ಮನುಷ್ಯನ ಸೃಜನಶೀಲ ವಿಸ್ಮಯಗಳಲ್ಲಿ ಸಾಹಿತ್ಯವೂ ಒಂದು. ಇದು ಭಾವ-ಭಾಷೆಗಳಲ್ಲಿ ನಡೆಯುವ ಕ್ರಿಯೆ. ಆಧುನಿಕ ಕನ್ನಡ ಸಾಹಿತ್ಯ ಹೊಸ ಹೊಸ ರೂಪಗಳನ್ನು ಪಡೆದು ಕಾವ್ಯ, ನಾಟಕ, ಕಥೆ, ಕಾದಂಬರಿ ಮುಂತಾದ ಅನೇಕ ಪ್ರಕಾರಗಳಲ್ಲಿ ಕವಲೊಡೆದು ಬೆಳೆದು ಬಂದಿದೆ. ಅದರಲ್ಲಿ ಅತ್ಯಂತ ಜನಪ್ರಿಯತೆಗೆ ಪಾತ್ರವಾಗಿದ್ದುದು ಕಾದಂಬರಿ. ಕನ್ನಡ ಕಾದಂಬರಿಕಾರರ ಸಾಮಾಜಿಕ ಪ್ರಜ್ಞೆಯಂತೂ ಪರಂಪರೆಯುದ್ದಕ್ಕೂ ನಿಖರವಾಗಿ ಕಾಣಿಸಿಕೊಂಡಿದೆ. ಕಾದಂಬರಿ ಪರಂಪರೆಯಲ್ಲಿ ಅನೇಕ ಕಾರಣಗಳಿಂದ ಗಮನ ಸೆಳೆದವರು ಜಿ.ಎಚ್.ಹನ್ನೆರಡುಮಠರು.
ಮೂಲತಃ ಹುಬ್ಬಳ್ಳಿಯವರಾದ ಜಿ.ಎಚ್.ಹನ್ನೆರಡಮಠರು 1940ರ ಮಾರ್ಚ್ 13 ರಂದು ಹಳೆ ಹುಬ್ಬಳ್ಳಿಯ ಹನ್ನೆರಡುಮಠದಲ್ಲಿ ಜನಿಸಿದರು. ಅವರ ತಂದೆ ಹುಚ್ಚಯ್ಯ. ತಾು ಅನ್ನಪೂರ್ಣಮ್ಮ. ಹುಚ್ಚಯ್ಯನವರು ಮುಂಬೈ ಸರ್ಕಾರದಲ್ಲಿ ಸ್ಯಾನಿಟರಿ ಇನ್ಸ್‌ಪೆಕ್ಟರ್ ಆಗಿದ್ದರು. ಅನ್ನಪೂರ್ಣಮ್ಮನವರಿಗೆ ದೇವರಲ್ಲಿ ಅಪಾರವಾದ ಭಕ್ತಿ. ಬಡತನದ ಪರಿಸ್ಥಿತಿಂದಾಗಿ ಗುರುಸಿದ್ಧಯ್ಯನವರ ದಿನಗಳು ಕಷ್ಟದಲ್ಲಿಯೇ ಕಳೆದವು. ಅವರು ಐದನೇ ತರಗತಿಯವರೆಗೆ ಹಳೆಹುಬ್ಬಳ್ಳಿಯ ಬಾಸೆಲ್ "ುಶನ್ ಕನ್ನಡಶಾಲೆಯಲ್ಲಿ ಓದಿದರು. ಆರನೆಯ ತರಗತಿಯನ್ನು ಹುಬ್ಬಳ್ಳಿಯ ಹೆಗ್ಗೇರಿ ಶಾಲೆಯಲ್ಲಿ, ಏಳನೆಯ ತರಗತಿಯನ್ನು ಬೆಳಗಾವಿಯ ಒಂದನೆ ನಂಬರ ಶಾಲೆಯಲ್ಲಿ ಮುಗಿಸಿದರು. ಎಂಟನೆ ತರಗತಿಯನ್ನು ಗಿಲಿಗಿಂಚಿ ಅರಟಾಳ ಹೈಸ್ಕೂಲಿನಲ್ಲಿ ಮುಗಿಸಿ, ನಂತರ 9ನೇ ತರಗತಿಗೆ ಹುಬ್ಬಳ್ಳಿಯ ಲ್ಯಾ"ುಂಗ್ಟನ್ ಹೈಸ್ಕೂಲಿಗೆ ಬಂದು ಸೇರಿದರು. ಅಲ್ಲಿಯೇ 1956ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪಾಸಾದರು.
1961ರಲ್ಲಿ ಪದವಿ ಶಿಕ್ಷಣವನ್ನು ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದರು. ಅಲ್ಲಿ ಡಾ.ಡಿ.ಎಸ್.ಕರ್ಕಿ, ಡಾ.ಎಸ್.ಎಲ್.ಬೈರ್ಪ ಮುಂತಾದ ಪ್ರಾಧ್ಯಾಪಕರ ಮಾರ್ಗದರ್ಶನ ದೊರೆುತು. ನಂತರ ಕ."." ಧಾರವಾಡದಲ್ಲಿ ಕನ್ನಡ "ಷಯದೊಂದಿಗೆ 1962ರಲ್ಲಿ ಎಂ.ಎ. ಪರೀಕ್ಷೆಯನ್ನು ಪಾಸಾದರು. "ಗೆ ತುಂಬಾ ಬಡತನದ ಪರಿಸ್ಥಿತಿಯಲ್ಲಿಯೂ ಕಲಿಯಬೇಕೆಂಬ ಮಹಾದಾಸೆಯನ್ನು ಹೊತ್ತ ಜಿ.ಎಚ್ ಹನ್ನೆರಡುಮಠರು ಸ್ನಾತಕೋತ್ತರ ಪದವಿ ಮುಗಿಸಿದ್ದು ಅವರ ಮನೋಧಾರ್ಡ್ಯತೆಗೆ "ಡಿದ ಕನ್ನಡಿ. ಅವರು ಉದ್ಯೋಗವನ್ನು ಅರಸುತ್ತ ಹುಬ್ಬಳ್ಳಿಯ ಮೂರುಸಾವಿರಮಠದ ಶ್ರೀ ಜಗದ್ಗುರು ಗಂಗಾಧರ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ವೃತ್ತಿಯನ್ನು ಪ್ರಾರಂಭಿಸಿದರು. ಅಲ್ಲಿ 6 ತಿಂಗಳು ಕಾಲ ಸೇವೆ ಸಲ್ಲಿಸಿ, ತದನಂತರ ಡಾ.ಆರ್.ಸಿ "ರೇಮಠ ಮತ್ತು ಡಾ.ನಂದೀಮಠರ ಸಹಕಾರದೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದ ವಚನವಾಙ್ಮಯ ವಿಭಾಗದಲ್ಲಿ ಸಂಶೋಧನ ಸಹಾಯಕರಾಗಿ ಸೇವೆ ಸಲ್ಲಿಸಿದರು. ಮುಂದೆ 1964ರಲ್ಲಿ ಅವರು ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅವರು ಕನ್ನಡ ಪ್ರಾಧ್ಯಾಪಕರಾಗಿ ಮತ್ತು ಪ್ರಾಚಾರ್ಯರಾಗಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿದರು. "ಗೆ ಹನ್ನೆರಡುಮಠರು ವೃತ್ತಿ ಜೀವನ, ಸಾಮಾಜಿಕ ಜೀವನ, ಸಾ"ತ್ಯಕ ಜೀವನವನ್ನು ಇಳಕಲ್ಲಿನಲ್ಲಿ ಕಳೆದರು.
ಆಧುನಿಕ ಸಾ"ತ್ಯದಲ್ಲಿ ಕಥೆ, ಕಾದಂಬರಿ, ಕಾವ್ಯ, ನಾಟಕ, ಪ್ರಬಂಧ "ಗೆ ಹಲವಾರು ಪ್ರಕಾರಗಳಲ್ಲಿ ಕೆಲಸ ಮಾಡಿದವರಲ್ಲಿ ಜಿ.ಎಚ್.ಹನ್ನೆರಡುಮಠರೂ ಒಬ್ಬರು. ಅವರು ಮೂರನೆಯ ತರಗತಿಯಲ್ಲಿ ಓದುತ್ತಿರುವಾಗಲೇ ತಂಗಿಯನ್ನು ಕುರಿತು ಕ"ತೆ ರಚಿಸಿದ್ದರು. ಏಳನೆಯ ತರಗತಿಯಲ್ಲಿರುವಾಗ ಅವರ ಗುರುಗಳ ಪ್ರೇರಣೆುಂದ ಗೋಕಾಕ ಜಲಪಾತದ ಕುರಿತು ಮೂವತ್ತು ಸಾಲಿನ ಕವಿತೆ ರಚಿಸಿದ್ದರು. "ಗೆ ಜಿ.ಎಚ್.ಹನ್ನೆರಡುಮಠರು ಬೆಳೆದಂತೆ ಸಾ"ತ್ಯ ರಚನೆಯು ಬೆಳೆಯ ತೊಡಗಿತು. ಅವರು 17 ಕಾದಂಬರಿ, 13 ಕವನ ಸಂಕಲನ, 10 ಕಥಾ ಸಂಕಲನ, 35 ನಾಟಕ, ನಾಲ್ಕು ಲಲಿತ ಪ್ರಬಂಧ. ಎರಡು ಪ್ರವಾಸ ಕಥನ ಸೇರಿದಂತೆ ಒಟ್ಟು 110 ಕೃತಿಗಳನ್ನು ರಚಿಸಿದ್ದಾರೆ. ಅವರು ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಓದುತ್ತಿದ್ದಾಗ 'ಕಾವ್ಯ ಕಲಾಪಿ' ಎಂಬ ಕವನ ಸಂಕಲವನ್ನು ಹೊರತಂದರು. ನಂತರ ಇಳಕಲ್ಲಿನ ಶ್ರೀಗಳ ಪ್ರೇರಣೆುಂದ 'ಚಿತ್ತರಗಿ ಚಿಜ್ಯೋತಿ' ಕಾದಂಬರಿ ರಚಿಸಿದರು. 1972ರಲ್ಲಿ ಧಾರವಾಡ ಮುರುಘಾಮಠದ ಶ್ರೀ ಮೃತ್ಯುಂಜಯ ಸ್ವಾ"ುಗಳ ಕುರಿತು 'ದಾಸೋಹ ದೀಪ್ತಿ' ಕಾದಂಬರಿಯನ್ನು ರಚಿಸಿದರು. ಅವರು ಬಸವ ಪರಿಸರದ ಎಂಟು ಕಾದಂಬರಿಗಳು, ದರ್ಶನಾತ್ಮಕ ಕಾದಂಬರಿಗಳಾದ ಸೋಮಸಾಕ್ಷಾತ್ಕಾರ, ಕೈವಲ್ಯ ಕಾಶ್ಮೀರ ಕಾದಂಬರಿಗಳನ್ನು ರಚಿಸಿದರು. ಹನ್ನೆರಡುಮಠರ ಕಾಮ-ಪ್ರೇಮ-ಸೋಮ ಕಾದಂಬರಿಯನ್ನು ಹುಬ್ಬಳ್ಳಿಯ ಸಾ"ತ್ಯ ಭಂಡಾರ ಪ್ರಕಾಶನದವರು ಪ್ರಕಟಿಸಿದರು. ಅಲ್ಲದೇ ಜೀವನ ಚರಿತ್ರೆಗಳಾದ ರಾಜಯೋಗಿಣಿ, ಪೂರ್ಣಜ್ಯ ಗಂಗಾಧರ, ಕರ್ಮಯೋಗಿ "ರಚಂದ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರು ಬಸವ ಕಾವ್ಯ ದರ್ಶನಂ ಮಹಾಕಾವ್ಯ, ಚೆತ್ಯ ಪಕ್ಷಿ, ಗಾನತರಂಗ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಚಿತ್ಪ್ರಭೆ, ರಜತ ದೀಪ್ತಿ, ವಿಶ್ವ ಪ್ರಭೆ, ದಾಂಪತ್ಯ ಧರ್ಮ, ಮಹಾಪ್ರಸಾದ, ಲಿಂಗ ಗೊಂಚಲು, ಗುದ್ಲಿ ಕಾಯಕ ಯೋಗಿ, ಮಹಾಂತ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಅಲ್ಲದೇ ಸ್ವಾ"ುಗಳ ಸ್ವಾಮಾರ, ಬಂಡೆದ್ದ ಬಾರಕೋಲು, ಮಹಾತಪಸ್ವಿ, ಕತ್ತಲೆ ಕಳೆದ ಬೆಳಕು, ಮಹಾಸಂಗಮ, ಜಗದಂಬೆ, ಮೌನಕೋಗಿಲೆ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಕನಕಾಂಬರಿ ಕಂಡೆ, ನಂದಿ ಬೆಟ್ಟದ ನಳಿ ಹುಡುಗಿ, ಸೀರೆಗೆ ಹುಟ್ಟಿದ ದೇವರ ಕೂಸು, ಜೋಗುಳ ಬಾ" ಜೋಗುತಿ ಮುಂತಾದ ಕಥಾ ಸಂಕಲನಗಳನ್ನು ಹನ್ನೆರಡುಮಠರು ರಚಿಸಿದ್ದಾರೆ.
ಜಿ.ಎಚ್.ಹನ್ನೆರಡುಮಠರು ರಚಿಸಿದ 'ಚಿತ್ತರಗಿ ಚಿಜ್ಯೋತಿ' ಕಾದಂಬರಿಯು 'ಮಹಾತಪಸ್ವಿ' ಎಂಬ ಚಲನಚಿತ್ರವಾಗಿ ಬಿಡುಗಡೆಗೊಂಡಿರುವದು "ಶೇಷ. 'ಕಾಮ-ಪ್ರೇಮ-ಸೋಮ' ಕಾದಂಬರಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಬಿ.ಎ. ಭಾಗ-1ಕ್ಕೆ ಕನ್ನಡ ಅವಶ್ಯಕ ಪಠ್ಯ "ಷಯವನ್ನಾಗಿ ಮಾಡಿತ್ತು. ಅಲ್ಲದೇ 'ರಾಜಯೋಗಿಣಿ ಕಾದಂಬರಿಯು ತೆಲಗು ಭಾಷೆಗೆ ಹಾಗೂ ಇಂಗ್ಲೀಷ ಭಾಷೆಗೆ ಅನುವಾದಗೊಂಡಿದೆ. ಇದು ಈಶ್ವರಿ ವಿಶ್ವ"ದ್ಯಾಲಯದ ದಾಖಲಾರ್ಹ ಚಾರಿತ್ರಿಕ ಕೃತಿಯಾಗಿದೆ. ಅವರ ಹಲವಾರು ಕ"ತೆಗಳು ಧ್ವನಿ ಸುರುಳಿಗಳಾಗಿ ಮೂಡಿ ಬಂದಿವೆ. ಅವುಗಳಲ್ಲಿ ಬಾರೆ ನೀರೆ ತಾರೆ ತಂಗಿ, ಗುಡ್ಡದ ಎಲ್ಲಮ್ಮ, ಶ್ರೀ "ಜಯ ಮಹಾಂತ ಮುಂತಾದ ಹಾಡಿನ ಧ್ವನಿಸುರಳಿಗಳು ಪ್ರಸಿದ್ಧಿ ಪಡೆದಿವೆ. ಸಾ"ತ್ಯ, ಸಂಸ್ಕೃತಿ, ಧರ್ಮ, ಯೋಗ, ಶಿಕ್ಷಣ, ಕಲೆ ಕುರಿತು ದೆಹಲಿ, ಕೋಲ್ಕತ್ತಾ, ಡೆಹರಾಡೂನ, ಅಬುಪರ್ವತ, ಚೆನ್ಯೈನಲ್ಲಿ ಉಪನ್ಯಾಸ ನೀಡಿದ್ದಾರೆ. 'ಪ್ರೊ.ಜಿ.ಎಚ್.ಹನ್ನೆರಡುಮಠರ ಸಮಗ್ರ ಸಾ"ತ್ಯ ಒಂದು ಅಧ್ಯಯನ' ಕುರಿತು ಕಾಮೇಶ ನರಸಿಂಗರಾವ್ ಅವರು ಕಲಬುರ್ಗಿ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ. ಪದವಿಪಡೆದಿದ್ದಾರೆ. ಕಾದಂಬರಿ, ನಾಟಕ, ಕಾವ್ಯ ಸಂಕಲನ, ವಿಡಂಬನೆ, ಕಥಾ ಸಂಕಲನ ಮುಂತಾದ ಸಾ"ತ್ಯ ಪ್ರಕಾರದಲ್ಲಿ ಸೇವೆ ಸಲ್ಲಿಸುತ್ತಲೆ ಬೆಂಗಳೂರಿನಲ್ಲಿ ಸಾ"ತ್ಯದ ಬದುಕನ್ನು ಜಿ.ಎಚ್.ಹನ್ನೆರಡುಮಠರು ನಡೆಸುತ್ತಿದ್ದಾರೆ.
ಜಿ.ಎಚ್.ಹನ್ನೆರಡುಮಠರು ಗದಗ ಜಿಲ್ಲೆಯ ರೋಣದ ಶೈಲಜಾ ಅವರನ್ನು 1968ರಲ್ಲಿ ಮದುವೆಯಾದರು. ಅವರಿಗೆ ಮೂರು ಮಕ್ಕಳು, ತೇಜಸ್ವಿ, ವಿಜಯಲಕ್ಷ್ಮೀ ಮತ್ತು ವಿಶ್ವ. ವಿಜಯಲಕ್ಷ್ಮೀ ಆರ್ಯುವೇದದಲ್ಲಿ ವೈದ್ಯೆ, ಸರಕಾರಿ ಕಾಲೇಜಿನಲ್ಲಿ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. "ಶ್ವ ಅಮೇರಿಕೆಯ ಎಚ್.ಪಿ.ಸಂಸ್ಥೆಯಲ್ಲಿ ಐ.ಟಿ. ಆಡಿಟ್ ಅಧಿಕಾರಿಯಾಗಿ ಕಾರ್ಯನಿರ್ವ"ಸುತ್ತಿದ್ದಾರೆ. ಅವರ ನಿವೃತ್ತಿ ಬದುಕಿನ ಎರಡು ತಿಂಗಳ ನಂತರ "ರಿಯ ಮಗ ತೇಜಸ್ವಿ ಮತ್ತು ಸೊಸೆ ದುರಂತ ಮರಣವನ್ನುಪ್ಪುತ್ತಾರೆ. ಆ ನೋ"ನಿಂದ ದೃತಿಗಡೆದ ಹನ್ನೆರಡುಮಠರು ಆತ್ಮಸ್ಥೈರ್ಯದಿಂದ ಬದುಕಿನ ಬಂಡಿಯನ್ನು ಮುನ್ನಡೆಸಿದರು. ಸಧ್ಯ ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ಸಾ"ತ್ಯ ರಚನೆಯೊಂದಿಗೆ "ಶ್ರಾಂತ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದಾರೆ.
ಆಧುನಿಕ ಕನ್ನಡ ಸಾ"ತ್ಯದಲ್ಲಿ ಶ್ರೇಷ್ಠ ಮೌಲ್ಯಗಳುಳ್ಳ ವ್ಯಕ್ತಿತ್ವ ಹನ್ನೆರಡುಮಠರದು. ಬದುಕು ಬರಹಗಳಲ್ಲಿ ಭೇಧವನ್ನು ಕಾಣದ "ಶಿಷ್ಠ ವ್ಯಕ್ತಿತ್ವ ಜಿ.ಎಚ್.ಹನ್ನೆರಡುಮಠರದು. ಬದುಕಿನಲ್ಲಿ ನೋವು ನಲಿವುಗಳ ಸಂಗಮದಲ್ಲಿಯೇ "ುಂದವರು. ಮಠಗಳ ಪರಂಪರೆಯಲ್ಲಿ ಮತ್ತು ಪರಿಸರದಲ್ಲಿ ಹುಟ್ಟಿ ಬಂದ, ಬೆಳೆದುಬಂದ ಜಿ.ಎಚ್.ಹನ್ನೆರಡುಮಠರು ಮಠಾಧೀಶರ ಜೀವನ ಚರಿತ್ರೆಗಳನ್ನು ಕಾದಂಬರಿಗಳಲ್ಲಿ ಆಪ್ತವಾಗಿ ಪರಿಚುಸಿದ್ದಾರೆ. ಹನ್ನೆರಡುಮಠರು ಬದುಕಿನುದ್ದಕ್ಕೂ ಮಠದ ಪರಿಸರಕ್ಕೆ ಅಂಟಿಕೊಂಡು ಬಂದರೂ ತಾವು ಕಂಡಂತಹ ಮಠಮಾನ್ಯಗಳ ಕಂದಾಚಾರಗಳನ್ನು ಯಾವ ಮುಲಾಜಿಲ್ಲದೆ ಖಂಡಿಸಿದ್ದಾರೆ. ಅವರ ಬಸವ ಪರಿಸರದ ಕಾದಂಬರಿಗಳನ್ನೆಲ್ಲ ಕೂಡಿಸಿ ಸಿ.ಎ.ಜಿ. ಪ್ರಕಾಶನವು ಸಂಪುಟ ರೂಪಿಸಿ ಪ್ರಕಟಿಸಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾಡಿನಲ್ಲಿ ಕೈವಲ್ಯ ಗ್ರಂಥಕ್ಕೆ ಹುಬ್ಬಳ್ಳಿ ಮೂರು ಸಾ"ರಮಠ ವಿಶೇಷ ಬಹುಮಾನ, ದಾಸೋಹ ದೀಪ್ತಿಗೆ ಮುರುಘಾಮಠದ ಬಹುಮಾನ, ವಿಜಯಪುರ ಜಿಲ್ಲಾ ರಾಜ್ಯೋತ್ಸವ ಸನ್ಮಾನ, ಬಾಗಕೋಟೆ ಜಿಲ್ಲೆಯ ಎಂಟನೆಯ ಜಿಲ್ಲಾಮಟ್ಟದ ಕನ್ನಡ ಸಾ"ತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ, ರಮಣ ಶ್ರೀ ಸಾ"ತ್ಯ ಪ್ರಶಸ್ತಿ, ಶರಣ ಸಾ"ತ್ಯ ಪ್ರಶಸ್ತಿ, ರಂಗಶ್ರೀ ಪ್ರಶಸ್ತಿ "ಗೆ ಹಲವು ಪ್ರಶಸ್ತಿ-ಪುರಸ್ಕಾರಗಳು ಅವರ ಸಾ"ತ್ಯ ಸೇವೆಗೆ ಲಭಿಸಿವೆ.
ಸುರೇಶ ಗುದಗನವರ
ಲೇಖಕರು
ರಾಮದುರ್ಗ