ಶನೇಶ್ವರ ಜಯಂತ್ಯೋತ್ಸವ ನಿಮಿತ್ತ ಶನೇಶ್ವರ ದೇವನ ಪ್ರತಿಮೆಗೆ ತೈಲಾಭಿಷೇಕ

ಕಂಪ್ಲಿ.22ಪಟ್ಟಣದ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ಶನೇಶ್ವರ ಜಯಂತ್ಯುತ್ಸವ ನಿಮಿತ್ತ ಶನೇಶ್ವರ ದೇವನ ಪ್ರತಿಮೆಗೆ ತೈಲಾಭಿಷೇಕ ಸೇರಿ ನಾನಾ ಪೂಜೆಗಳು ನೆರವೇರಿದವು. ಶನೈಶ್ಚರ ಜಯಂತಿ ನಿಮಿತ್ತ ಶನಿಶ್ವರ ಮೂತರ್ಿಗೆ ಪಂಚಾಮೃತ ಸಹಿತ ಏಕಾದಶ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ತಿಲ ತೈಲಾಭಿಷೇಕ, ಅಷ್ಟೋತ್ತರ ಸಂಖ್ಯಾ ಸಹಿತ ಏಕ ಮಂತ್ರಪೂರ್ವಕ ಮಹಾಪೂಜೆ, ಮಹಾಗಣಪತಿ, ಆದಿತ್ಯಾಧಿ ನವಗ್ರಹ ಸಹಿತ, ಶನೈಶ್ಚರ ಅಷ್ಟೋತ್ತರ  ಸಂಖ್ಯಾ ವೇದ ಮಂತ್ರ   ಸಹಿತವಾದ ತೀಲಾ ಹೋಮ, ಲೋಕ ಕಲ್ಯಾಣಾರ್ಥ ಕರೊನಾ ಮುಕ್ತತತೆಗಾಗಿ ಪುರುಷ ಸೂಕ್ತ, ಶ್ರೀ ಸೂಕ್ತ ಮೃತ್ಯುಂಜಯ ಹೋಮಾದಿಗಳು ಶ್ರದ್ಧಾಭಕ್ತಿಗಳಿಂದ ನೆರವೇರಿದವು. ನೀತಾ ಜಗದೀಶ ರಾಯ್ಕರ್ ದಂಪತಿಗಳಿಂದ ಬ್ರಾಹ್ಮಣ ದಂಪತಿ ಪೂಜಾ, ಅನ್ನ ಸಂತರ್ಪಣಾ ಸೇವೆ ಜರುಗಿದವು. ಶನೀಶ್ವರ ಪ್ರತಿಮೆಯನ್ನು ಫಲ ಪುಷ್ಪಾಧಿಗಳಿಂದ ಅಲಂಕರಿಸಲಾಗಿತ್ತು.  

ಇಲ್ಲಿನ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಮಾತನಾಡಿ, ಮಾನವ ಜೀವಿತದ ಆಗು ಹೋಗುಗಳಿಗೆಲ್ಲ ಪರಮಾತ್ಮ ಶನಿದೇವರ ಪ್ರತೀಕವಾಗಿದೆ. ಮನುಷ್ಯ ಭಯಭೀತಿ ರೋಗ ರುಜಿನಿಗಳಿಗೆ ಸೂರ್ಯಪುತ್ರ ಶನಿದೇವನೆ ಕಾರಣನಾಗಿದ್ದಾನೆ. ಶನಿದೇವ ಅಭಯಪ್ರದಾನನೂ ಆಗಿದ್ದಾನೆ. ಕಡು ನಿಷ್ಠುರವಾದಿಯಾಗಿ   ಮಾನವ  ಧರ್ಮ ಉತ್ಥಾನಕ್ಕೂ, ಕದನ ಕ್ರಾಂತಿಗಳಿಗೂ ಕಾರಣೀಭೂತನಾಗಿದ್ದಾನೆ. ಶ್ವಾಸಕೋಶ, ನರದೌರ್ಬಲ್ಯ ರೋಗಗಳಿಗೆ ಕಾರಣನಾಗಿದ್ದರೂ ಆರೋಗ್ಯದಾಯಕನಾಗಿದ್ದಾನೆ. ಶನಿಶ್ಚರನ ಆರಾಧನೆಯಿಂದ ಸಕಲ ರೋಗ, ಅನಿಷ್ಟ ಪರಿಹಾರವಾಗಿ ಸುಖ ಸಂತಸ   ವಾತಾವರಣವನ್ನುಂಟು ಮಾಡುತ್ತಾನೆ. ತದೇಕಭಾವದಿಂದ ಶನಿದೇವರನ್ನು ಧ್ಯಾನಿಸಿ ಧನ್ಯರಾಗಬೇಕು ಎಂದು ಹೇಳಿದರು. 

  ಶನೀಶ್ಚರ ಜಯಂತ್ಯುತ್ಸವ ಕಾರ್ಯಕ್ರಮಗಳಲ್ಲಿ ವೈಷ್ಣವಿ ಶ್ರೀಕೃಷ್ಣಮೂತರ್ಿ, ಸುಧಾ ನಾಗರಾಜ, ಲಲಿತಾರಾಣಿ ಶ್ರೀ ಗಿರೀಶ್ ನರಗುಂದ, ರೂಪಶ್ರೀ ಗುರುಪ್ರಸಾದ್, ಸವಿತಾ ಶ್ರೀಧರ್, ಭಗವತಿ, ಅಶ್ವತ್ಥನಾರಾಯಣ, ಸುದೇಂದ್ರ ಕುಲಕಣರ್ಿ ಸೇರಿ ಸದ್ಭಕ್ತರು ಶ್ರದ್ಧಾಭಕ್ತಿಗಳಿಂದ ಪಾಲ್ಗೊಂಡಿದ್ದರು.