ಬರಾಕ್ಪೋರ್ ಸೆ 17 ಬಹುಕೋಟಿ ಶಾರದ ಚಿಟ್ ಫಂಡ್ ಹಗರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ವಿಭಾಗದ ಎಡಿಜಿ ಅಧಿಕಾರಿ ರಾಜೀವ್ ಕುಮಾರ್ ಅವರ ಜಾಮೀನು ಮನವಿಯನ್ನು ಬರಾಸತ್ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿ, ಇದು ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಹೊಂದಿಲ್ಲ ಎಂದೂ ಅಭಿಪ್ರಾಯಪಟ್ಟಿದೆ.
ಸಂಸದರು ಮತ್ತು ಶಾಸಕರಿಗೆ ಮಾತ್ರ ಸೀಮಿವಾದ ವಿಚಾರಣಾ ನ್ಯಾಯಾಲಯವಾಗಿದೆ ಆದ್ದರಿಂದ ಕುಮಾರ್ ಅವರು ಜಿಲ್ಲಾ ಇಲ್ಲವೆ ಸೆಷನ್ಸ್ ನ್ಯಾಯಾಲಯಕ್ಕೆ ಹೋಗಬಹುದು ಎಂದೂ ಸಲಹೆ ಮಾಡಿದೆ. ಆದರ ಪ್ರಕಾರ ಕುಮಾರ್ ಅವರ ವಕೀಲರು ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಎಂದೂ ವರದಿಯಾಗಿದ್ದು,ಬಂಧನ ಬೀತಿ ಎದುರಾಗಿದೆ.ಆದರೂ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ತನ್ನ ಮುಂದೆ ವಿಚಾರಣೆಗೆ ಹಾಜರಾಗಬೇಕಿರುವ ಹಿರಿಯ ಐಪಿಎಸ್ ರಾಜೀವ್ ಕುಮಾರ್ ಎಲ್ಲಿದ್ದಾರೆ ಎಲ್ಲಿ ಅಡಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಹಾಯ ಮಾಡುವಂತೆ ಸಿಬಿಐ ಪಶ್ಚಿಮ ಬಂಗಾಳ ಸರ್ಕಾರವನ್ನು ಕೋರಿದೆ.
ಬಹುಕೋಟಿ ಶಾರದ ಚಿಟ್ ಫಂಡ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ಕೊಲ್ಕತ್ತಾ ಹೈಕೋರ್ಟ್ ಆದೇಶದಂತೆ ವಿಚಾರಣೆ ನೆಡಸಲು ತನ್ನ ಮುಂದೆ ಹಾಜರಾಗುವಂತೆ ರಾಜೀವ್ ಕುಮಾರ್ ಅವರಿಗೆ ತಾಕೀತು ಮಾಡಿದೆ. ಸಮನ್ಸ್ ನೋಟೀಸ್ ಗಳನ್ನು ಧಿಕ್ಕರಿಸಿರುವ ಮಾಜಿ ಪೊಲೀಸ್ ಅಧಿಕಾರಿ ವಿರುದ್ದ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸುವಂತೆ ಬರಾಸತ್ ನ್ಯಾಯಾಲಯವನ್ನು ಕೋರಿದೆ.
ಸಿಬಿಐ ವಿಚಾರಣೆಯಿಂದ ತಕ್ಷಣದ ಪರಿಹಾರ ಪಡೆಯಲು ಪೊಲೀಸ್ ಅಧಿಕಾರಿ ಮುಂದಾಗುವ ಸಾಧ್ಯತೆಯ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಗೆ ಕೇವಿಯಟ್ ಹಾಕಲು ಸಿಬಿಐ ಚಿಂತನೆ ಮಾಡುತ್ತಿದೆ ಎಂದೂ ಹೇಳಲಾಗಿದೆ.