‘ಅವತಾರ್’ ನಲ್ಲಿ ಬ್ಲ್ಯಾಕ್ ಮ್ಯಾಜಿಕ್ ಮಾಡ್ತಾರಂತೆ ಶರಣ್‍ -ಎಸ್‍ ಆಶಾ ಕಶ್ಯಪ್

ಬೆಂಗಳೂರು, ಜ 29 :     ಶರಣ್‍ ಚಂದನವನದ ಅತ್ಯುತ್ತಮ ಹಾಸ್ಯ ನಟ ಹಾಗೂ ಬಹುಮುಖ ಪ್ರತಿಭೆ  ವಿಶಿಷ್ಟ ಮ್ಯಾನರಿಸಂ, ಡೈಲಾಗ್ ಡೆಲಿವರಿಯಿಂದ  ಕ್ಲಾಸ್, ಮಾಸ್ ಸೇರಿದಂತೆ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯಬಲ್ಲ ವ್ಯಕ್ತಿತ್ವ    

‘ಡಾನ್ಸ್ ಮಾಡೋದು ತುಂಬಾನೆ ಕಷ್ಟ ಅಂತ ಹೇಳುತ್ತಲೇ ‘ಚುಟು ಚುಟು ಅಂತೈತಿ’ ಹಾಡಿನ ಮೂಲಕ ಎಲ್ಲರ ‘ತಲೆಕೆಡಿಸಿ’ ಕುಣಿಸಿದ ನಟ  ಇತ್ತೀಚೆಗೆ ಅವರ ಚಿತ್ರಗಳು ಹೆಚ್ಚಾಗಿ ತೆರೆ ಕಾಣದ ಕಾರಣ ಶರಣ್ ಚೂಸಿಯಾದ್ರೇನೂ ಎಂದುಕೊಳ್ಳುತ್ತಿರುವುಗಾಲೇ ‘ಅವತಾರ್ ಪುರುಷ’ ಚಿತ್ರದ ಮೂಲಕ ಮತ್ತೆ ಬರೋಕೆ ಸಿದ್ಧವಾಗ್ತಿದ್ದಾರೆ  

ಹಾಗಾದ್ರೆ ಹೊಸ ಸಿನಿಮಾ ಹೇಗಿರಬಹುದು ಎಂಬ ಪ್ರಶ್ನೆಗೆ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಲೋಕಾಭಿರಾಮವಾಗಿ ಹರಟುತ್ತ, ಉತ್ತರಿಸಿದ ಶರಣ್‍, “ಅವತಾರ್ ಪುರುಷ ಸಿಂಪಲ್ ಸುನಿ ಮತ್ತು ನನ್ನ ಕಾಂಬಿನೇಷನ್‍ ನ ಮೊದಲ ಚಿತ್ರವಾಗಿದ್ದು, ಈವರೆಗಿನ ಎಲ್ಲ ಚಿತ್ರಗಳಿಗಿಂತ ವಿಭಿನ್ನವಾಗಿರಲಿದೆ ಬ್ಲ್ಯಾಕ್ ಮ್ಯಾಜಿಕ್ ಒಳಗೊಂಡಿರುವ ಕಥೆಯನ್ನು ಹಾಸ್ಯಮಯವಾಗಿ ಪ್ರಸ್ತುತ ಪಡಿಸಲಾಗುವುದು  ಡಬ್ಬಿಂಗ್ ಕೆಲಸ ಪ್ರಗತಿಯಲ್ಲಿದ್ದು, 3 ಹಾಡುಗಳ ಚಿತ್ರೀಕರಣ  ಬಾಕಿಯಿದೆ ಎಲ್ಲ ಅಂದುಕೊಂಡಂತೆ ಆದರೆ ಬೇಸಿಗೆ ವೇಳೆಗೆ ಪ್ರೇಕ್ಷಕರೆದುರು ಬರುವ ಚಿಂತನೆಯಿದೆ” ಅಂತ ತಿಳಿಸಿದ್ರು

  ಯೂಟ್ಯೂಬ್ ನಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದ ‘ಚುಟು ಚುಟು’  

ರ್ಯಾಂಬೋ 2 ಚಿತ್ರದ ಚುಟು ಚುಟು ಅಂತೈತಿ ಹಾಡು ಸೂಪರ್ ಡೂಪರ್ ಆದ ಖುಷಿ ಹಂಚಿಕಂಡ ಶರಣ್, “ಮೊಟ್ಟ ಮೊದಲ ಬಾರಿಗೆ ಕನ್ನಡದ ಹಾಡೊಂದು ಯೂಟ್ಯೂಬ್ ನಲ್ಲಿ 100 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದ ಹೆಮ್ಮೆಗೆ ಪಾತ್ರವಾಗಿದೆ  ಇದರ ಹಿಂದೆ ಸಾಹಿತ್ಯ, ಸಂಗೀತ, ಗಾಯನ, ತಂತ್ರಜ್ಞರ ಪರಿಶ್ರಮ ಎಲ್ಲವೂ ಸೇರಿದೆ” ಎಂದರು

  ವ್ಯಕ್ತಿತ್ವ ಬದಲಾವಣೆಯೂ ಅವತಾರವೇ ಅಲ್ಲವೇ?  

ಮುಂಬರಲಿರುವ ‘ಅವತಾರ್ ಪುರುಷ’ ಹೆಸರೇ ಹೇಳೋ ಹಾಗೆ ಸಾಕಷ್ಟು ಗೆಟಪ್ ಗಳಿವೆ  ಕೇವಲ ಗೆಟಪ್ ಮಾತ್ರವಲ್ಲ ವ್ಯಕ್ತಿತ್ವ ಬದಲಾವಣೆಯೂ ಇದ್ದು, ಅದೂ ಕೂಡ ಅವತಾರಾನೆ ಎಂದ ಶರಣ್, ಕೈಗೆತ್ತಿಕೊಳ್ಳಲೇಬೇಕು ಎನಿಸುವ ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ  ಹಾಗಾಗಿ ಬ್ಯಾಕ್ ಟು ಬ್ಯಾಕ್ ಬರಲು ತಡವಾಗ್ತಿದೆ ಅಂದ್ರು  

ಅಭಿನಯ, ಗಾಯನ, ನರ್ತನ ಸೇರಿದಂತೆ ಹಲವು ಪ್ರತಿಭೆಗಳ ಗಣಿಯಾಗಿರುವ ಶರಣ್‍ ಅವರಿಗೆ ಅವರಿಷ್ಟದ ಕಥೆಯುಳ್ಳ ಚಿತ್ರಗಳು ಸಿಗುವುದರ ಜತೆಗೆ, ಶೀಘ್ರದಲ್ಲೇ ಅವರ ನಿರ್ದೇಶನದ ಸಿನೆಮಾಗಳನ್ನೂ ಪ್ರೇಕ್ಷಕರು ನೋಡುವಂತಾಗಲಿ ಅನ್ನೋದು ಯುಎನ್ಐ ಸುದ್ದಿ ಸಂಸ್ಥೆಯ ಆಶಯ