ಲೋಕದರ್ಶನ ವರದಿ
ಮುನವಳ್ಳಿ: ನ. 16 ರಂದು ಸಾಯಂಕಾಲ ಸಮೀಪದ ಶಿಂದೋಗಿ ಗ್ರಾಮದ ಬಸವನಗರದ ನಿವಾಸಿಗಳು ಗ್ರಾಮ ಪಂಚಾಯತಿಗೆ ನೂತನವಾಗಿ ಅಧ್ಯಕ್ಷ,ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಸತ್ಯಪ್ಪ ಅಡವಿ ಹಾಗೂ ಶ್ರೀಮತಿ ಸುವಣರ್ಾ ನಡನಳ್ಳಿ ಇವರನ್ನು ಸನ್ಮಾನಿಸಿ ಗೌರವಿಸಿದರು. ಬಸವನಗರದ ನಿವಾಸಿ ಶಿವಾನಂದ ಮೇಟಿ ಮಾತನಾಡಿ ಇಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದೆ ಅದನ್ನು ಕೂಡಲೇ ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಬಡಾವಣೆಯಲ್ಲಿ ಬೀದಿದೀಪ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಇತರೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಮತ್ತು ಗಣಪತಿ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ. ಚಿದಾನಂದ ಕಮತಿ, ಮಂಜುನಾಥ ಭಂಡಾರಿ, ದ್ಯಾಮನಗೌಡ ಬಕಾಡೆ ವ್ಹಿ. ಎಫ್. ಚಿಕ್ಕಮಠ. ಮನೋಹರ ನಾಯ್ಕ ಸೇರಿದಂತೆ ಇತರರು ಇದ್ದರು