ಪುರಸಭೆ, ಪ.ಪಂ.ಗಳಿಗೆ ಜಿಲ್ಲಾಧಿಕಾರಿಗಳ ಭೇಟಿ

ಗದಗ: ಭಾರತ ಚುನಾವಣಾ ಆಯೋಗದ ನಿದರ್ೇಶನದಂತೆ ಅಕ್ಟೋಬರ್ 15ರವರೆಗೆ ವಿಧಾನ ಸಭಾ ಕ್ಷೇತ್ರಗಳ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವನ್ನು ಗದಗ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜರುಗಿಸಲಾಗುತ್ತಿದೆ. ಜಿಲ್ಲೆಯ ನಗರ ಪ್ರದೇಶದ ಮತದಾರ ಪರಿಷ್ಕರಣೆಯ ಕಾರ್ಯ ತೀವ್ರಗೋಳಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದು ಮುಳಗುಂದ ಪಟ್ಟಣ ಪಂಚಾಯತಿಗಿಂದು ಭೇಟಿ ನೀಡಿ ಮತದಾರ ಪಟ್ಟಿ ಪರಿಷ್ಕರಣೆಯ ಕಾರ್ಯವನ್ನು ಪರಿಶೀಲಿಸಿ ಸಲಹೆ ಸೂಚನೆ ನೀಡಿದರು. 

ತದನಂತರ ನರೇಗಲ್ಲ ಪಟ್ಟಣ ಪಂಚಾಯತ, ಗಜೇಂದ್ರಗಡ ಹಾಗೂ ರೋಣ ಪುರಸಭೆ  ಕಚೇರಿಗಳಿಗೆ ತೆರಳಿ ಮತದಾರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ನಿದರ್ೇಶನ ನೀಡಿದರು. ಮುಳಗುಂದ ಪ.ಪಂ. ಮುಖ್ಯಾಧಿಕಾರಿ ಬೆಂತೂರ, ನರೇಗಲ್ಲದ ಶಂಕರ ಹುಲ್ಲಮ್ಮನವರ, ಗಜೇಂದ್ರಗಡ ಪುರಸಭೆ ಮುಖ್ಯಾಧಿಕಜಾರಿ ಹಣುಮಂತಮ್ಮ, ರೋಣ ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾ ಖಾನ್ ಹಾಗೂ ಅವರ ಸಿಬ್ಬಂದಿಗಳು ಇದ್ದರು.