ಲೋಕದರ್ಶನ ವರದಿ
ಶಿಗ್ಗಾವಿ 31: ತಾಲೂಕಿನ ಸದಾಶಿವ ಪೇಟೆಯಲ್ಲಿ ಶರಣ ಬಸವೇಶ್ವರರ 39ನೇ ವರ್ಷದ ಪುರಾಣ ಪ್ರವಚನ, ಸರ್ವ ಧರ್ಮ ಸಾಮೂಹಿಕ ವಿವಾಹ, ಜಾತ್ರೋತ್ಸವದ ಅಂಗವಾಗಿ ಬುಧವಾರ ಶರಣ ಬಸವೇಶ್ವರರ ಭಾವಚಿತ್ರದ ಮೆರವಣಿಗೆಗೆ ಮಠದ ಪೀಠಾದಿಪತಿಗಳಾದ ಶಿವದೇವ ಶರಣರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮೇರವಣಿಗೆ ಸಕಲ ವಾದ್ಯ ವೈಭವ, ಪೂರ್ಣ ಕುಂಬಹೊತ್ತ ಮಹಿಳೆಯರೊಂದಿಗೆ ಮಠದಿಂದ ಪ್ರಾರಂಭಗೊಂಡು ಸದಾಶಿವ ಪೇಟೆ, ನಾರಾಯಣಪುರ, ಮುನವಳ್ಳಿ ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ಸಾಗಿಬಂದಿತು. ಮೇರವಣಿಗೆಯನ್ನು ಭಕ್ತರು ಮನೆಯ ಅಂಗಳಕೆ ನೀರು ಚಿಮುಕಿಸಿ, ತಳಿರು ತೋರಣ ಕಟ್ಟಿ, ರಂಗೋಲಿಹಾಕಿ ಭವ್ಯವಾಗಿ ಬರಮಾಡಿಕೋಂಡು ಶರಣ ಬಸವೇಶ್ವರರ ಭಾವಚಿತ್ರಕ್ಕೆ ಹೂಮಾಲೆ ಹಣ್ಣು ಕಾಯಿ ಸಮಪರ್ಿಸಿ ತಮ್ಮ ಭಕ್ತಿ ನಮನ ಸಲ್ಲಿಸಿದರು. ಮೇರವಣಿಗೆ ಸಾಗಿಬಂದು ಪುನಃ ಶ್ರೀಮಠ ತಲುಪಿತು.
ತನ್ನಿಮಿತ್ಯ ಶ್ರೀಮಠದಲ್ಲಿ ಶರಣ ಬಸವೇಶ್ವರರಿಗೆ ಹಾಗು ಲಿಂ. ರೇವಣಸಿದ್ದೇಶ್ವರ ಶರಣರ ಗದ್ದುಗೆಗೆ ಮಹಾ ರುದ್ರಾಭಿಷೇಕ ಸಹಶ್ರ ಭಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ಅನ್ನ ಪ್ರಸಾದದ ಸೇವೆ ನಡೆಯಿತು. ಹೇಮರಾಜ ಶಾಸ್ತ್ರೀಗಳು, ರಮೇಶ ಕಲಿವಾಳ, ನಾಗರಾಜ ಬಡಿಗೇರ, ಪುಟ್ಟಪ್ಪ ಬಾಗಣ್ಣವರ, ಫಕ್ಕೀರಪ್ಪ ವಡವಿ, ಗುರುಲಿಂಗಯ್ಯ ನಂದಿಮಠ, ವೀರಪ್ಪ ರವದಿ, ಸಂಗಪ್ಪ ವಡವಿ, ಬಸವಣ್ಣೆಪ್ಪ ಚಿಗರಿ, ರುದ್ರಪ್ಪ ಕಿವುಡನವರ, ಶೇಖಯ್ಯ ನಂದಿಮಠ, ಶಿವಶಂಕರಯ್ಯ ಮಹಾಂತಿನಮಠ, ಕುಮಾರಸ್ವಾಮಿ ಹೊಸಮಠ, ಸಹದೇವಪ್ಪ ಕಿವುಡನವರ, ನಿಂಗಪ್ಪ ಚಿಗರಿ, ಈರಣ್ಣ ಶೆಟ್ಟರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.