ಸಂಜಯ್ ರಾವತ್ ಆರೋಗ್ಯ ವಿಚಾರಿಸಿದ ಶರದ್ ಪವಾರ್

ಮುಂಬೈ,  ನ 12  :       ಅಸ್ವಸ್ಥತೆಯಿಂದಾಗಿ   ಇಲ್ಲಿನ   ಲೀಲಾವತಿ  ಆಸ್ಪತ್ರೆಗೆ  ದಾಖಲಾಗಿರುವ ಶಿವಸೇನೆ  ಹಿರಿಯ ನಾಯಕ ಸಂಜಯ್  ರಾವತ್  ಅವರನ್ನು   ಮಂಗಳವಾರ  ಬೆಳಗ್ಗೆ   ಎನ್ ಸಿ ಪಿ   ಪರಮೋಚ್ಛ ನಾಯಕ  ಶರದ್ ಪವಾರ್   ಭೇಟಿ  ಮಾಡಿ   ಆರೋಗ್ಯ ಕುರಿತು   ವಿಚಾರಿಸಿದರು.    ಸೋಮವಾರ  ಅಪರಾಹ್ನ    ಸ್ವಲ್ಪ   ಎದೆ ನೋವು  ಕಾಣಿಸಿಕೊಂಡ  ಕೂಡಲೇ  ರಾವತ್   ಅವರನ್ನು   ಲೀಲಾವತಿ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿಯಮಿತ ಆರೋಗ್ಯ ತಪಾಸಣೆಗಾಗಿ ಕೆಲವು ದಿನಗಳ ಹಿಂದೆ  ಆಸ್ಪತ್ರೆಗೆ  ರಾವತ್  ಬಂದಿದ್ದಾಗ, ಇಸಿಜಿ ಪರೀಕ್ಷೆಯ ನಂತರ ಹೆಚ್ಚಿನ ಪರೀಕ್ಷೆಗಳಿಗೆ ಒಳಗಾಗುವಂತೆ  ವೈದ್ಯರು ಸಲಹೆ  ನೀಡಿದ್ದರು  ಎಂದು ಲೀಲಾವತಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.        ಅಲ್ಲದೆ,  ರಾವತ್  ಅವರನ್ನು ಭೇಟಿಯಾಗಲು   ಶರದ್  ಪವಾರ್   ಆಸ್ಪತ್ರೆ ಬಳಿ   ಆಗಮಿಸುತ್ತಿದ್ದಂತೆಯೇ  ನೂರಾರು  ಮಾಧ್ಯಮಗಳ  ಪ್ರತಿನಿಧಿಗಳು ಅವರನ್ನು ಸುತ್ತುವರಿದ  ಕಾರಣ ಅವರ ಕೆಲಕಾಲ  ಗೊಂದಲವಾಗಿ ಪರಿಣಮಿಸಿತು.  ಸರ್ಕಾರ ರಚನೆಗೆ ಕಾಂಗ್ರೆಸ್  ಕಡೆಯಿಂದ   ಅಡ್ಡಿಯಾಗುತ್ತಿದೆಯೇ?   ಎಂಬ ಮಾಧ್ಯಮಗಳ  ಪ್ರಶ್ನೆಗೆ, ಕಾಂಗ್ರೆಸ್ ಜೊತೆ  ನಾನು ಮಾತನಾಡುತ್ತೇನೆ  ಎಂದಷ್ಟೇ   ಪವಾರ್  ಉತ್ತರಿಸಿದರು.  ಕಾಂಗ್ರೆಸ್ ಮತ್ತು ಎನ್ಸಿಪಿ ನಡುವೆ  ಇಂದು ಸಭೆ  ನಡೆಯಲಿದೆಯೇ  ಎಂಬ  ಪ್ರಶ್ನೆಗೆ    ಸಭೆ ನಡೆಯಲಿದೆ ಎಂದು ಯಾರು ಪ್ರಕಟಿಸಿದ್ದಾರೆ?  ಎಂದು ಮರು ಪ್ರಶ್ನಿಸಿದ  ಪವಾರ್,  ಸಭೆಯ ಬಗ್ಗೆ ನನಗೇನು  ಗೊತ್ತಿಲ್ಲ  ಎಂದು ಉತ್ತರಿಸಿದರು.