ಶರಣರು, ಮಹಾತ್ಮರು ಬದುಕನ್ನು ಸಮಾಜಕ್ಕಾಗಿ ಮೀಸಲು ಇಟ್ಟಿದ್ದರು : ದುಂಡಿಗೌಡ್ರ

Sharanas and Mahatmas dedicated their lives to society: Dundigowdra

ಶರಣರು, ಮಹಾತ್ಮರು ಬದುಕನ್ನು ಸಮಾಜಕ್ಕಾಗಿ ಮೀಸಲು ಇಟ್ಟಿದ್ದರು : ದುಂಡಿಗೌಡ್ರ   

  ಶಿಗ್ಗಾವಿ  06: ಶರಣರು, ಮಹಾತ್ಮರು ತಮ್ಮ ಬದುಕನ್ನು ಸಮಾಜಕ್ಕಾಗಿ ಮೀಸಲು ಇಟ್ಟಿದ್ದರು ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಎಂದರು. ಪಟ್ಟಣದ ವಿರಕ್ತಮಠದಲ್ಲಿ 32ನೇ ಶರಣ ಸಂಸ್ಕೃತಿ ಉತ್ಸವ-2025 ಮತ್ತು ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಹಾಗೂ ಬಸವಲಿಂಗ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ನಡೆದ ಧರ್ಮ ಸಮಾರಂಭದಲ್ಲಿ ಮಾತನಾಡಿದ ಅವರು ಶರಣ ಸಂಸ್ಕೃತಿ ಉತ್ಸವ ನಾಡಿನ ಏಳ್ಗೆಗೆ ಕಾರಣವಾಗಿದೆ ಶರಣರ ಆದರ್ಶ ತತ್ವಗಳನ್ನು ಪಾಲಿಸಿದರೆ ಬದುಕು ಯಶಸ್ವಿಯಾಗುತ್ತಿದೆ ಎಂದರು.   ಸೀತಾಗಿರಿ ಎ. ಸಿ. ವಾಲಿ ಮಹಾರಾಜರು ಪ್ರವಚನ ನೀಡಿದ ಅವರು, ನುಡಿ ಮುತ್ತಿನ ಹಾರದಂತೆ ಶರಣರ ನುಡಿಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ನುಡಿದಂತೆ ನಡೆದು ತೋರಿದ ಮಹಾತ್ಮರು, ಶರಣು ಇಂದಿಗೂ ಸ್ಮರಣಿಯರಾಗಿದ್ದಾರೆ. ಅಂತಹ ನುಡಿ ನಾವು ನುಡಿಯುವ ಮೂಲಕಸಮಾನತೆ, ಒಗ್ಗಟ್ಟಿನ ನಾಡು ಕಟ್ಟುವ ಕಾಯಕ ನಮ್ಮದಾಗಬೇಕುಎಂದರು.     ವಿರಕ್ತಮಠದ ಸಂಗನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಸವ ದೇವರ ಸಾನ್ನಿಧ್ಯ ವಹಿಸಿದ್ದರು.ಮುಖಂಡರಾದ ಮಾರುದ್ರ​‍್ಪ ಯಲಿಗಾರ, ಎಸ್‌.ಎನ್‌.ಮುಗಳಿ, ಎಸ್‌.ಕೆ.ಹೂಗಾರ, ಫಕ್ಕೀರೇಶ ಕೊಂಡಾಯಿ, ಶಿವಾನಂದ ಹೊಸಮನಿ, ಲಿಂಗರಾಜ ಕುನ್ನೂರ, ಶಶಿಕಾಂತ ರಾಠೋಡ, ಸಿದ್ದಲಿಂಗಪ್ಪ ನರೇಗಲ್ಲ, ಶಂಭಣ್ಣ ಹಾವೇರಿ, ಶಿವರಾಜ ಕ್ಷೌರದ, ಪಿ.ಎಸ್‌.ಐ ಪಿ.ಎಫ್‌.ನಿರೋಳ್ಳಿ ಶಿವಾನಂದ ಯಲಿಗಾರ, ಶಂಕ್ರ​‍್ಪ ಅರಳೇಶ್ವರ, ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಸದಸ್ಯರು, ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.  ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಮತ್ತು ದಾನಿಗಳಿಗೆ ಸನ್ಮಾನ ಮತ್ತು ಜಾನಪದ ಕಲಾವಿದರಾದ ಬಸವರಾಜ ಶಿಗ್ಗಾವಿ, ಶರೀಫ್ ಮಾಕಪ್ಪನವರ ತಂಡದಿಂದ ಸಂಗೀತ ಕಾರ್ಯಕ್ರಮ, ನಟರಾಜ ನಾಟ್ಯ ಶಾಲೆ ಮಕ್ಕಳ ಭರತ ನಾಟ್ಯ ಸೇರಿದಂತೆ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.