ಅಣ್ಣನ ಮಗ ಅಜಿತ್ ಪವಾರ್ ಎಸಗಿದ್ದ ತಪ್ಪನ್ನು ಕ್ಷಮಿಸಿದ ಚಿಕ್ಕಪ್ಪ ಶರದ್ ಪವಾರ್ ...!

sharat pawar

ಮುಂಬೈ,  ನ 27 - ಎನ್‌ಸಿಪಿಯ ಬಂಡುಕೋರ ನಾಯಕ,  ಪಕ್ಷದ ಪರಮೋಚ್ಛನಾಯಕ ಶರದ್ ಪವಾರ್  ಅಣ್ಣನ ಮಗ  ಅಜಿತ್ ಪವಾರ್ ಅಂತಿಮವಾಗಿ ಮೌನ ಮುರಿದಿದ್ದು,  ತಾವು ಈಗಲೂ  ಎನ್‌ಸಿಪಿಯಲ್ಲಿದ್ದು,  ಭವಿಷ್ಯದಲ್ಲೂ ಎನ್‌ಸಿಪಿಯಲ್ಲಿಯೇ  ಮುಂದುವರಿಯಲಿದ್ದೇನೆ   ಎಂದು ಸ್ಪಷ್ಟಪಡಿಸಿದ್ದಾರೆ. 

ಪಕ್ಷವನ್ನು ನಾನು ಎಂದೂ  ತೊರೆದಿಲ್ಲ. ಎನ್‌ಸಿಪಿಯಲ್ಲಿಯೇ ಇದ್ದೇನೆ. ಎನ್‌ಸಿಪಿಯೊಂದಿಗೆ ಮುಂದುವರಿಯುತ್ತೇನೆ. ನನ್ನನ್ನು ಪಕ್ಷದಿಂದ ಅಮಾನತುಗೊಳಿಸಿದ್ದಾರ..?  ಎಂದು ಪ್ರಶ್ನಿಸಿ.   ಅಂತಹದೇನು  ನಡೆದಿಲ್ಲವಲ್ಲ  ಎಂದು  ಹೇಳಿದ್ದಾರೆ. 

ಮಾಧ್ಯಮಗಳು ನನ್ನ  ವಿಷಯದಲ್ಲಿ  ತಪ್ಪು  ಸುದ್ದಿಗಳನ್ನು  ಬಿತ್ತರಗೊಳ್ಳುತ್ತಿವೆ.  ಸೂಕ್ತ  ಸಮಯದಲ್ಲಿ   ಇದಕ್ಕೆ ಉತ್ತರಿಸುತ್ತೇನೆ  ಎಂದು ಅಜಿತ್ ಪವಾರ್ ಬುಧವಾರ ಮಾಧ್ಯಮಗಳಿಗೆ ತಿಳಿಸಿದರು.

ಅಣ್ಣನನ್ನು ಅಪ್ಪಿಕೊಂಡ ಸುಪ್ರಿಯಾ ಸುಳೆ; ಪಕ್ಷದ ಪರಮೋಚ್ಛನಾಯಕ  ಶರದ್ ಪವಾರ್ ವಿರುದ್ಧ ಅಜಿತ್ ಪವಾರ್ ಬಂಡೆದಿದ್ದರು. ಶಿವಸೇನೆ ಜೊತೆ ಸೇರಿ  ಸರ್ಕಾರ ರಚಿಸಲು  ಶರದ್ ಪವಾರ್  ಸಿದ್ಧತೆ ನಡೆಸುತ್ತಿದ್ದಾಗ,  ಕೊನೆಯ ಕ್ಷಣದಲ್ಲಿ  ಅಜಿತ್  ಪವಾರ್   ಪ್ಲೇಟ್  ಬದಲಿಸಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು.  ಅಲ್ಲದೆ  ಬಿಜೆಪಿ  ಸರ್ಕಾರ ರಚಿಸಲು  ಬೆಂಬಲ ವ್ಯಕ್ತಪಡಿಸಿ  ರಾಜ್ಯಪಾಲರಿಗೆ   ಎನ್ ಸಿಪಿ ಶಾಸಕರ ಪತ್ರ ನೀಡಿ... ಉಪಮುಖ್ಯಮಂತ್ರಿಯಾಗಿಯೂ  ಪ್ರಮಾಣ ವಚನ ಸ್ವೀಕರಿಸಿದ್ದರು ನಂತರ  ಎಲ್ಲ  ಎನ್‌ಸಿಪಿ ಶಾಸಕರು   ಶರದ್ ಪವಾರ್  ಅವರ  ಬೆಂಬಲಕ್ಕೆ ಒಗ್ಗಟ್ಟಿನಿಂದ  ನಿಂತುಕೊಂಡಾಗ,   ಅನ್ಯಮಾರ್ಗ ವಿಲ್ಲದೆ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ,  ಬಿಜೆಪಿ ಸರ್ಕಾರಅಧಿಕಾರದಿಂದ ಕಳೆದುಕೊಳ್ಳುವಂತಾಗಿದೆ.  ಈಗಾಗಿ  ಅಜಿತ್ ಪವಾರ್  ಮತ್ತೆ ಎನ್‌ಸಿಪಿ ಗೂಡು ಸೇರಿದ್ದಾರೆ.  ಬಂಡಾಯ   ವಿಷಯದಲ್ಲಿ  ಪವಾರ್ ಕುಟುಂಬದೊಳಗೆ ಕಂಡುಬಂದಿದ್ದ  ಭಿನ್ನಾಭಿಪ್ರಾಯಗಳು ಕೂಡ ಈಗ  ಬಗೆಹರಿದಿದೆ ಎಂದು ಹೇಳಲಾಗಿದೆ. ವಿಧಾನಸಭೆಯ ಬಳಿ ಸಹೋದರ ಅಜಿತ್ ಪವಾರ್ ಅವರನ್ನು ಸುಪ್ರಿಯಾ ಸುಳೆ  ಆತ್ಮೀಯತೆಯಿಂದ  ಅಪ್ಪಿಕೊಂಡು  ಸ್ವಾಗತ ಕೋರುವ ಮೂಲಕ  ನಮ್ಮ ನಡುವೆ ಯಾವುದೇ  ವೈಮಸ್ಸು  ಇಲ್ಲ  ಎಂಬುದನ್ನು  ಪ್ರದರ್ಶಿಸಿದ್ದಾರೆ.  

ಶರದ್ ಪವಾರ್, ಕ್ಷಮಿಸಿ!

ಪಕ್ಷದ ವಿರುದ್ದ   ಬಂಡೆದ್ದು   ಬಿಜೆಪಿಗೆ ಬೆಂಬಲ ಘೋಷಿಸಿದ್ದ   ಅಜಿತ್ ಪವಾರ್  ಅವರಿಗೆ   ಪಕ್ಷದ  ಪರಮೋಚ್ಛನಾಯಕ ಶರದ್ ಪವಾರ್ ಕ್ಷಮಾದಾನ ನೀಡಿದ್ದಾರಂತೆ.  ಎನ್‌ಸಿಪಿ ಹಿರಿಯ ನಾಯಕ ನವಾಬ್ ಮಲಿಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.  ಅಂತಿಮವಾಗಿ ಅಜಿತ್ ಪವಾರ್ ತಮ್ಮಿಂದಾಗಿರುವ  ತಪ್ಪನ್ನು   ಒಪ್ಪಿಕೊಂಡಿದ್ದಾರೆ. ಇದು  ಕುಟುಂಬ ವ್ಯವಹಾರ  ಪವಾರ್ ಸಾಹೇಬರು    ಅಣ್ಣನ  ಮಗ ಅಜಿತ್ ಪವಾರ್ ಅವರನ್ನು ಕ್ಷಮಿಸಿದ್ದಾರೆ. ಅವರು ಪಕ್ಷದಲ್ಲಿಯೇ ಇದ್ದು,   ಪಕ್ಷದಲ್ಲಿನ ಅವರ ಸ್ಥಾನಮಾನದಲ್ಲಿ  ಯಾವುದೇ ಬದಲಾವಣೆಯಾಗಿಲ್ಲ ಎಂದು ನವಾಬ್ ಮಲಿಕ್ ಸ್ಪಷ್ಟನೆ   ನೀಡಿದ್ದಾರೆ.