ನ್ಯಾಯಬೆಲೆ ಅಂಗಡಿಗೆ ಶರಣಪ್ಪಾ ಭೇಟಿ

ಲೋಕದರ್ಶನ ವರದಿ

ಸಂಬರಗಿ 17: ಖಿಳೇಗಾಂವ ಗ್ರಾಮದ ನ್ಯಾಯಬೇಲೆ ಅಂಗಡಿಯ ಆಹಾರದ ಪೋಟ್ಟನದಲ್ಲಿ ಕಸ ಹಾಗೂ ಕಳಪೆ ಅಕ್ಕಿ ವಿತರಿಸುವ ಕುರಿತು ಗ್ರಾಮಸ್ಥರು ಆಹಾರ ಇಲಾಖೆ ಅಥಣಿ ಇವರಿಗೆ ದೂರವಾಣಿ ಮುಖಾಂತರ ದೂರು ಸಲ್ಲಿಸಿದರು ಆಹಾರ ಇಲಾಖೆಯ ಆಹಾರ ನಿರಿಕ್ಷರು ಶರಣಪ್ಪಾ ಬಾಗೇವಾಡಿ ಇವರು ಮಂಗಳವಾರದಂದು ಭೇಟಿ ನೀಡಿ ಪರಿಶೀಲನೆಮಾಡಿದರು. 

ನ್ಯಾಯಬೇಲೆ ಅಂಗಡಿಯಲ್ಲಿ ಕಳೇದ ಆಹಾರವನ್ನು ಸಂಘದಿಂದ ವಿತರಣೆ ಪ್ರಾರಂಭ ಮಾಡಿದ್ದರು. ಸುಮಾರ 12 ಪೋಟ್ಟನ ಸುಮಾರ 6 ಕ್ವೀಂಟಲ್ ಧಾನ್ಯದಲ್ಲಿ ಕಸ ಮಿಶ್ರೀತ ಧಾನ್ಯ ಇರುವದರಿಂದ ಪಡಿತರ ಚೀಟಿದಾರರು ಆಹಾರ ಪಡಿಯಲು ನೀರಾಕರಿಸಿದ್ದರಿಂದ ಸ್ಥಳಕ್ಕೆ ಆಹಾರ ನೀರಿಕ್ಷಕರು ಶರಣಪ್ಪಾ ಬಾಗೆವಾಡಿ ಭೇಟಿ ನೀಡಿ ಪರಿಶೀಲನೆ ಮಾಡಿ ಕಸ ಮಿಶ್ರೀತ ಧಾನ್ಯವನ್ನು ಮರಳಿ ಪಡೇದು ಒಳ್ಳೆಯ ಗುಣಮಟ್ಟದ ಆಹಾರವನ್ನು ನೀಡಲಾಗುವುದು ಇಂದು ಪಡಿತರ ಚೀಟಿದಾರರಿಗೆ ತಿಳಿಸಿದರು. ಈ ವೇಳೆ ಪಿಕೆಪಿಎಸ್ ಸಂಘದ ಮುಖ್ಯಕಾರ್ಯನಿವರ್ಾಹಕರು ಬಾಬು ಹೊನ್ನಾಗೋಳ ಸವಿಸ್ತಾರವಾಗಿ ಆಹಾರ ಕುರಿತು ಮಾಹಿತಿ ನೀಡಿದರು.