ಶಂಕರಾಚಾರ್ಯರ ಜಯಂತ್ಯೋತ್ಸವ: ಅದ್ದೂರಿ ಮೆರವಣಿಗೆ

ಲೋಕದರ್ಶನ ವರದಿ

ರಾಣೇಬೆನ್ನೂರು19: ಆದಿ ಗುರು ಶಂಕರಾಚಾರ್ಯರ ಜಯಂತೋತ್ಸವದ ಅಂಗವಾಗಿ ಶನಿವಾರ ರಾತ್ರಿ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆಯು ವೈವಿಧ್ಯಮಯ ವಾಧ್ಯ ಮೇಳಗಳೊಂದಿಗೆ ಹಾಗೂ ಭಕ್ತ ಸಮೂಹದ ಮಧ್ಯ ನಗರದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿತು.

    ಅಂಚೆ ವೃತ್ತದ ಬಳಿ ಇರುವ ನಾಗರಾಜ ದೀಕ್ಷಿತ ಅವರ ಮನೆಯಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆನಂತರ ಕೋಟೆಯ ಶಂಕರಮಠಕ್ಕೆ ತಲುಪಿತು. ಮೆರವಣಿಗೆಗೆ ಶಾಸಕ ಆರ್.ಶಂಕರ ಚಾಲನೆ ನೀಡಿದರು. ಮೆರವಣಿಗೆಯ ದಾರಿಯುದ್ದಕ್ಕೂ ಭಕ್ತರು ನೀರು ಹಾಕಿ ಹಸಿರು ತೋರಣಗಳಿಂದ ಶೃಂಗರಿಸಿದ್ದು ಕಂಡು ಬಂದಿತು.

   ಭಕ್ತರು ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು. ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು. ಸಡಗರದ ಈ ಮಹೋತ್ಸವದಲ್ಲಿ ಅನೇಕ ಭಕ್ತರು ನೃತ್ಯ ಮಾಡಿದ್ದು ವಿಶೇಷವಾಗಿತ್ತು.

  ಶಿವಮೂತರ್ಿ ಜೊಯ್ಸ, ಚಿದಂಬರ ಜೋಷಿ, ನಾಗರಾಜ ಕುಲಕಣರ್ಿ, ಡಾ. ಬಸವರಾಜ ಕೇಲಗಾರ, ಡಾ. ಸಂಜಯ ನಾಯಕ, ಎ.ಎಂ.ನಾಯಕ, ಡಿ.ಸಿ.ಕುಲಕಣರ್ಿ, ಡಾ. ಶಶಿಧರ ವೈಧ್ಯ, ಭೀಮರಾವ ಕುಲಕಣರ್ಿ, ಗುರುರಾಜ ನಾಡಿಗೇರ, ಅರುಣ ಮುದ್ರಿ, ಶ್ರೀಪಾದ ಕುಲಕಣರ್ಿ, ವಿನಾಯಕ ಜೋಷಿ, ರವಿಂದ್ರ ವರಗಿರಿ ಮತ್ತಿತರರು ಮೆರವಣಿಗೆಯಲ್ಲಿ ಇದ್ದರು.