ವಿಜಯಪುರ02: ಮೊರಾಜರ್ಿ ದೇಸಾಯಿ ಬಾಲಕರ ವಸತಿ ಶಾಲೆ, ಸಾ.ಹೊತರ್ಿ, ತಾ.ಇಂಡಿ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಸಾ. ಬೋಮನಹಳ್ಳಿ ತಾ.ಜಿ. ವಿಜಯಪುರ, ಇಲ್ಲಿಗೆ ಕ್ರಮವಾಗಿ 47 ಹಾಗೂ 20 ವಲಸೆ ಕಾಮರ್ಿಕರಿಗೆ ಮಾನ್ಯ ಜಿಲ್ಲಾಧಿಕಾರಿಗಳ ನಿದರ್ೇಶನದ ಮೇಲೆ ಕ್ರಮ ಜರುಗಿಸಲು ವಸತಿ ನಿಲಯಗಳಲ್ಲಿ ಆಶ್ರಯ ನೀಡಲಾಯಿತು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಅದರಂತೆ ಈ ವಸತಿ ಶಾಲೆಗೆ ಏ. 20ರಂದು ಒಟ್ಟು 47 ವಲಸೆ ಕಾಮರ್ಿಕರು ಅವರಲ್ಲಿ 38 ಪುರುಷರು 04 ಮಹಿಳೆಯರು 05 ಜನ ಮಕ್ಕಳು ಒಳಗೊಂಡಿದ್ದಾರೆ. ಇವರು ರಾಜ್ಯಸ್ಥಾನಕ್ಕೆ ಸೇರಿದವರಾಗಿದ್ದಾರೆ. ಇವರು ತಮಿಳುನಾಡಿನ ಚೆನ್ನೈ ಸುತ್ತಮುತ್ತಲ ಪ್ರದೇಶದಲ್ಲಿ ದುಡಿಯಲು ಹೋಗಿದ್ದು, ಲಾಕ್ಡೌನ್ ಅವಧಿಯಲ್ಲಿ ತಮ್ಮ ರಾಜ್ಯಕ್ಕೆ ಮರಳಿ ಹೋಗಲು ಆಗದೇ ಇರುವುದರಿಂದ ಇವರನ್ನು ವಸತಿ ಶಾಲೆಯಲ್ಲಿರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇವರುಗಳಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ಸಾಯಂಕಾಲ ಟೀ ಹಾಗೂ ರಾತ್ರಿ ಊಟವನ್ನು ನೀಡಲಾಗುತ್ತದೆ. ಅಲ್ಲದೇ ವಲಸೆ ಕಾಮರ್ಿಕರು ಅಡುಗೆಯನ್ನು ಅವರೇ ಸ್ವತಃ ಮಾಡಿಕೊಳ್ಳಲು ವಿನಂತಿಸಿದ್ದರಿಂದ ಅವಶ್ಯವಿರುವ ಗ್ಯಾಸ್, ಒಲೆ, ದವಸ ಧಾನ್ಯ ಹಾಗೂ ತರಕಾರಿ, ಹಾಲು ಇತ್ಯಾದಿಯನ್ನು ನೀಡಲಾಯಿತು ಎಂದು ಪ್ರಾಚಾರ್ಯರಾದ ಶ್ರೀ ಜೆ.ಜೆ ಗುಪ್ತಾ ಹಾಗೂ ನಿಲಯ ಪಾಲಕರು ಶ್ರೀ ಜಿ.ಎಂ ಗುಳಗಿ ಇವರು ತಿಳಿಸಿರುತ್ತಾರೆ.
ಅದಲ್ಲದೆ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಬೊಮ್ಮನಹಳ್ಳಿ, ತಾ.ಜಿ. ವಿಜಯಪುರ ಇಲ್ಲಿ 20 ವಲಸೆ ಕಾಮರ್ಿಕರಿದ್ದು ಇವರಲ್ಲಿ 16 ಜನ ವಯಸ್ಕರು ಹಾಗೂ 04 ಜನ ಮಕ್ಕಳಿದ್ದು, ಇವರಿಗೂ ಸಹ ಆಶ್ರಯವನ್ನು ನೀಡಲಾಗಿದೆ. .
ವಸತಿ ನಿಲಯದ ಎಲ್ಲಾ ಸದಸ್ಯರಿಗೆ ಮಾನ್ಯ ಆಯುಕ್ತಾಲಯದ ನಿದರ್ೇಶನದಂತೆ ಮುನ್ನೆಚ್ಚರಿಕೆಯಾಗಿ ಅವರಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್ಗಳನ್ನು ಹಾಗೂ ಪಿಪಿಇ ಕಿಟ್ಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗಿರುತ್ತದೆ. ಬಹಳ ಜಾಗ್ರತೆಯಿಂದ ಕಾರ್ಯನಿರ್ವಹಿಸಲು ಸಿಬ್ಬಂದಿಯವರಿಗೆ ತಿಳಿಸಲಾಗಿದೆ ಹಾಗೂ ಕೋವಿಡ್-19 ಸೋಂಕಿತ ರೋಗದ ತಡೆ ಹಾಗೂ ನಿಮರ್ೂಲನೆಗಾಗಿ ಜಿಲ್ಲಾಡಳಿತ, ವಿಜಯಪುರ ಇವರಿಗೆ ಸಕಲ ರೀತಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಸಹಕರಿಸುತ್ತಿರುವುದು ಕಂಡುಬಂದಿದೆ.
ಮಾನ್ಯ ವಿಪತ್ತು ನಿರ್ವಹಣಾ ಸಮಿತಿ ಹಾಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾದಂಡಾಧಿಕಾರಿ, ವಿಜಯಪುರ ಇವರ ಆದೇಶದನ್ವಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 10 ವಸತಿ ನಿಲಯ ಹಾಗೂ ವಸತಿ ಶಾಲೆಗಳನ್ನು ಕೋವಿಡ್-19 ಸೋಂಕು ಕಂಡುಬಂದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ವಾರಂಟೈನ್ಗಾಗಿ ಮತ್ತು ವಲಸೆ ಕಾಮರ್ಿಕರಿಗೆ ಆಶ್ರಯ ನೀಡಲು ಕ್ರಮ ಜರುಗಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಯಿತು ಎಂದು ತಿಳಿಸಿರುವ ಅವರು ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾಥರ್ಿ ನಿಲಯ, ಟಕ್ಕೆ ಇಲ್ಲಿನ ವಸತಿ ನಿಲಯಕ್ಕೆ ನಗರದ ಚಪ್ಪರಬಂದ್ ಕಾಲನಿಯ ಕೋವಿಡ್-19 ಸೋಂಕಿತರ ಪ್ರಾಥಮಿಕ ಸಂಪರ್ಕ ಸಂಬಂಧಿತ ಒಟ್ಟು 20 ವ್ಯಕ್ತಿಗಳನ್ನು ಏ. 17 ರಂದು ವಸತಿ ಶಾಲೆಯಲ್ಲಿ ಇರಿಸಲಾಯಿತು ಎಂದು ತಿಳಿಸಿದ್ದಾರೆ.
ವಸತಿ ನಿಲಯದ ಸೋಂಕಿತರ ಪ್ರಾಥಮಿಕ ಸಂಪರ್ಕ ಸಂಬಂಧಿತ ವ್ಯಕ್ತಿಗಳಿಗೆ ಆರೋಗ್ಯ ಇಲಾಖೆಯಿಂದ ಅವರನ್ನು ವೈದ್ಯಕೀಯ ತಪಾಸಣೆಗೊಳಪಟ್ಟು ಅವರಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್ಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ನೀಡಲಾಯಿತು.
ನಿಲಯದ ಸಿಬ್ಬಂದಿಗಳಾದ ಶ್ರೀ ಸಿಂಧೆ ಹಾಗೂ ಅಡುಗೆ ಸಹಾಯಕರು ಈಗಾಗಲೇ ವಸತಿ ನಿಲಯವನ್ನು ಸ್ವಚ್ಛಗೊಳಿಸಿ ಪೂರಕ ಕ್ರಮಗಳನ್ನು ಕೈಗೊಂಡು ಅವರಿಗೆ ನಿಲಯದಲ್ಲಿ ಪ್ರವೇಶ ನೀಡಲಾಯಿತು. ಪ್ರಾಥಮಿಕ ಸಂಪರ್ಕ ಸಂಬಂಧಿತ ವ್ಯಕ್ತಿಗಳಿಗೆ ಬೆಳಿಗ್ಗೆ ತಿಂಡಿ ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.