ಶಿಗ್ಗಾವಿ:ಸಡಗರ ಕಾರ ಹುಣ್ಣಿಮೆ ಆಚರಣೆ

ಲೋಕದರ್ಶನ ವರದಿ

ಶಿಗ್ಗಾವಿ ಃ ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚುತ್ತಿದ್ದಂತೆಯೇ ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಸಂಖ್ಯೆ  ಕಡಿಮೆಯಾದ ಕಾರಣ ಕಾರ ಹುಣ್ಣಿಮೆ ತನ್ನ ಎಂದಿನ ಸಂಭ್ರಮವನ್ನು ಕಳೆದುಕೊಂಡಿದೆ, ಇದರ ನಡವೆಯೂ ರೈತರ ಹಬ್ಬವೆಂದೇ ಖ್ಯಾತಿ ಪಡೆದಿರುವ ಕಾರ ಹುಣ್ಣಿಮೆಯನ್ನು ರೈತರು ಸಂಭ್ರಮದಿಂದ ಆಚರಿಸುತ್ತಿರುವದು ಸಹ ಅಷ್ಟೆ ಸತ್ಯವಾಗಿದೆ. ಮತ್ತು ಕಾರಹುಣ್ಣಿಮೆ ಪ್ರಯುಕ್ತ ಕೆಲ ರೈತರು ಕಾರಹುಣ್ಣಿಮೆ ಹಿಂದಿನ ದಿನ ಸಂಪ್ರದಾಯದಂತೆ ಬಸವಣ್ಣನನ್ನು ನೆಲದ ಮೇಲೆ ಕರಿ ಗಂಬಳಿ ಹಾಸಿ ಅದರ ಮೇಲೆ ತಮ್ಮ ಎತ್ತುಗಳನ್ನು ನಿಂದರಿಸಿ ಪೂಜೆ ಪುನಸ್ಕಾರ ಮಾಡಿ ಬಸವಣ್ಣನಿಗೆ ಭಕ್ತಿಯಿಂದ ನಮಿಸುತ್ತಾರೆ.

ಪ್ರತಿ ವರ್ಷ ಕಾರಹುಣ್ಣಿಮೆ ಪ್ರಯುಕ್ತ ಮನೆ ಇಲ್ಲವೇ ಹೊಲಗಳಲ್ಲಿ ಕಟ್ಟಲಾದ ದನಕರುಗಳನ್ನು ಸ್ವಚ್ಚವಾಗಿ ಮೈತೊಳೆದು ಬಣ್ಣ ಬಳೆಯುತ್ತಾರೆ ಕೊಡುಗಳಿಗೆ ಬಣ್ಣ ಕೊಂಡೆ ಕಟ್ಟುವ ರೂಡಿ ಕರಿದಾರ, ಗೆಜ್ಜೆ, ಹರಿಗೆಜ್ಜೆ, ಸೇರಿ ಇನ್ನಿತರ ವಸ್ತುಗಳಿಂದ ಸಿಂಗರಿಸಿ ಪೂಜೆ ನೈವೆದ್ಯ ಸಲ್ಲಿಸಿದ ರೈತರು ಬಸವಣ್ಣನನ್ನು ಭಕ್ತಿಯಿಂದ ಆರಾದಿಸುತ್ತಾರೆ.

   ಪಟ್ಟಣದಲ್ಲಿ ಸೇರಿದಂತೆ ತಾಲೂಕಿನ ಮುಗಳಿ ಗ್ರಾಮ ಹಾಗೂ ವಿವಿದ ಗ್ರಾಮಗಳಲ್ಲಿ ಕಾರಹುಣ್ಣಿಮೆ ಹಬ್ಬಕ್ಕಾಗಿ ರೈತರು ಎತ್ತುಗಳನ್ನು ಶೃಂಗಾರ ಮಾಡುವ ಸಲುವಾಗಿ ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸಿ ಮುತಾಟಿ, ಮುಗುದಾಣ, ಬಾರಕೋಲ್, ಹಳದಿ, ಕೆಂಪು. ಹಸಿರು. 

ವಾನರ್ಿಷ್ ಬಣ್ಣ ಸೇರಿದಂತೆ ಸರಗೆಜ್ಜೆ ಗಂಟೆ ಸೇರಿದಂತೆ ವಿವಿದ ರೀತಿಯ ಅಲಂಕಾರಿಕ ಸಾಮಗ್ರಿಗಳನ್ನು ರೈತರು ಜಾನುವಾರುಗಳಿಗೆ ಧರಿಸಿ ಗೊಬ್ಬರಿ, ಚಕ್ಕಲಿಗಳನ್ನು ಕಟ್ಟಿ ನಿಗದಿತ ಪ್ರದೇಶದಲ್ಲಿ ಸೇರಿರುವ ಜನರ ಮದ್ಯ ಓಡಿಸುತ್ತಾರೆ ಗೊಬ್ಬರಿಗಳನ್ನು ಹರಿಯಲೆಂದೆ ಯುವಕರ ತಂಡಗಳು ಸಜ್ಜಾಗಿ ನಿಂತಿರುತ್ತವೆ ರೈತರು ಓಡಿಸಿದ ಎತ್ತುಗಳು ಯಾರ ಕೈಗೆ ಸಿಗದೆ ಓಡಿದರೆ ಆ ಎತ್ತುಗಳ ಮಾಲೀಕರಿಗೆ ಎಲ್ಲಿಲ್ಲ ಖುಷಿಯನ್ನು ವ್ಯಕ್ತಪಡಿಸುತ್ತಾರೆ, ಯುವಕರ ತಂಡಗಳು ಓಡುತ್ತಿರುವ ಎತ್ತುಗಳನ್ನು ಹಿಡಿದು ಗೊಬ್ಬರಿ ಹಾಗೂ ಚಕ್ಕುಲಿಗಳನ್ನು ಹರಿದರೆ ಖುಷಿಯಿಂದ ಕೆಕೆ ಹಾಕುತ್ತಾ ಹರಿದ ಗೊಬ್ಬರಿ ಮತ್ತು ಚಕ್ಕುಲಿಗಳನ್ನು ತಿನ್ನುತ್ತಾ ಖುಷಿ ಪಡುತ್ತಾರೆ.

ಹೀಗೆ ವರ್ಷಪೂತರ್ಿ ಹೊಲಗಳಲ್ಲಿ ದುಡಿಯುವ ರೈತ ರೈತನ ಹಬ್ಬವೆಂದು ಖ್ಯಾತಿ ಪಡೆದಿರುವ ಕಾರ ಹುಣ್ಣಿಮೆಯಂದು ತಾನು ಸಾಕಿದ ಎತ್ತುಗಳನ್ನು ಓಡಿಸಿ ಖುಷಿ ಪಡುತ್ತಾನೆ ಆದರೆ ಇಂದಿನ ದಿನಮಾನಗಳಲ್ಲಿ ಯಂತ್ರೋಪಕರಣಗಳ ಹಾವಳಿಯಿಂದ ರೈತರು ಸಹ ಜಾನುವಾರುಗಳ ಬಳಕೆ ಕಡಿಮೆ ಮಾಡಿದ್ದು ಒಂದೆಡೆಯಾದರೆ ಜಾನುವಾರುಗಳನ್ನು ಬಳಸುವವರ ಸಂಖ್ಯೆಯೂ ಸಹ ಕಡಿಮೆಗುತ್ತಿದೆ, ಸಂಪ್ರದಾಯವಾಗಿ ಬಂದ ಕಾರ ಹುಣ್ಣಿಮೆ ಸಂಭ್ರಮ ಹಾಗೂ ಆಚಣೆಯೂ ಕ್ಷೀಣಿಸುತ್ತಾ ಹೊರಟಿದ್ದು ಇಂತಹ ಆಚರಣೆಗಳನ್ನು ರೈತ ಸಮೂದಾಯ ಅದ್ಧೂರಿಯಾಗಿ ಆಚರಣೆ ಮಾಡಬೇಕಿದೆ