ರೆಡ್ ಕ್ರಾಸ್ ಸಂಸ್ಥೆ ಕಾರ್ಯ ಶ್ಲಾಘಿಸಿದ ಜಿಲ್ಲಾಧಿಕಾರಿ

ಬಾಗಲಕೋಟೆ೧೮: ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ನೋವಿಗೆ ಸ್ಪಂಧಿಸಿದ ರೆಡ್ಕ್ರಾಸ್ ಸಂಸ್ಥೆಯ ಕಾರ್ಯವನ್ನು ಜಿ.ಪಂ ಸಭಾಭವನದಲ್ಲಿ ಜರುಗಿದ ನೆರೆ ಪರಿಹಾರ ಕಾರ್ಯಾಚರಣೆಯಲ್ಲಿ ಸಂಘ ಸಂಸ್ಥೆಗಳ ಸಮನ್ವಯ ಸಾಧಿಸುವ ಕುರಿತ ಕಾರ್ಯಾಗಾರದಲ್ಲಿ ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಶ್ಲಾಘಿಸಿದರು.

ಪ್ರವಾಹ ಸಂಭವಿಸುತ್ತಿರುವ ಸಂದರ್ಭದಲ್ಲಿ ಪ್ರವಾಹ ಕಾರ್ಯಾಚರಣೆ ಹಾಗೂ ನೆರವು ನೀಡುವಲ್ಲಿ ಜಿಲ್ಲಾಡಳಿತದ ಜೊತೆ ಕೈಜೋಡಿಸಿದೆ. ಪ್ರವಾಹಕ್ಕೊಳಗಾದ ಸಂತ್ರಸ್ತರ ಕುಟುಂಬ ನಿರ್ವಹಣೆಗೆ ಬೇಕಾದ ಅಗತ್ಯ ವಸ್ತುಗಳನ್ನು, ಅಡಿಗೆ ಪಾತ್ರೆ, ಹಾಸಿಗೆ ಹೊದಿಕೆ, ಶಾಲಾ ಬ್ಯಾಗ್ ಸೇರಿದಂತೆ ಇತರೆ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಸಂತ್ರಸ್ತರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ರೆಡ್ಕ್ರಾಸ್ ಸಂಸ್ಥೆಯ ರಾಷ್ಟ್ರಯ ಶಾಖೆಯಿಂದ 52 ಲಕ್ಷದ ವೆಚ್ಚದ 200 ಟೆಂಟಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಇಲ್ಲಯವರೆಗೆ ಒಟ್ಟು 80 ಲಕ್ಷ ರೂ. ಪರಿಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಚೇರಮನ್ ಆನಂದ ಜಿಗಜಿನ್ನಿ ಅವರು ಮಾತನಾಡಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಪ್ರವಾಹ ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸಾಗಿದೆ.  ಪ್ರವಾಹ ಸಂದರ್ಭದಲ್ಲಿ ರೆಡ್ಕ್ರಾಸ್ ಸಂಸ್ಥೆಯಿಂದ 1 ಬೋಟ್ ಹಾಗೂ 6 ಜನ ಸ್ವಯಂ ಸೇವಕನ್ನು ನೀಡುವದರ ಜೊತೆಗೆ ಜೀವರಕ್ಷಕ ಜಾಕೆಟ್ಗಳನ್ನು ಜಮಖಂಡಿ ತಾಲೂಕಿಗೆ 40 ಹಾಗೂ ಬಾದಾಮಿ ತಾಲೂಕಿಗೆ 8 ನೀಡಲಾಗಿದೆ. 30 ಸ್ವಯಂ ಸೇವಕರು ಸಹ ಪ್ರವಾಹ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದೆ. ಇದರ ಜೊತೆಗೆ ಬೆಂಗಳೂರಿನ ಇನ್ಪೋಸಿಸ್, ಐಬಿಎಂ, ರೋಟರಿ, ಲಾಯನ್ಸ್ ಕ್ಲಬ್, ಪಿನಿಯಾ ಜಿಮ್ಕಾನ್ ಕ್ಲಬ್, ವಾಂಡರರ್ಸ್ ಕ್ಲಬ್, ತುಕೂರಿನ ರೆಡ್ಕ್ರಾಸ್ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಕಳುಹಿಸಲಾದ ಪರಿಹಾರ ಸಾಮಗ್ರಿಗಳನ್ನು ಅಚ್ಚುಕಟ್ಟಾಗಿ ಸ್ಥಳೀಯ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಪೊಲೀಸ್ರ ಸಹಾಯ ಪಡೆದು ಬಾದಾಮಿ, ಮುಧೋಳ ಮತ್ತು ಜಮಖಂಡಿ ತಾಲೂಕಿನ ಒಟ್ಟು 56 ಪ್ರವಾಹ ಪೀಡಿತ ಗ್ರಾಮಗಳಲ್ಲಿ ವಿತರಿಸಿರುವುದಾಗಿ ತಿಳಿಸಿದರು.

ಮಂಗಳೂರಿನ ಮನಿಪಾಲ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿ ಕಾಲೇಜಿನ 40 ವಿದ್ಯಾಥರ್ಿಗಳು ಪ್ರವಾಹ ಸಂದರ್ಭದಲ್ಲಿ ಬಾದಾಮಿ ತಾಲೂಕಿನ ಹೊಸೂರ ಗ್ರಾಮದ ಸಮೀಪ ಪ್ರವಾಹಕ್ಕೆ ಸಿಲುಕಿದ ಸಂದರ್ಭದಲ್ಲಿ ವಿದ್ಯಾಥರ್ಿಗಳನ್ನು ರಕ್ಷಿಸುವದರ ಜೊತೆಗೆ ಬೇರೊಂದು ವಾಹನದಲ್ಲಿ ಕಳುಹಿಸುವಲ್ಲಿ ರೆಡ್ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು ನೆರವಾಗಿದ್ದಾರೆ. ಐತಿಹಾಸಿಕ ಪಟ್ಟದಕಲ್ಲಿನಲ್ಲಿ ಪ್ರವಾಹ ಸಂಭವಿಸಿದಾಗ ಪರಿಹಾರ ಕೇಂದ್ರ ಸ್ಥಾಪಿಸುವ ಮುಂಚೆನೆ ಸೇವಾ ಕಾರ್ಯಕ್ಕೆ ರೆಡ್ಕ್ರಾಸ್ ಸಂಸ್ಥೆ ಮುಂದಾಗಿರುವುದನ್ನು ನಾವು ನೋಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಮುಂಬರುವ ದಿನಗಳಲ್ಲಿ ಪ್ರವಾಹದಿಂದ ಹಾನಿಗೊಳದಾಗ ಕೆಲವೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಯ್ದುಕೊಂಡು ಅವುಗಳನ್ನು ದುರಸಿಗೊಳಿಸುವ ನಿಟ್ಟಿನಲ್ಲಿ ದತ್ತು ಪಡೆದು ಪ್ರಕ್ರಿಯೆಯ ಬಗ್ಗೆ ರೆಡ್ಕ್ರಾಸ್ನ ರಾಜ್ಯ ಶಾಖೆಗೆ ಪತ್ರ ಬರೆದು ತಿಮರ್ಾನ ಕೈಗೊಳ್ಳಲಾಗುವುದೆಂದು ಆನಂದ ಜಿಗಜಿನ್ನಿ ತಿಳಿಸಿದರು.