ಶಿಖರ್‌ ಧವನ್‌ ವಿಶ್ವಕಪ್‌ ಟೂರ್ನಿಯಿಂದ ಔಟ್

ಲಂಡನ್‌,11: ಹೆಬ್ಬೆರಳಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಐಸಿಸಿ ವಿಶ್ವಕಪ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇದರೊಂದಿಗೆ ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತಕ್ಕೆ ತೀವ್ರ ಆಘಾತ ಉಂಟಾಗಿ

ಭಾನುವಾರ ದಿ ಓವಲ್‌ ಅಂಗಳದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಶಿಖರ್‌ ಧವನ್‌ 109 ಎಸೆತಗಳಲ್ಲಿ 117 ರನ್‌ ಸಿಡಿಸಿದ್ದರು. ಆ ಮೂಲಕ ಅವರು ಬ್ಯಾಟಿಂಗ್‌ ಲಯಕ್ಕೆ ಮರಳಿದ್ದರು. ಆದರೆ, ಅದೇ ಪಂದ್ಯದಲ್ಲಿ ಆಸೀಸ್‌ ವೇಗಿ ನಥಾನ್‌ ಕೌಲ್ಟರ್‌ ನೈಲ್‌ ಅವರ ಎಸೆತದಲ್ಲಿ ಚೆಂಡು ಶಿಖರ್‌ ಧವನ್‌ ಅವರ ಎಡಗೈ ಹೆಬ್ಬೆರಳಿಗೆ ತಾಗಿತ್ತು. ಇದಾದ ಬಳಿಕ ದ್ವಿತೀಯ ಇನಿಂಗ್ಸ್‌ನಲ್ಲಿ ಶಿಖರ್‌ ಧವನ್‌ ಕ್ಷೇತ್ರ ರಕ್ಷಣೆಗೆ ಆಗಮಿಸಿರಲಿಲ್ಲ.

ನಂತರ ಅವರ ಬೆರಳಿಗೆ ಸ್ಕ್ಯಾನ್‌ ಮಾಡಲಾಗಿದ್ದು, ಇದರ ವರದಿ ಪರಿಶೀಲಿಸಿದ ವೈದ್ಯರು ಎಡಗೈ ಬ್ಯಾಟ್ಸ್‌ಮನ್‌ಗೆ ಮುಂದಿನ ಮೂರು ವಾರಗಳಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಸೂಚಿಸಿದ್ದರು. ಹಾಗಾಗಿ, ಧವನ್‌ ಮುಂದಿನ ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.

ಭಾರತದ ಮುಂದಿನ ಪಂದ್ಯ ಜೂನ್ 13ರಂದು ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆಯಲಿದೆ. ಈ ಪಂದ್ಯದ ಅಭ್ಯಾಸಕ್ಕಾಗಿ ಧವನ್ ಮೈದಾನಕ್ಕೆ  ಇಳಿದಿರಲಿಲ್ಲ. ಮಂಗಳವಾರ ವರದಿ ಪ್ರಕಾರ ಧವನ್‌ ಮುಂದಿನ ಮೂರು ವಾರಗಳು ವಿಶ್ರಾಂತಿ ಪಡೆಯಲಿದ್ದಾರೆ. ಮುಂದಿನ ಕೆಲ ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ.