ಲೋಕದರ್ಶನ ವರದಿ
ಬೆಳಗಾವಿ, 27: ಹನ್ನೆರಡನೆಯ ಶತಮಾನ ಸ್ತ್ರೀ ಸಮಾನತೆಯನ್ನು ನೀಡಿದ ಅಪರೂಪ ಕಾಲ ಘಟ್ಟ. ಎಲ್ಲ ವರ್ಗದ ಸ್ತ್ರೀಯರಿಗೆ ಆಧ್ಯಾತ್ಮಕ ಹಾಗೂ ಆಥರ್ಿಕ ಸ್ವಾತಂತ್ರ್ಯವನ್ನು ನೀಡಿದ ಶರಣರು ಮಹಿಳೆಯನ್ನು ಸಮಾಜದ ಮುಖ್ಯವಾಹಿನಿಗೆ ತಂದರು. ಶರಣರಿಂದ ಸ್ತ್ರೀ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಪಡೆದಳೆಂದು ರಾಜ್ಯ ಪ್ರಶಸ್ತಿ ವಿಭೂಷಿತರಾದ ಶಿಕ್ಷಕಿ ದಾನಮ್ಮಾ ಝಳಕಿ ನುಡಿದರು.
ಅವರು ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕವು ಆಯೋಜಿಸಿದ್ದ ಅಮವಾಸ್ಯೆ ಶರಣ ಸತ್ಸಂಗದಲ್ಲಿ 'ಅಲಕ್ಷಿತ ವಚನಕಾತರ್ಿಯರು' ವಿಷಯ ಕುರಿತು ಮಾತನಾಡಿದರು.
ಒಂದು ಕಾಲದಲ್ಲಿ ಸ್ತ್ರೀ ಸ್ವಾತಂತ್ರ್ಯ ಎನ್ನುವುದು ಗಗನ ಕುಸುಮವಾಗಿತ್ತು. ಅವಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸೆದುಕೊಳ್ಳಲಾಗಿತ್ತು. ಪುರುಷ ಪ್ರಧಾನ ಸಮಾಜದಲ್ಲಿ ಬದುಕನ್ನು ರೂಪಿಸಿಕೊಳ್ಳುವುದು ದುಸ್ತರವಾದ ಕಾಲಘಟ್ಟದಲ್ಲಿ ಶರಣರು ಸ್ತ್ರೀಯರ ಬದುಕಿಗೆ ಬೆಳಕಾದರು. ಅದರ ಫಲವೆಂಬ ಅಕ್ಕಮಹಾದೇವಿ ವಚನ ಸಾಹಿತ್ಯದ ಅನಘ್ರ್ಯರತ್ನವೆನಿಸಿದಳು. ಭಗವಂತನನ್ನು ಅಕ್ಕ ಕಾಣುವ ಪರಿ ಮಹೋನ್ನತವಾದುದು. ಅಷ್ಟೇ ಅಲ್ಲದೆ ಅಕ್ಕನ ಅನುಭಾವ ಸಿದ್ಧಿಗೂ ಮೀಗಿಲಾದ ಅನೇಕ ವಚನಕಾತರ್ಿಯರ ವಚನಗಳು ನಮಗೆ ದೊರೆಯುತ್ತವೆ. ಅವರ ವಚನಗಳ ಪ್ರಮಾಣ ಕಡಿಮೆ ಇರಬಹುದು ಆದರೆ ಅವರು ಕಂಡುಕೊಂಡ ಅನುಭಾವದ ಮೇಲ್ಮೆ ಅದ್ಭುತ, ವಣರ್ಾತೀತವಾದುದು. ಕನ್ನಡಿ ಕಾಯಕದ ಪುಣ್ಯಸ್ತ್ರೀ ರೆಮ್ಮವ್ವೆ, ಉರಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ, ಸೂಳೆ ಸಂಕವ್ವೆ, ಕೊಟ್ಟಣದ ಸೋಮವ್ವೆ, ರಾಯಮ್ಮರಂತಹ ಹಲವಾರು ವಚನಕಾತರ್ಿಯರ ವಚನಗಳಲ್ಲಿ ಕಾಯಕ ಕುರಿತು ಹೇಳುವ ಮಾತುಗಳು ಮನನೀಯ ಹಾಗೂ ಅನುಕರಣೀಯವೆನಿಸಿವೆ. ಸತ್ಯ ಶುದ್ಧ ಕಾಯಕವನ್ನು ಅನುಮೋದಿಸುವ ಶರಣೆಯರು ಸಮಾಜಕ್ಕೆ ಮೌಲಿಕವಾದ ಕೊಡುಗೆಯನ್ನು ನೀಡಿದ್ದಾರೆ. ಇಂದು ಅಂತಹ ಹಲವಾರು ವಚನಕಾತರ್ಿಯರ ವಚನಗಳನ್ನು ಮನನಮಾಡಿಕೊಳ್ಳುವುದರೊಂದಿಗೆ ಯುವ ಪೀಳಿಗೆಗೆ ಅವುಗಳನ್ನು ತಿಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ.ಗುರುದೇವಿ ಹುಲೆಪ್ಪನವರಮಠ ಶರಣರು ಸ್ತ್ರೀ ಸಮಾನತೆಯ ಹರಿಕಾರರು. ಮಹಿಳೆಯರಲ್ಲಿಯೂ ವಿಚಾರಿಸುವ ಶಕ್ತಿ ಸಾಮಥ್ರ್ಯವಿದೆ ಎಂದು ತಕರ್ಿಸಿ ಸಮಾಜದ ಬಾಗಿಲನ್ನು ತೆರೆದವರು. ಇಂದು ಮಹಿಳೆ ಏನಾದರೂ ಸಾಧನೆಯನ್ನು ಮಾಡಿದ್ದರೆ ಅಂದು ಶರಣರು ಮಹಿಳೆಯರಿಗೆ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಫಲವೆನ್ನಬೇಕು. ಇಂದು ಮಹಿಳೆ ಎಲ್ಲ ರಂಗಗಳಲ್ಲಿಯೂ ದಾಪುಗಾಲಿಟ್ಟಿದ್ದಾಳೆ. ಸಮಾಜಕ್ಕೆ ಒಂದು ವಿನೂತನವಾದ ಭಾಷ್ಯವನ್ನು ಬರೆದಿದ್ದಾಳೆ ಹಾಗಾಗೀ ಇಡೀ ಸ್ತ್ರೀ ಸಮಾಜ ಶರಣರಿಗೆ ಉಪಕೃತರಾಗಿರಬೇಕು ಎಂದು ಹೇಳಿದರು.
ಶರಣೆ ಸುಜಾತಾ ವಸ್ತ್ರದ ಹಾಗೂ ಶಂಕರ ಚೊಣ್ಣದ ವಚನ ಪ್ರಾರ್ಥನೆ ನುಡಿಸಿದರು. ಜ್ಯೋತಿ ಭಾವಿಕಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೇಮಾ ಕೊಂಗಿ ಹಾಗೂ ಇಂದಿರಾ ಮೋಟೆಬೆನ್ನೂರ ವಚನ ವಿಶ್ಲೇಷಣೆ ಮಾಡಿದರು. ನ್ಯಾಯವಾದಿ ರಾವಸಾಹೇಬ ಪಾಟೀಲ ವಂದಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ವೇದಿಕೆ ಮೇಲೆ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಪ್ರೊ.ಎ.ಬಿ.ಕೊರಬು ಉಪಸ್ಥಿತರಿದ್ದರು. ಎಸ್.ಎ.ವಿಭೂತಿ, ವಿ.ಕೆ.ಪಾಟೀಲ, ಕರಡಿಗುದ್ದಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.