ನವದೆಹಲಿ, ಜ ೨೭ : ನಿಖಾ ಹಲಾಲ, ಬಹುಪತ್ನಿತ್ವ ಅಸಂವಿಧಾನಿಕ ಎಂದು ಘೋಷಿಸುವಂತೆ ಸಲ್ಲಿಸಲಾಗಿರುವ ಅರ್ಜಿಯನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎ ಐ ಎಂ ಪಿ ಎಲ್ ಬಿ) ಸೋಮವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಈ ಆಚರಣೆಗಳು ಪವಿತ್ರ ಕುರಾನ್ ಆಧರಿಸಿವೆ. ಇವುಗಳ ಕ್ರಮ ಬದ್ದತೆಯನ್ನು ಮೂಲಭೂತ ಹಕ್ಕುಗಳ ಹೆಸರಿನಲ್ಲಿ ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಕಾನೂನು ಮಂಡಳಿ ಹೇಳಿದೆ. ತಮ್ಮ ನಂಬಿಕೆಗಳನ್ನು ಪ್ರಶ್ನಿಸಿಲು ಯಾವೊಬ್ಬ ಮುಸ್ಲಿಮೇತರರು ಅವಕಾಶ ನೀಡಬಾರದು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರ್ಜಿಯಲ್ಲಿ ಅದು ತಿಳಿಸಿದೆ.
ಬಹುಪತ್ನಿತ್ವ, ನಿಖಾ ಹಲಾಲ ಅಸಂವಿಧಾನಿಕ ಹಾಗೂ ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ಬಿಜೆಪಿ ನಾಯಕ, ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ೨೦೧೮ರ ಮಾರ್ಚ್ ನಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ದೇಶದಲ್ಲಿ ಬಹುಪತ್ನಿತ್ವ ಕಾನೂನು ಬಾಹಿರವಾದರೂ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಶರಿಯತ್) ಅನ್ವಯದ ಕಾಯ್ದೆ ೧೯೩೭ ರಂತೆ ಮುಸ್ಲಿಂ ಸಮುದಾಯಕ್ಕೆ ವಿನಾಯಿತಿ ನೀಡಲಾಗಿದೆ. ನಿಖಾ ಹಲಾಲ್ ಗೂ ಇದೇ ರೀತಿ ಅನುಮತಿಸಲಾಗಿದೆ. ಬಹುಪತ್ನಿತ್ವದ ಅಡಿಯಲ್ಲಿ ಮುಸ್ಲಿಂ ಪುರುಷ ನಾಲ್ಕು ಹೆಂಡತಿಯರನ್ನು ಮದುವೆಯಾಗಬಹುದು. ಆಗಸ್ಟ್ ೨೦೧೭ ರಲ್ಲಿ ತ್ರಿವಳಿ ತಲಾಖ್ ಆಚರಣಣೆಯನ್ನು ನಿಷೇಧಿಸುವ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ನಿಖಾ ಹಲಾಲಾ ಮತ್ತು ಬಹುಪತ್ನಿತ್ವ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಗೆ ಬೇರೆ ನ್ಯಾಯಪೀಠಕ್ಕೆ ವರ್ಗಾಯಿಸಿತ್ತು.