ಸಾಮಾಜಿಕ ಅನಿಷ್ಠಗಳ ವಿರುದ್ಧ ವಚನ ಚಳುವಳಿ ರೂಪಿಸಿದ್ದ ಶರಣರು ಕಾಯಕದಲ್ಲಿ ನಂಬಿಕೆ ಇಟ್ಟಿದ್ದರು
Sharan, who formed the Vachana movement against social injustices, believed in Kayaka.
ಧಾರವಾಡ ಫೆ.10: 12 ನೇ ಶತಮಾನದ ಬಸವಣ್ಣನವರ ನೇತೃತ್ವದಲ್ಲಿ ಅನೇಕ ಶರಣರು ರಚಿಸಿರುವ ವಚನಗಳಲ್ಲಿ ಜೀವನ ಮೌಲ್ಯಗಳಿವೆ. ನಮ್ಮ ಪೂರ್ವಜರು ಪ್ರಾಮಾಣಿಕತೆ ಹೊಂದಿದ್ದರು ಮತ್ತು ಅವರು ಮಾಡುವ ಕಾಯಕದಲ್ಲಿ ನಂಬಿಕೆ ಇಟ್ಟಿದ್ದರು ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಅವರು ಹೇಳಿದರು.
ಅವರು ಇಂದು (ಫೆ. 10) ಬೆಳಿಗ್ಗೆ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಾರೆ್ಪಣ ಮಾಡಿ, ಮಾತನಾಡಿದರು.
ಪೂರ್ವಜರಲ್ಲಿ ಇದ್ದ ಪ್ರಾಮಾಣಿಕತೆ, ಬದ್ಧತೆ ಮತ್ತು ನಂಬಿಕೆಗಳು ಇಂದಿನ ಸಾಮಾಜದಲ್ಲಿ ಕಡಿಮೆಯಾಗಿವೆ. ಸಾಮಾಜದಲ್ಲಿ ಪರಸ್ಪರ ಅಪನಂಬಿಕೆ, ಅಸಹಿಷ್ಣುತೆ ಹೆಚ್ಚಾಗುತ್ತಿದೆ. ವಚನಗಳನ್ನು ಅಧ್ಯಯನ ಮಾಡಿ, ಅಳವಡಿಸಿಕೊಂಡಲ್ಲಿ ಪರಸ್ಪರರು ವ್ಯಕ್ತಿ ಗೌರವ ಮತ್ತು ಸಹಕಾರದಿಂದ ಬದುಕಬಹುದಾಗಿದೆ ಎಂದು ಹೇಳಿದರು.
ಬಸವಣ್ಣನ ಕಾಲದಲ್ಲಿ ನಾಡಿನ ಅನೇಕ ಸ್ಥಳಗಳಿಂದ ಆಗಮಿಸಿದ್ದ ಶರಣರು ತಮ್ಮ ಕಾಯಕದೊಂದಿಗೆ ಸಾಮಾಜಿಕ ಬದಲಾವಣೆ ಮತ್ತು ಸುಧಾರಣೆಗಾಗಿ ವಚನಗಳನ್ನು ರಚಿಸಿ, ಮಾರ್ಗದರ್ಶನ ಮಾಡಿದರು. ಅಂದು ಅಸ್ತಿತ್ವದಲ್ಲಿದ್ದ ಕಂದಾಚಾರಗಳನ್ನು, ಸಾಮಾಜಿಕ ಅನಿಷ್ಠಗಳನ್ನು ವಚನಗಳ ಮೂಲಕ ವಿರೋಧಿಸಿದರು. ಹೊಸ ಪರಂಪರೆಗೆ ಪ್ರೋತ್ಸಾಹಿಸಿದರು. ಮಾಡುವ ಕಾಯಕ ಶ್ರೇಷ್ಠವೆಂದು ಅವರು ಸಾರಿದರು. ಆ ಮೂಲಕ ಸಾಮಾಜದಲ್ಲಿ ಸಮಾನತೆ, ಶಾಂತಿ, ಸೌರ್ಹಾದತೆಯನ್ನು ಹೆಚ್ಚಿಸಲು ಪ್ರಯತ್ನಿಸಿದರು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಅನೇಕ ಸಮಾಜದ ಕಾಯಕದ ಶರಣರನ್ನು ಗುರುತಿಸಿ, ಗೌರವಿಸಲು ಸರ್ಕಾರವು ಕಾಯಕ ಶರಣರ ಜಯಂತಿಯನ್ನು ಆಚರಿಸುತ್ತಿದೆ. ವಿಶೇಷವಾಗಿ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗಪೆದ್ದಿ ಶರಣರ ಜೀವನ ಸಾಧನೆಗಳನ್ನು ಮತ್ತು ತತ್ವ, ಬೋಧನೆಗಳನ್ನು ಸಮಾಜಕ್ಕೆ ಪರಿಚಯಿಸಿ, ಪ್ರಸ್ತುತಪಡಿಸುವ ಕಾರ್ಯವನ್ನು ಈ ಜಯಂತಿಯಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದರು.
ಮೇಲು ಕೀಳು, ಹೆಣ್ಣು ಗಂಡು ಮತ್ತು ಮೇಲ್ಜಾತಿ ಕೆಳಜಾತಿ ಎಂಬ ಅಸಮಾನತೆ ಹೊಂದಿದ್ದ ಸಮಾಜದಲ್ಲಿ ಕಾಯಕವನ್ನು ಜೀವನದ ಸಾಧನವನ್ನಾಗಿ ಮಾಡಿಕೊಂಡು ಬದುಕಿದ್ದ ಶರಣರು ತಮ್ಮ ಕಾಯಕವನ್ನು ಜಾತಿಗೆ ಸೇರಿಸಿಲ್ಲ. ಜಾತಿಯತೆಯನ್ನು ವಿರೋಧಿಸಿ ತಮ್ಮ ವಚನಗಳನ್ನು ರಚಿಸಿದ್ದಾರೆ. ಇಂದಿನ ಸಮಾಜಕ್ಕೆ ವಿಶೇಷವಾಗಿ ಯುವಸಮೂಹಕ್ಕೆ ವಚನಗಳನ್ನು ಪರಿಚಯಿಸಿ, ಅದರಲ್ಲಿನ ತಿರುಳನ್ನು ತಿಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಶರಣ ಕುರಿತು ರಂಜಾನ ದರ್ಗಾ, ಡಾ. ಮಾಲತೇಶ ಪೂಜಾರ, ಡಾ. ಗಂಗಾಧರ ಗಣಪತಿ ಗರಗ ಹಾಗೂ ಬಿ.ಪಿ. ಮಲ್ಲೂರ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ರವಿ ಕುಲಕರ್ಣಿ ಅವರು ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಲಕ್ಷ್ಮಣ ಬಕಾಯಿ ಸೇರಿದಂತೆ ಧಾರವಾಡ ಜಿಲ್ಲಾ ಕಾಯಕ ಶರಣರ ಸಂಘ-ಸಂಸ್ಥೆಗಳು ಹಾಗೂ ಕಾಯಕ ಸಮಾಜದ ಅಧ್ಯಕ್ಷರು, ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 