ಅನುಭಾವದ ಚಿಂತಕ ಶರಣ ಮಾದಾರ ಚೆನ್ನಯ್ಯ
Sharan Madara Chennaiyya, an experienced thinker
ಧಾರವಾಡ 24 : ನಗರದ ಯಾಲಕ್ಕಿಶೆಟ್ಟರ ಕಾಲೋನಿಯ ಬಸವೇಶ್ವರ ಭವನದಲ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ ಆಶ್ರಯದಲ್ಲಿ ಶಿವಶರಣ ಮಾದಾರ ಚೆನ್ನಯ್ಯ ಅವರ ಜಯಂತಿ ಆಚರಿಸಲಾಯಿತು.
ಮುಖ್ಯ ಎಂಜನೀಯರ್ ಹಯಾಳಪ್ಪ ಖದ್ರಾಪೂರ ಜಯಂತಿ ಉದ್ಘಾಟಿಸಿದರು. ವಿವಿಧ ವಿಷಯಗಳನ್ನು ಕೇಂದ್ರೀಕರಿಸಿ ಡಾ.ಮಾಲತೇಶ ಬಸಮ್ಮನವರ, ಡಾ.ಎಂ.ಜಿ.ಹರಿಹರ ಹಾಗೂ ಗುರುದೇವ ಕಳ್ಳಿಮನಿ ಮಾತನಾಡಿ, ಅನುಭವ ಮಂಟಪದಲ್ಲಿ ಮತ್ತು ತಮ್ಮ ವಚನಗಳಲ್ಲಿ ಅನುಭಾವದ ಚಿಂತಕರಾಗಿ ಶಿವಶರಣ ಮಾದಾರ ಚೆನ್ನಯ್ಯ ಅವರು ಎದ್ದುಕಾಣುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾದ ವಾರ್ಷಿಕ ಸರ್ವ ಸದಸ್ಯರ ಸಭೆಯೂ ಜರುಗಿತು. ಮಹಾಸಭಾ ಅಧ್ಯಕ್ಷ ಪಿ.ವೆಂಕಪ್ಪ ಅಧ್ಯಕ್ಷತೆವಹಿಸಿದ್ದರು. ಕ.ವಿ.ವಿ. ಸಿಂಡಿಕೇಟ ಸದಸ್ಯ ಮಹೇಶ ಹುಲ್ಲೆಣ್ಣವರ, ಶಿಕ್ಷಣ ಇಲಾಖೆಯ ನಿವೃತ್ತ ಪತ್ರಾಂಕಿತ ಅಧಿಕಾರಿ ಕೆ.ಎಸ್.ಬಂಗಾರಿ, ಆಂಜನೇಯ ಅರವೇಡ, ಕೆ.ಎಂ. ಪೂಜಾರ, ಮಹೇಶ ನಾಗಣ್ಣವರ, ಬಸವರಾಜ ಶಿವಪೂರ ಮಾದಿಗ ಮಹಾಸಭಾದ ವಿಭಿನ್ನ ಚಟುವಟಿಕೆಗಳ ಕುರಿತು ಮಾತನಾಡಿದರು. ವಿವಿಧ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ನಿವೃತ್ತ ಜೆ.ಡಿ. ಭೀಮಪ್ಪ, ಯಲ್ಲಪ್ಪ ಜಕನೂರ, ಪರಷುರಾಮ ಪೂಜಾರ, ತಿಪ್ಪಣ್ಣಾ ಕೊಣ್ಣೂರ, ಡಾ. ಮಲ್ಲಿಕಾರ್ಜುನ ಬ್ಯಾಲ್ಯಾಳ, ಡಾ. ಸದಾಶಿವ ನಡುವಿನಕೇರಿ, ಡಾ. ರಾಜು, ಡಾ. ಚಂದ್ರ್ಪ, ವಕೀಲ ಶಿವಪ್ರಸಾದ ಕಾಲವಾಡ, ಲಕ್ಷ್ಮಣ ಟ್ಯಾಗೋರ, ಮೈಲಾರೆಪ್ಪ ಮಾದರ, ರಮೇಶ ಜಾಲಿಹಾಳ, ಸುರೇಶ ಪೂಜಾರ, ಮಹಾದೇವ ತಳವಾರ ಇತರರು ಇದ್ದರು. ಪಿ.ಡಿ. ಬಸನಾಳ ಶರಣರ ವಚನಗಳನ್ನು ಪ್ರಸ್ತುತಪಡಿಸಿದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 