ಶಿರಹಟ್ಟಿ: ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಬಿಜೆಪಿ ತಾಲೂಕ ಅಧ್ಯಕ್ಷ ಅಣ್ಣಿಗೇರಿಯವರ ಹೇಳಿಕೆ

ಲೋಕದರ್ಶನ ವರದಿ

ಶಿರಹಟ್ಟಿ 12: ಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಮತ್ತೇ ಮೋದಿಜಿ ಪ್ರಧಾನ ಮಂತ್ರಿಯಾಗಲು ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದು ಶಿರಹಟ್ಟಿ ಬಿಜೆಪಿ ತಾಲೂಕ ಅಧ್ಯಕ್ಷ ವಿರೂಪಾಕ್ಷ ಅಣ್ಣಿಗೇರಿ ಹೇಳಿದರು.

ಅವರು ತಾಲೂಕಿನ ಮಾಗಡಿ ಗ್ರಾಮದಲ್ಲಿ ನಡೆದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟಗೊಂಡಿದ್ದು ನಾವೆಲ್ಲರೂ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಹಗಲಿರುಳೆನ್ನದೆ ಶ್ರಮಿಸಿದಾಗ ಮಾತ್ರ ಗೆಲುವು ಖಚಿತ. ಮತದಾರರ ಮನೆ-ಮನೆಗೂ ತೆರಳಿ ಮೋದಿಜಿಯ ಬಡವರ ಪರ ಯೋಜನೆಗಳನ್ನು ತಿಳಿ ಹೇಳಬೇಕು ಎಂದು ಕರೆ ನೀಡಿದರು.

ನಂತರ ಮಾತನಾಡಿದ ಶಾಸಕ ರಾಮಣ್ಣ ಲಮಾಣಿ ಮೋದಿಜಿ ಅವರು ಬಡವರಿಗಾಗಿ ನಿರ್ಗತಿಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅವರನ್ನು ಆಥರ್ಿಕವಾಗಿ ಸಬಲರನ್ನಾಗಿ ಜೀವನ ನಡೆಸುವಂತೆ ಮಾಡಿದೆ. ಈ ಎಲ್ಲ ಯೋಜನೆಗಳನ್ನು ಅಸಂಖ್ಯಾತ ಕಾರ್ಯಕರ್ತರ ಸಹಾಯದಿಂದ ಪ್ರತಿಯೊಬ್ಬ ಮತದಾರರು ತಿಳಿಯುವಂತೆ ಮಾಡುವ ಶಕ್ತಿ ಕೇಂದ್ರದ ಪ್ರಮುಖರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಮೋದಿಜಿ ಮತ್ತೆ ಪ್ರಧಾನಿಯಾಗಲು ಅವರ ಕೈ ಬಲಪಡಿಸಲು ನಾವೆಲ್ಲರೂ ನಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು. ನಿಂಬಣ್ಣ ಮಡಿವಾಳರ, ಹಾಲಪ್ಪ ಸೂರಣಗಿ, ಪರಮೇಶಗೌಡ ಪಾಟೀಲ್, ಮುತ್ತಣ್ಣ ತೋಟಗಲ್, ಅಜ್ಜಪ್ಪ ಹೂಗಾರ, ಶಣ್ಮುಕಪ್ಪ ಗೋಡಿ, ಪ್ರಕಾಶ ಬೆಂತೂರ ಮುಂತಾದವರು ಉಪಸ್ಥಿತರಿದ್ದರು.