, ಅಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣವರ ಹಾಗೂ ಕಾರ್ಯದಶರ್ಿ ಶಶಿಧರ ಶಿರಸಂಗಿ, ಪ್ರಕಾಶ ಹೊನ್ನವಾಡ, ವೆಂಕಟೇಶ ಚೌಡರಡ್ಡಿ, ಬಸವರಾಜ ಅಬ್ಬೀಗೇರಿ ಈ ಕ್ರೀಡಾಪಟುಗಳು ಇನ್ನೂ ಹೆಚ್ಚಿನ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜಯ ಪತಾಕೆ ಹಾರಿಸುವುದಲ್ಲದೇ ಅಂಗವಿಕಲರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಯಾವ ರೀತಿಯೂ ಕಡಿಮೆ ಇಲ್ಲ, ನಾವು ಎಲ್ಲದಕ್ಕೂ ಸಿದ್ಧ ಎಂದು ತೋರಿಸುವಂತೆ ಉತ್ಸಾಹ ತುಂಬಿ ಹಾರೈಸಿದ್ದಾರೆ.