ಲೋಕದರ್ಶನ ವರದಿ
ಶಿರಹಟ್ಟಿ 18: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಯುವ ರೈತರು ಸಾವಯುವ ಕೃಷಿಯತ್ತ ಆಸಕ್ತಿ ತೋರಿದ್ದರಿಂದ ಸಗಣಿ ಗೊಬ್ಬರ ಮತ್ತು ಕುರಿ ಹಿಕ್ಕೆ ಗೊಬ್ಬರಕ್ಕೆ ಭಾರಿ ಬೇಡಿಕೆ ಬಂದಿದೆ ಮತ್ತು ಈ ಕುರಿ ಹಿಕ್ಕೆ ಗೊಬ್ಬರವನ್ನು ಶಿವಮೂಗ್ಗ, ಚಿಕ್ಕಮಂಗಳೂರು, ಉಡುಪಿ, ಕರಾವಳಿ ಹಾಗೂ ಮಲೇನಾಡು ಪ್ರದೇಶಗಳಲ್ಲಿ, ಬೆಳೆಯುವ ಅಡಿಕೆ ಹಾಗೂ ಕಾಫಿ ತೋಟಗಳಿಗೆ ಹಾಕಲು ಅಲ್ಲಿಯ ರೈತರು ಇಲ್ಲಿಗೆ ಬಂದು ಲೋಡುಗಟ್ಟಲೆ ಗೊಬ್ಬರವನ್ನು ಖರೀದಿಸುತ್ತಿರುವುದರಿಂದ ಕುರಿ ಹಿಕ್ಕೆ ಗೊಬ್ಬರಕ್ಕೆ ಮತ್ತಷ್ಟು ಡಿಮ್ಯಾಂಡ್ ಬಂದಿದೆ.
ತಾಲೂಕಿನಲ್ಲಿ ಬಹಳಷ್ಟು ರೈತರು ಸಾವಯುವ ಕೃಷಿಯಿಂದಲ್ಲೇ ಬದುಕು ಕಟ್ಟಿಕೊಂಡಿದ್ದಾರೆ ಮತ್ತು ಸಾವಯುವ ಕೃಷಿಗೆ ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡದೆ ಕುರಿ, ಮೇಕೆ ಹಾಗೂ ಜಾನುವಾರಗಳ ಸಗಣೆಯ ಗೊಬ್ಬರವನ್ನು ಹಾಕಿ ಉತ್ತಮ ಇಳುವರಿ ಬರುವಂತೆ ನೋಡಿಕೊಳ್ಳುವುದರ ಮೂಲಕ ಬಂಪರ್ ಫಸಲನ್ನು ಪಡೆಯುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಮಳೆ ಬಾರದೆ ಜಾನುವಾರುಗಳಿಗೆ ಮೇವು ನೀರು ಇಲ್ಲದೆ, ಬಹಳಷ್ಟು ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡಿದ್ದರಿಂದ ಸಗಣೆ ಗೊಬ್ಬರ ಮಾಯವಾಗುತ್ತಿದೆ ಮತ್ತು ಕುರಿ, ಮೇಕೆ ಗೊಬ್ಬರವನ್ನು ಶಿವಮೂಗ್ಗ, ಕರಾವಳಿ ಹಾಗೂ ಮಲೇನಾಡಿನ ಭಾಗದ ರೈತರು ತಮ್ಮ ಅಡಿಕೆ ತೋಟಕ್ಕೆ ಹಾಕಲು ಲೋಡಗಟ್ಟಲೇ ಗೊಬ್ಬರವನ್ನು ಖರೀದಿಸುತ್ತಿದ್ದಾರೆ. ಇದರಿಂದ ಸ್ಥಳೀಯ ರೈತರಿಗೆ ಕುರಿ ಗೊಬ್ಬರ ಆಗಸದಂತಾಗಿದೆ.
ಕುರಿ ಸಾಕಾಣಿಕೆ: ಲಂಬಾಣಿ, ಮುಸ್ಲಿಂ, ಭೋವಿ ಹಾಗೂ ಕುರುಬ ಸಮುದಾಯದವರು ಕುರಿ, ಮೇಕೆಗಳನ್ನು ಸಾಕುವುದರಲ್ಲಿ ಹೆಚ್ಚು ನಿಪುಣರಾಗಿದ್ದು, ಅದರಲ್ಲೇ ಬದುಕು ಕಟ್ಟಿಕೊಂಡಿದ್ದಾರೆ ಅಲ್ಲದೆ ಪಶುಸಂಗೋಪನಾ ಇಲಾಖೆಯ ಪ್ರಕಾರ 2012ರಲ್ಲಿ ಕುರಿಗಳ ಸಂಖ್ಯೆ 60232 ಇದ್ದವು. ಹಾಗೂ ಮೇಕೆಗಳು 17869 ಇದ್ದವು. ಸದ್ಯ 2019ರಲ್ಲಿ ಕುರಿ ಹಾಗೂ ಮೇಕೆಗಳ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ ಇವೆ. ಅದರಲ್ಲಿ ತಾಲೂಕಿನ ಕಡಕೋಳ, ಹೊಸಳ್ಳಿ, ಮಾಚೇನಹಳ್ಳಿ, ಛಬ್ಬಿ, ಬೆಳ್ಳಟ್ಟಿ ಹಾಗೂ ಶಿರಹಟ್ಟಿ ಪಟ್ಟಣದಲ್ಲಿ ಹೆಚ್ಚು ಕುರಿಗಾರರು ಇದ್ದು, ಈ ಭಾಗದಲ್ಲಿ ಕುರಿ ಹಿಕ್ಕೆ ಗೊಬ್ಬರದ ಮಾರಾಟ ಜೋರಾಗಿ ನಡೆಯುತ್ತಿದೆ.
ಜಮೀನಿನಲ್ಲಿ ಕುರಿ ನಿಲ್ಲಿಸುವ ಪದ್ಧತಿ: ಮುಂಗಾರು ಮತ್ತು ಹಿಂಗಾರು ಬೆಳೆ ಬಂದ ತಕ್ಷಣ ರೈತರು ಕುರಿಗಾಹಿಗಳನ್ನು ಕರೆದು. ನಮ್ಮ ಹೊಲದಲ್ಲಿ ನಿಮ್ಮ ಕುರಿಗಳನ್ನು ನಿಲ್ಲಿಸು ಎಂದು ಹೇಳುತ್ತಿದ್ದರು. ಇದರಿಂದ ಜಮೀನು ಸಂಪೂರ್ಣ ಫಲವತ್ತತೆಯಿಂದ ಕುಡಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಬಂದ ಮೇಲೆ ಕುರಿಗಳನ್ನು ನಿಲ್ಲಿಸಲು ರೈತರು ಹಿಂದೇಟು ಹಾಕಿದ್ದರು. ಸದ್ಯ ಸಾವಯುವ ಕೃಷಿಯತ್ತ ಮುಖ ಮಾಡುತ್ತಿರುವ ರೈತರು ಕುರಿ ಗೊಬ್ಬರಕ್ಕೆ ಬೇಡಿಕೆ ಬಂದಿದೆ.
ಗೊಬ್ಬರ ತಯಾರಿಕೆ: ಕುರಿಗಾಹಿಗಳು ತಮ್ಮ ನೂರಾರು ಕುರಿಗಳನ್ನು ಒಟ್ಟಿಗೆ ಸಾಕಲು ದೊಡ್ಡಿಗಳನ್ನು ನಿಮರ್ಿಸುತ್ತಾರೆ. ಹಗಲೇಲ್ಲಾ ಮೇದು ಬಂದ ಕುರಿಗಳು ರಾತ್ರಿ ದೊಡ್ಡಿಗಳಲ್ಲಿ ಬಿಡಾರ ಹೂಡುತ್ತವೆ, ಇಲ್ಲಿ ಸಂಗ್ರಹವಾದ ಹಿಕ್ಕೆಗಳನ್ನು ಆಯ್ದು ಕುರಿಗಾಹಿಗಳು ಒಂದು ಕಡೆ ಗುಡ್ಡೆ ಹಾಕುತ್ತಾರೆ. ಹೀಗೆ ತಯಾರವಾದ ಗೊಬ್ಬರದಲ್ಲಿ ಪೋಷಕಾಂಶ ಹೆಚ್ಚು ಸಮೃದ್ಧವಾಗಿರುತ್ತದೆ. ಮತ್ತು ಇದನ್ನು ಅಡಿಕೆ ಹಾಗೂ ಕಾಫಿ ತೋಟಗಳಿಗೆ ಹಾಕಿದರೆ, ಸಮೃದ್ಧವಾದ ಬೆಳೆ ಬರುತ್ತದೆ. ಮತ್ತು ಈ ಗೊಬ್ಬರದಲ್ಲಿ ರೋಗನಿರೋಧಕ ಶಕ್ತಿ ಇರುವುದರಿಂದ ಅಡಿಕೆ ಮರಗಳು ಚನ್ನಾಗಿ ಬೆಳೆದು ಉತ್ತಮ ಇಳುವರಿ ಕೊಡುತ್ತವೆ. ಹೀಗಾಗಿ ಕರಾವಳಿ ಹಾಗೂ ಮಲೇನಾಡಿನ ರೈತರು ಇಲ್ಲಿಗೆ ಬಂದು ಹೆಚ್ಚು ಕುರಿ ಗೊಬ್ಬರವನ್ನು ಖರೀದಿಸುತ್ತಾರೆ.